ಕೊರೋನಾ ಸಾಂಕ್ರಾಮಿಕ ಸಮಯದಲ್ಲೂ ಜಾತಿವಾದ: ಅಧಿಕಾರಿಗಳ ಅಸಂಬದ್ಧ ಪ್ರಶ್ನೆಗೆ ಮುಜುಗೊರಕ್ಕೊಳಗಾದ ಮುಂಬೈ ಕುಟುಂಬ

ಕೆಲಸ ಕೊರೋನಾ ಭೀತಿ ಎದುರಿಸುತ್ತಿರುವ ವಲಸೆ ಕಾರ್ಮಿಕರಿಗೆ ಇದೀಗ ಆರೋಗ್ಯಾಧಿಕಾರಿಗಳು ಕೇಳುತ್ತಿರುವ ಅಸಂಬಂಧ ಪ್ರಶ್ನೆಗಳು ಮುಜುಗೊರಕ್ಕೊಳಗಾಗುವಂತೆ ಮಾಡುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತುಮಕೂರು: ಕೆಲಸ ಕೊರೋನಾ ಭೀತಿ ಎದುರಿಸುತ್ತಿರುವ ವಲಸೆ ಕಾರ್ಮಿಕರಿಗೆ ಇದೀಗ ಆರೋಗ್ಯಾಧಿಕಾರಿಗಳು ಕೇಳುತ್ತಿರುವ ಅಸಂಬಂಧ ಪ್ರಶ್ನೆಗಳು ಮುಜುಗೊರಕ್ಕೊಳಗಾಗುವಂತೆ ಮಾಡುತ್ತಿದೆ. 

ಮಹಾರಾಷ್ಟ್ರದಿಂದ ಕುಟುಂಬವೊಂದು ತುಮಕೂರಿನ ತಿಪಟೂರಿಗೆ ಬಂದಿಳಿದಿದ್ದು, ಈ ಕುಟುಂಬ ಸದಸ್ಯರನ್ನು ಕ್ವಾರಂಟೈನ್ ಗೊಳಪಡಿಸುವುದಕ್ಕೂ ಮುನ್ನು ಆರೋಗ್ಯಾಧಿಕಾರಿಗಳು ತಪಾಸಣೆಗೊಳಪಡಿಸಿದ್ದಾರೆ. ಈ ವೇಳೆ ಅಧಿಕಾರಿಗಳು ಅವರ ಜಾತಿ ಹಾಗೂ ಉಪಜಾತಿಗಳನ್ನು ಕೇಳಿದ್ದು, ಕುಟುಂಬವು ಮುಜುಗರಕ್ಕೊಳಗಾಗಿದೆ. 

ಹಲವು ವರ್ಷಗಳ ಹಿಂದೆ ನಾವು ಮುಂಬೈಗೆ ಸ್ಥಳಾಂತರಗೊಂಡಿದ್ದೆವು. ಕೊರೋನಾ ಭೀತಿಯಿಂದಾಗಿ ತವರಿಗೆ ಮರಳು ನಿರ್ಧರಿಸಿ ರಾಜ್ಯಕ್ಕೆ ಬಂದೆವು. ಆದರೆ, ಮನೆಗೆ ಬಂದ ಅಧಿಕಾರಿಗಳು ನಮ್ಮ ಇಡೀ ಕುಟುಂಬದ ಫೋಟೋವನ್ನು ತೆಗೆದುಕೊಂಡಿತು. ಈ ವೇಳೆ ಜಾತಿ ಹಾಗೂ ಉಪ ಜಾತಿಗಳನ್ನು ಕೇಳಿದ್ದರು. ಈ ಬಗ್ಗೆ ನಾನು ವಾಟ್ಸ್ ಆ್ಯಪ್ ನಲ್ಲಿ ಹೇಳಿಕೊಂಡಿದ್ದೆ. ಇದೀಗ ಆ ಪೋಸ್ಟ್ ವೈರಲ್ ಆಗಿದೆ ಎಂದು ಕುಟುಂಬದ ಹಿರಿಯ ತಲೆಯಾಗಿರುವ ಮೂರ್ತಿ ಎಂಬುವವರು ಹೇಳಿದ್ದಾರೆ. 

ಇದೀಗ ಈ ಕುಟುಂಬವನ್ನು ತಿಪಟೂರಿನ ಹಾಸ್ಟೆಲ್ ವೊಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಿಸಲಾಗಿದೆ ೆಂದು ತಿಳಿದುಬಂದಿದೆ. 

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ ಎಂಬುವವರು ಮಾತನಾಡಿ, ಜನರ ಜಾತಿ ಹಾಗೂ ಉಪಜಾತಿಗಳನ್ನು ಕೇಳಬೇಕೆಂಬ ಯಾವುದೇ ಸೂಚನೆಗಳಿಲ್ಲ. ಜಾತಿ ಮಾಹಿತಿ ಕೇಳಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com