ಫೀವರ್ ಕ್ಲಿನಿಕ್ 24 ಗಂಟೆ ಕಾರ್ಯನಿರ್ವಹಣೆಗೆ ಸೂಚನೆ

ರಾಜ್ಯದ್ಯಂತ ಜ್ವರ ಚಿಕಿತ್ಸಾಲಯಗಳನ್ನು ಹೆಚ್ಚಿಸುವ ಜೊತೆಗೆ 24*7 ಕಾರ್ಯನಿರ್ವಹಣೆ ಮಾಡುವಂತೆ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ್ಯಂತ ಜ್ವರ ಚಿಕಿತ್ಸಾಲಯಗಳನ್ನು ಹೆಚ್ಚಿಸುವ ಜೊತೆಗೆ 24*7 ಕಾರ್ಯನಿರ್ವಹಣೆ ಮಾಡುವಂತೆ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ. 

ವಿಷಮಶೀತ ಜ್ವರ ಹಿನ್ನೆಲೆ ಮತ್ತು ತೀವ್ರ ಉಸಿರಾಟ ಸಮಸ್ಯೆ ಹೊಂದಿದವರಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಎಲ್ಲಾ ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಜ್ವರ ಚಿಕಿತ್ಸಾಲಯ ತೆರೆಯಬೇಕು. ಜೊತೆಗೆ ಜ್ವರ ಚಿಕಿತ್ಸಾಲಯಕ್ಕೆ ಜಿಲ್ಲೆಯ ಸಮುದಾಯ ಕೇಂದ್ರಗಳನ್ನು ಶೇ.100ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಶೇ.50ರಷ್ಟು ಮೀಸಲಿಡಬೇಕು.  

ಈ ಚಿಕಿತ್ಸಾಲಯಗಳು 24*7 ಕಾರ್ಯನಿರ್ವಹಿಸಲಿದ್ದು, ಸೋಂಕು ಲಕ್ಷಣವಿರುವವರ ಗಂಟಲು ದ್ರಾವಣ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಆಯುಕ್ತರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com