ಪ್ರಿಸ್ಕ್ರಿಪ್ಷನ್ ಇಲ್ಲದೆ, ಪ್ಯಾರಸಿಟಮಾಲ್ ನೀಡುವುದಿಲ್ಲ: ಔಷಧಾಲಯಗಳು

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗುತ್ತಿರುವ ನಡುವಲ್ಲೇ ನಗರದಲ್ಲಿರುವ ಬಹುತೇಕ ಔಷಧಾಲಯಗಳು ವೈದ್ಯರು ನೀಡುವ ಔಷಧಿ ಚೀಟಿಯಿಲ್ಲದೆ ಪ್ಯಾರಸಿಟಮಾಲ್ ನೀಡದಿರಲು ನಿರ್ಧರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗುತ್ತಿರುವ ನಡುವಲ್ಲೇ ನಗರದಲ್ಲಿರುವ ಬಹುತೇಕ ಔಷಧಾಲಯಗಳು ವೈದ್ಯರು ನೀಡುವ ಔಷಧಿ ಚೀಟಿಯಿಲ್ಲದೆ ಪ್ಯಾರಸಿಟಮಾಲ್ ನೀಡದಿರಲು ನಿರ್ಧರಿಸಿದ್ದಾರೆ.
 
ಪ್ಯಾರೆಸಿಟಮಾಲ್, ಅಸೆಟಾಮಿನೋಫೆನ್ ಮತ್ತು ಆಂಟಿಹಿಸ್ಟಾಮೈನ್ ಕುರಿತಂತೆ ಕೆಲ ದಿನಗಳಿಂದ ಔಷಧಾಲಯಗಳಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. ಅಂಗಡಿಗೆ ಬರುತ್ತಿರುವ ಜನರ ಬಳಿ ಔಷಧಾಲಯಗಳು ವೈದ್ಯರು ನೀಡುವ ಔಷಧಿ ಚೀಟಿಯನ್ನು ಕೇಳುತ್ತಿದ್ದು, ಚೀಟಿಯಿಲ್ಲದೆ ಔಷಧಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. 

ಸಾಮಾನ್ಯವಾಗಿ ಈ ಔಷಧಿಗಳು ಜ್ವರ, ಶೀತ, ಮೈ ನೋವು, ಕೆಮ್ಮು ಹಾಗೂ ಅಲರ್ಜಿಯಂತಹ ಸಮಸ್ಯೆಗಳನ್ನು ದೂರಾಗಿಸುತ್ತವೆ. ಇವುಗಳಲ್ಲಿ ಬಹುತೇಕ ಲಕ್ಷಣಗಳು ವೈರಸ್ ಲಕ್ಷಣಗಳೇ ಆಗಿದ್ದು, ಹೀಗಾಗಿ ಆ ಔಷಧಿಗಳನ್ನು ವೈದ್ಯರ ಚೀಟಿಯಿಲ್ಲದೆ ಔಷಧಿ ನೀಡದಿರಲು ನಿರ್ಧರಿಸಿದ್ದಾರೆ. 

ನಮಗೆ ಈಗಾಗಲೇ ಸರ್ಕಾರ ಆದೇಶ ನೀಡಿದ್ದು, ವೈದ್ಯರ ಚೀಟಿಯಿಲ್ಲದೆ, ಶೀತ, ಅಲರ್ಜಿ ಮಾತ್ರಗಳನ್ನು ನೀಡದಂತೆ ತಿಳಿಸಿದೆ. ಮಾರ್ಚ್ ತಿಂಗಳಿನಿಂದಲೂ ಡೋಲೋ 650 ಬೇಡಿಕೆ ಹೆಚ್ಚಾಗಿದೆ ಎಂದು ಮಲ್ಲೇಶ್ವರಂ 17ನೇ ಅಡ್ಡರಸ್ತೆಯಲ್ಲಿರುವ ಔಷಧಾಲಯದ ಸಿಬ್ಬಂದಿಗಳು ಹೇಳಿದ್ದಾರೆ. 

ಸರ್ಕಾರದ ಆದೇಶ ಬರುವವರೆಗೂ ನಾನು ಪ್ರತೀನಿತ್ಯ 50 ಶೀಟ್ ಗಳ ಡೋಲೋ ಮಾರಾಟ ಮಾಡುತ್ತಿದೆ. ವೈದ್ಯರ ಚೀಟಿ ಕೇಳುತ್ತಿದ್ದಂತೆಯೇ ಇದೀಗ ಮಾತ್ರೆಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. 

ಇನ್ನು ಆದೇಶ ಕುರಿತಂತೆ ಡ್ರಗ್ ಕಂಟ್ರೋಲರ್ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಇಂತಹ ಯಾವುದೇ ಆದೇಶಗಳನ್ನೂ ನೀಡಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಪ್ಯಾರಾಸಿಟಾಮಲ್ ಹಾಗೂ ಶೀತಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುವವರ ಮೇಲೆ ಕಣ್ಗಾವಲಿರಿಸಲಾಗಿದೆ. ಇದರಿಂದ ವೈರಸ್ ಪೀಡಿತರನ್ನು ಕಂಡು ಹಿಡಿಯಲು ಸಹಾಯಕವಾಗುತ್ತಿದೆ ಎಂದು ತಿಳಿಸಿದ್ದಾರೆ. 

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಅಡಿಯಲ್ಲಿ ಕಳೆದ ತಿಂಗಳು ಉಪ ಆಯುಕ್ತರು ಔಷಧಾಲಯಗಳಿಕೆ ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಪ್ಯಾರಾಸಿಟಮಾಲ್ ಮಾತ್ರೆಗಳು ಮಾರಾಟದ ಮೇಲೆ ಕಣ್ಗಾವಲಿರಿಸಲಾಗಿದೆ. ಜನರಿಗೆ ಯಾವುದೇ ರೀತಿಯ ಸಂಕಷ್ಟಗಳು ಎದುರಾಗದಂತೆ ಮಾತ್ರಗಳನ್ನು ಪೂರೈಸಲಾಗುತ್ತಿದೆ ಎಂದಿದ್ದಾರೆ. 

ಪ್ರತೀ ತಿಂಗಳು ನನ್ನ ಮಗುವಿಗೆ ಜ್ವರ ಬರುತ್ತದೆ. ಮನೆಯ ಬಳಿಯೇ ಇರುವ ಔಷಧಾಲಯದಲ್ಲಿ ನಾನು ಆಗಾಗ ಪ್ಯಾರಾಸಿಟಮಾಲ್ ತೆಗೆದುಕೊಳ್ಳುತ್ತಿರುತ್ತೇನೆ. ನನ್ನ ಮಗುವಿಗೆ ಆಗಾಗ ಜ್ವರ ಬರುತ್ತಿರುತ್ತದೆ ಎಂಬುದು ಗೊತ್ತಿದ್ದರೂ ಈ ಬಾರಿ ಅಂಗಡಿಯವರು ವೈದ್ಯರ ಚೀಟಿ ಕೇಳಿದರು. ಇದೀಗ ನಾನು ಆನ್'ಲೈನ್ ಮೂಲಕ ಔಷಧಿ ಚೀಟಿ ನೀಡುವಂತೆ ವೈದ್ಯರ ಬಳಿ ಮನವಿ ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಪೋಷಕರೊಬ್ಬರು ಹೇಳಿಕೊಂಡಿದ್ದಾರೆ. 

ಇದೇ ರೀತಿ ಮತ್ತೊಬ್ಬ ಹಿರಿಯ ನಾಗರೀಕರೂ ಕೂಡ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದು, ವಾತಾವರಣ ಬದಲಾದಂತೆ ನನಗೆ ಕೆಮ್ಮು ಬರುತ್ತದೆ. ಹೀಗಾಗಿ ನಾನು ಔಷಧಿ ಪಡೆಯಲು ಅಂಗಡಿಗೆ ಹೋಗಿದ್ದೆ. ಈ ವೇಳೆ ಮಳಿಗೆಯವರು ಮೊಬೈಲ್ ಸಂಖ್ಯೆಯನ್ನು ಕೇಳಿದ್ದರು. ಇದಾದ 24 ಗಂಟೆಗಳಲ್ಲಿ ಆವಿಆರ್'ಎಸ್ ನಿಂದ ಸಂದೇಶವೊಂದು ಬಂದಿದ್ದು, ಕೊರೋನಾ ಲಕ್ಷಣಗಳೇನಾದರೂ ಇವೆಯೇ ಎಂದು ಪ್ರಶ್ನಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com