ಹೃದ್ರೋಗ ತಜ್ಞ ವೈದ್ಯನಿಗೆ ಕೋವಿಡ್ ಚಿಕಿತ್ಸೆ ನಿರಾಕರಿಸಿದ ಖಾಸಗಿ ಆಸ್ಪತ್ರೆಗಳು

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕೋವಿಡ್-19 ಸೋಂಕಿತ ಹೃದಯ ತಜ್ಞ ವೈದ್ಯರೊಬ್ಬರನ್ನು ದಾಖಲು ಮಾಡಿಕೊಳ್ಳದೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸುವ ಮೂಲಕ ಅಮಾನವೀಯತೆ ಮೆರೆದಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕೋವಿಡ್-19 ಸೋಂಕಿತ ಹೃದಯ ತಜ್ಞ ವೈದ್ಯರೊಬ್ಬರನ್ನು ದಾಖಲು ಮಾಡಿಕೊಳ್ಳದೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸುವ ಮೂಲಕ ಅಮಾನವೀಯತೆ ಮೆರೆದಿವೆ.

ಹೊರ ರೋಗಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ವೈದ್ಯರ ಸುತ್ತ ಯಾವಾಗಲೂ ರೋಗಿಗಳು ಜಮಾಯಿಸುತ್ತಿದ್ದರು. ಜ್ವರ, ಗಂಟಲು ಕೆರೆತ ಹಾಗೂ ದೇಹದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಹೆಚ್ಚಾಗಿ ರೋಗ ಲಕ್ಷಣ ಕಂಡುಬಂದಿರಲಿಲ್ಲ. ಅಂತಿಮವಾಗಿ ಮುಖ್ಯ ಕಟ್ಟಡದಿಂದ ಪ್ರತ್ಯೇಕವಾಗಿರುವ ಜಯದೇವ ಆಸ್ಪತ್ರೆಯ ನವೀಕರಣ ಬ್ಲಾಕ್ ನಲ್ಲಿ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. 

ಕೋವಿಡ್-19 ಚಿಕಿತ್ಸೆಗಾಗಿ ಸೋಂಕಿತ ವೈದ್ಯ ಹಲವು ಖಾಸಗಿ ಆಸ್ಪತ್ರೆಗಳ ಬಾಗಿಲು ಬಡಿದಿದ್ದಾರೆ. ಆದರೆ, ಎಲ್ಲಾ ಹಾಸಿಗೆ ಭರ್ತಿಯಾಗಿವೆ ಎಂದು ಹೇಳಿ ಅವರನ್ನು ಚಿಕಿತ್ಸೆಗೆ ದಾಖಲು ಮಾಡಿಕೊಂಡಿಲ್ಲ .ಸರ್ಕಾರದ ನಿಯಮಗಳ ಪ್ರಕಾರ ಕೋವಿಡ್-19 ರೋಗಿಗಳನ್ನು ಚಿಕಿತ್ಸೆಗೆ ದಾಖಲು ಮಾಡಿಕೊಳ್ಳುವುದು ಕಡ್ಡಾಯ, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವುದಾಗಿ ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳು ಹೇಳಿದ್ದವು. ಆದರೆ, ನಮ್ಮ ಸಹೋದ್ಯೋಗಿಯೊಬ್ಬರಿಗೆ ಸೋಂಕು ತಗುಲಿದಾಗ ಚಿಕಿತ್ಸೆ ನೀಡದೆ ನಿರಾಕರಿಸಿದ್ದಾರೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.

ಆದಾಗ್ಯೂ, ತಮ್ಮ ಸಹೋದ್ಯೋಗಿಗಳಿಗೆ ಪಾಸಿಟಿವ್ ಬಂದಿದ್ದರೂ ಕೂಡಾ ಇತರ ವೈದ್ಯರು ಹಾಗೂ ನರ್ಸ್ ಗಳು ತಮ್ಮ ಸುರಕ್ಷತೆಯನ್ನು ಬದಿಗೊತ್ತಿ ಪ್ರತಿದಿನ 800ರಿಂದ 1000 ರೋಗಿಗಳನ್ನು ಹೊರ ರೋಗಿ ವಿಭಾಗದಲ್ಲಿ ನೋಡಿಕೊಳ್ಳುತ್ತಿದ್ದಾರೆ. ಸೋಂಕಿತ ವ್ಯಕ್ತಿಯೊಂದಿಗೆ ಕೆಲಸ ಮಾಡಿದ್ದ 15 ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೃದಯ ವೈಫಲ್ಯದ ತುರ್ತು ಪ್ರಕರಣಗಳಿಗೆ ಸೇವೆಗಳನ್ನು ನಿರ್ಬಂಧಿಸಬೇಕು. ವಾಡಿಕೆಯ. ತಪಾಸಣೆಗಳನ್ನು ಮುಂದೂಡಬಹುದು. ಓಪಿಡಿಯಲ್ಲಿ ವೈದ್ಯರು ಎನ್-95 ಮಾಸ್ಕ್ ಧರಿಸುತ್ತಾರೆ.ಆದರೆ, ಪಿಪಿಇ ಕಿಟ್ ಗಳನ್ನು ಧರಿಸಿರುವುದಿಲ್ಲ, ಆಗಾಗ್ಗೆ ನೂರಾರು ರೋಗಿಗಳು ಹೊರ ರೋಗಿ ವಿಭಾಗಕ್ಕೆ ಬರುತ್ತಿರುತ್ತಾರೆ ಇದರಿಂದ ಎಲ್ಲಾ ವೈದ್ಯರು, ನರ್ಸ್ ಗಳು ಮತ್ತು ಸಹಾಯಕ ಸಿಬ್ಬಂದಿಗೆ ತೊಂದರೆಯಾಗುತ್ತಿದೆ ಎಂದು ವೈದ್ಯರೊಬ್ಬರು ಹೇಳುತ್ತಾರೆ.

ಎರಡು ತಿಂಗಳು ಲಾಕ್ ಡೌನ್ ಇದ್ದಾಗ ಯಾರೂ ಕೂಡಾ ಆಸ್ಪತ್ರೆಗೆ ಬರುತ್ತಿರಲಿಲ್ಲ. ಈಗ ಹೊರ ರೋಗಿ ವಿಭಾಗಕ್ಕೆ ಬರುತ್ತಿರುವ ರೋಗಿಗಳು ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ರೋಗಿಗಳು ಸ್ಥಳೀಯ ವೈದ್ಯರಿಂದ ವಾಡಿಕೆಯ ತಪಾಸಣೆ ,ಇಸಿಜಿ ತಪಾಸಣೆಯನ್ನು ಮಾಡಿಸಿಕೊಂಡು ವರದಿಯನ್ನು ವಾಟ್ಸಾಪ್ ನಲ್ಲಿ ಕಳುಹಿಸಬೇಕು ಎಂದು ಮತ್ತೋರ್ವ ವೈದ್ಯರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com