ನಟಿ ಸುಧಾರಾಣಿಗೆ ಒಂದು ಗಂಟೆ ಕಾಯಿಸಿದ ಆಸ್ಪತ್ರೆ: ಕಮಿಷನರ್ ಕರೆ ಮಾಡಿದ ನಂತರ ಅಡ್ಮಿಟ್

ಖ್ಯಾತ ನಟಿ ಸುಧಾರಾಣಿ ಅಣ್ಣನ ಮಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಪರದಾಟ ನಡೆಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ಅಡ್ಮಿಟ್ ಮಾಡಿಕೊಳ್ಳದೇ ಆಸ್ಪತ್ರೆ ಹೊರಗೆ ಸುಮಾರು ಒಂದು ಗಂಟೆ ಸಮಯ ಕಾಯಿಸಿದ್ದಾರೆ.
ಸುಧಾರಾಣಿ
ಸುಧಾರಾಣಿ

ಬೆಂಗಳೂರು: ಖ್ಯಾತ ನಟಿ ಸುಧಾರಾಣಿ ಅಣ್ಣನ ಮಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಪರದಾಟ ನಡೆಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ಅಡ್ಮಿಟ್ ಮಾಡಿಕೊಳ್ಳದೇ ಆಸ್ಪತ್ರೆ ಹೊರಗೆ ಸುಮಾರು ಒಂದು ಗಂಟೆ ಸಮಯ ಕಾಯಿಸಿದ್ದಾರೆ.

ನಿನ್ನೆ ತಡರಾತ್ರಿ ಸುಧಾರಾಣಿ ಅಣ್ಣನ ಪುತ್ರಿ ಕಿಡ್ನಿ ಸ್ಟೋನ್ ಸಮಸ್ಯೆ ಯಿಂದಾಗಿ ತಲೆ ಸುತ್ತು ಬಿದ್ದಾರೆ. ಹೀಗಾಗಿ ನಟಿ ಸುಧಾರಾಣಿ ಆಕೆಯನ್ನು ಕರೆದುಕೊಂಡು ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಆ್ಯಂಬುಲೆನ್ಸ್​​ನಲ್ಲಿ ಬಂದಿದ್ದಾರೆ.‌ ಈ ವೇಳೆ ಆಸ್ಪತ್ರೆಯವರು ಬೆಡ್, ವೆಂಟಿಲೇಟರ್ ಇಲ್ಲ ಅಂತ ಬೇಜವಾಬ್ದಾರಿ ಯಿಂದ ವರ್ತಿಸಿದ್ದಾರೆ. ಚಿಕಿತ್ಸೆ ಕೊಡಲು ಅಪೊಲೋ ಆಸ್ಪತ್ರೆ ಮಂಡಳಿ ನಿರಾಕರಿಸಿದೆ. ಕಳೆದ 3-4 ವರ್ಷಗಳಿಂದ ಸುಧಾರಾಣಿ ಸಂಬಂಧಿ ಅಪೋಲೋ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

ಹೀಗಾಗಿ ಆಸ್ಪತ್ರೆ ವಿರುದ್ಧ ನಟಿ ಸುಧಾರಾಣಿ ಗರಂ ಆಗಿದ್ದಾರೆ. ತಡ ರಾತ್ರಿ 10 ಗಂಟೆ ಯಿಂದ 11 ಗಂಟೆವರೆಗೂ ಅಂದರೆ ಒಂದು ಗಂಟೆಗಳ ಕಾಲ ಗೇಟ್​ನಿಂದ ಹೊರ ನಿಲ್ಲಿಸಿ ನಟಿ ಸುಧಾರಾಣಿಗೆ ಅಪೋಲೊ ಆಸ್ಪತ್ರೆ ಸಿಬ್ಬಂದಿ ಆಟವಾಡಿಸಿದ್ದಾರೆ. ಇದು ಅವರಿಗೆ ಬೇಸರ ಮೂಡಿಸಿದೆ. ಇದರಿಂದ ಬೇಸತ್ತು ಕೊನೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬಳಿಕ ಆಸ್ಪತ್ರೆ ಒಳಗೆ ದಾಖಲಾತಿ ನೀಡಲಾಗಿದೆ.‌

ವೈದ್ಯರು ದೇವರ ಸಮಾನ ಅಂತೀವಿ. ಆದ್ರೆ ಇಲ್ಲಿ‌‌ನ ಪರಿಸ್ಥಿತಿ ಯೇ ಬೇರೆ ಇದೆ.‌ ನಮ್ಮನ್ನು ರಾತ್ರಿ ಒಂದು ಗಂಟೆಗಳ ಕಾಲ ಹೊರ ನಿಲ್ಲಿಸಿದ್ದರು. ಕಮಿಷನರ್ ಗೆ ಫೋನ್ ಮಾಡಿದ ಬಳಿಕ ಒಳಗೆ ಸೇರಿಸಿಸಿಕೊಂಡಿದ್ದಾರೆ ಎಂದು ಹೇಳಿದರು. ಇದೇ ವೇಳೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com