ರವಿ ಪೂಜಾರಿ ಇನ್ನೋರ್ವ ಸಹಚರ ಅರೆಸ್ಟ್: ಶಾರ್ಪ್ ಶೂಟರ್ ಬಚಾ ಖಾನ್ ಸಿಸಿಬಿ ಬಲೆಗೆ 

ಭೂಗತ ಪಾತಕಿ ರವಿ ಪೂಜಾರಿ ಸಹಚರ, ಶಾರ್ಪ್ ಶೂಟರ್ ಯೂಸುಫ್ ಬಚಾ ಖಾನ್ ನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ.  
ಯೂಸುಫ್ ಬಚಾ ಖಾನ್
ಯೂಸುಫ್ ಬಚಾ ಖಾನ್
Updated on: 

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಸಹಚರ, ಶಾರ್ಪ್ ಶೂಟರ್ ಯೂಸುಫ್ ಬಚಾ ಖಾನ್ ನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ. 

ಛೋಟಾ ಆಜನ್ ಸಹಚರನಾಗಿದ್ದ ಬಚಾ ಖಾನ್ ಅವನ ಟೀಂ ನಿಂದ ಹೊರಬಂದು ರವಿ ಪೂಜಾರಿ ಬಳಗಕ್ಕೆ ಸೇರಿದ್ದ. ಬೆಂಗಳೂರು ಬಿಲ್ಡರ್ ಸುಬ್ಬರಾವ್ ಕೊಲೆ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಚಾ ಖಾನ್ ಅನ್ನು ಸಿಸಿಬಿ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರವಿ ಪೂಜಾರಿಯನ್ನ ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸಿದಾಗ ಬಚಾ ಖಾನ್ ಕುರಿತು ಮಾಹಿತಿ ದೊರಕಿತ್ತು. ಅದರಂತೆ ಇದೀಗ ಆತನನ್ನು ಬಂಧಿಸಿದ್ದು ತನಿಖೆ ನಡೆಸಿದಾಗ ಹಲವು ಪ್ರಕರಣಗಳಲ್ಲಿ ಆತನ ಪಾತ್ರದ ಬಗ್ಗೆ ಮಾಹಿತಿ ದೊರಕುತ್ತಿದೆ. 

ಈ ನಡುವೆ ಕೊರೋನಾ ಹಾವಳಿಯ ಕಾರಣ ರವಿ ಪೂಜಾರಿ ಸೇರಿ ಎಲ್ಲಾ ಆರೋಪಿಗಳನ್ನು ಅತ್ಯಂತ ಜಾಗರೂಕತೆಯಿಂದ ವಿಚಾರಣೆ ನಡೆಸಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com