ಜೂನ್ 8 ರಿಂದ ಕೆಆರ್ ಮಾರ್ಕೆಟ್ -ರಸೆಲ್ ಮಾರ್ಕೆಟ್ ತೆರೆಯಲು ಷರತ್ತು ಬದ್ದ ಅನುಮತಿ?

ರಸೆಲ್ ಮಾರ್ಕೆಟ್, ಕೆ ಆರ್ ಮಾರ್ಕೆಟ್, ಕಲಾಸಿ ಪಾಳ್ಯ ಮಾರುಕಟ್ಟೆಗಳ ಪ್ರತಿನಿಧಿಗಳು ಮಂಗಳವಾರ ಬಿಬಿಎಂಪಿ ಮತ್ತೆ ಮೇಯರ್ ಗೆ ಮನವಿ ಸಲ್ಲಿಸಿ ತಮಗಾಗುತ್ತಿರುವ ಆರ್ಥಿಕ ನಷ್ಟ ತಪ್ಪಿಸಲು ಮಾರುಕಟ್ಟೆ ಪುನರಾಂಭಿಸುವಂತೆ ಮನವಿ ಸಲ್ಲಿಸಿದ್ದಾರೆ
ಅವೆನ್ಯೂ ರಸ್ತೆ
ಅವೆನ್ಯೂ ರಸ್ತೆ

ಬೆಂಗಳೂರು: 75 ದಿನಗಳ ನಂತರ ಕೆ ಆರ್ ಮಾರ್ಕೆಟ್ ಮತ್ತು ರಸೆಲ್ ಮಾರ್ಕೆಟ್ ಗಳು ಜೂನ್ 8 ರಿಂದ ಮತ್ತೆ ಕಾರ್ಯಾರಂಭ ಮಾಡಲಿವೆ. 

ರಸೆಲ್ ಮಾರ್ಕೆಟ್, ಕೆ ಆರ್ ಮಾರ್ಕೆಟ್, ಕಲಾಸಿ ಪಾಳ್ಯ ಮಾರುಕಟ್ಟೆಗಳ ಪ್ರತಿನಿಧಿಗಳು ಮಂಗಳವಾರ ಬಿಬಿಎಂಪಿ ಮತ್ತು ಮೇಯರ್ ಗೆ ಮನವಿ ಸಲ್ಲಿಸಿ ತಮಗಾಗುತ್ತಿರುವ ಆರ್ಥಿಕ ನಷ್ಟ ತಪ್ಪಿಸಲು ಮಾರುಕಟ್ಟೆ ಪುನರಾಂಭಿಸುವಂತೆ ಮನವಿ ಸಲ್ಲಿಸಿದ್ದಾರೆ.

ಸಂಸದ ಪಿಸಿ ಮೋಹನ್ ಜೊತೆ ಶಿವಾಜಿನಗರ ಮತ್ತು ಭಾರತಿ ನಗರ ಕಾರ್ಪೋರೇಟರ್ ಗಳು ಮನವಿ ಸಲ್ಲಿಸಿದ್ದು, ಲಾಕ್ ಡೌನ್ ತೆರವಾಗಿರುವ ಕಾರಣ ಮಾರುಕಟ್ಟೆ ತೆರೆಯಲು ಅನುಮತಿ ನೀಡಬೇಕೆಂದು ಹೇಳಿದ್ದಾರೆ.

ನಾವು ಮಾರುಕಟ್ಟೆ ತೆರೆಯಲು ಅನುಮತಿ ನೀಡಿದ್ದೇವೆ. ಅದರ ಜೊತೆಗೆ ಕೆಲವು ಷರತ್ತುಗಳನ್ನು ನೀಡಿದ್ದೇವೆ, ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಬೀದಿ ವ್ಯಾಪಾರಿಗಳಿಗೆ ಅನುಮತಿ ನೀಡಿಲ್ಲ, ವ್ಯಾಪಾರಿಗಳು ಸ್ವಚ್ಛತೆ ಮತ್ತು ಹೈಜಿನಿಕ್ ಬಗ್ಗೆ ಗಮನ ಹರಿಸಬೇಕು. ಜೊತೆಗೆ ಕಸದ ವರ್ಗಿಕರಣ ಮತ್ತು ವೈಜ್ಞಾನಿಕ ರೀತಿಯ ವಿಲೇವಾರಿ ಮಾಡಬೇಕು ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸೂಚಿಸಿದ್ದಾರೆ.

ಒಂದೆ ಒಂದು ಸಣ್ಣ ನಿಯಮ ಉಲ್ಲಂಘನೆಯಾದರೂ ಮತ್ತೆ ಮಾರ್ಕೆಟ್ ಮುಚ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಮಾರ್ಕೆಟ್ ತೆರೆಯುವ ಬಗ್ಗೆ ಲಿಖಿತ ಆದೇಶ ಇನ್ನೂ ಹೊರ ಬಿದ್ದಿಲ್ಲ. ಕೆಆರ್ ಮಾರ್ಕೆಟ್ ಮತ್ತು ರಸೆಲ್ ಮಾರ್ಕೆಟ್ ತೆರೆಯಲು ಷರತ್ತುಬದ್ಧ ಅನುಮತಿ ನೀಡಲಾಗಿದೆ, ಆದರೆ ಕಲಾಸಿ ಪಾಳ್ಯ ಮಾರುಕಟ್ಟೆ ತೆರೆಯುವ ಬಗ್ಗೆ ಇನ್ನೂ ನಿರ್ದಾರವಾಗಿಲ್ಲ.

ಮಾರುಕಟ್ಟೆ ಪುನಾರಂಭವಾದ ನಂತರ ನಿಯಮ ಪಾಲನೆಯಾಗುತ್ತಿದೆಯೇ ಎಂಬ ಬಗ್ಗ ಪ್ರತಿನಿತ್ಯ ಪರಿಶೀಲನೆ ನಡೆಸಲಾಗುತ್ತದೆ, ನಿಯಮ ಉಲ್ಲಂಘನೆಯಾದರೇ ಕೂಡಲೇ ಮಾರ್ಕೆಟ್ ಬಂದ್ ಮಾಡಲಾಗುವುದು ಎಂದು ಮೇಯರ್ ಗೌತಮ್ ಕುಮಾರ್ ಜೈನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com