ಕೊರೋನಾ ಭೀತಿ: ಬೆಂಗಳೂರಿನ ಎರಡು ಪೋಸ್ಟ್ ಆಫೀಸ್ ಬಂದ್

ನಗರದಲ್ಲಿ ಹೆಚ್ಚುತ್ತಿರುವ ಕೊರೋನಾ ಹಿನ್ನೆಲೆಯಲ್ಲಿ ಎಚ್ ಎ ಎಲ್ 2ನೇ ಹಂತದ ಅಂಚೆ ಕಚೇರಿ ಮತ್ತು ವಿದ್ಯಾರಣ್ಯಪುರಂ ನ ಉಪ ಅಂಚೆ ಕಚೇರಿಗಳನ್ನು ಮುಚ್ಚಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಕೊರೋನಾ ಹಿನ್ನೆಲೆಯಲ್ಲಿ ಎಚ್ ಎ ಎಲ್ 2ನೇ ಹಂತದ ಅಂಚೆ ಕಚೇರಿ ಮತ್ತು ವಿದ್ಯಾರಣ್ಯಪುರಂ ನ ಉಪ ಅಂಚೆ ಕಚೇರಿಗಳನ್ನು ಮುಚ್ಚಲಾಗಿದೆ.

ಪ್ರಧಾನ ಅಂಚೆ ಕಚೇರಿ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢವಾದ ಮೇಲೆ ಎರಡು ಕಚೇರಿಗಳನ್ನು ಗುರುವಾರದಿಂದ ಮುಚ್ಚಲಾಗಿದೆ, ನಮ್ಮ ಖಜಾಂಚಿಯೊಬ್ಬರು ಯಾವುದೋ ಕೆಲಸದದ ಮೇಲೆ ಆಸ್ಪತ್ರೆಗೆ ತೆರಳಿದ್ದರು. ಅವರು ಕೊರೋನಾ ಪರೀಕ್ಷೆ ಮಾಡಿಸಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ ಎಂದು ಬೆಂಗಳೂರು ಪ್ರಧಾನ ಅಂಚೆ ಕಚೇರಿಯ ಪೊಸ್ಟ್ ಮಾಸ್ಟರ್ ಎಸ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಅವರಿಗೆ ಕೊರೋನಾದ ಯಾವುದೇ ಲಕ್ಷಣಗಳಿರಲಿಲ್ಲ, ಹೀಗಾಗಿ ದೂರವಾಣಿ ಮೂಲಕ ನಮಗೂ ಕೂಡ ಎಚ್ಚರಿಕೆ ನೀಡಿದ್ದಾರೆ.

ಅಂಚೆ ಕಚೇರಿಯಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗೂ ಮನೆಗೆ ತೆರಳಿ ಒಂದು ವಾರ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ. ನಾವು ಕಚೇರಿ ಬಂದ್ ಮಾಡಿ ಸ್ಯಾನಿಟೈಸ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ವಿದ್ಯಾರಣ್ಯಪುರದಲ್ಲಿ ಇಡೀ ಕಾಂಪ್ಲೆಕ್ಸ್ ಅನ್ನು ಮುಚ್ಚಲಾಗಿದೆ, ಎಲ್ಲಾ ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com