ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೂಟೆಗಟ್ಟಲೆ ಪದವಿ ಪಡೆದವರಿಗಿಂದು ಉದ್ಯೋಗ ಖಾತರಿ ಕೆಲಸವೇ ಆಧಾರ, ಇದು ಕೊರೊನ ಎಫೆಕ್ಟ್!

ಖಾಸಗಿ ಶಾಲೆಯ ಸಂಸ್ಥಾಪಕನಿಗೆ ಇದೀಗ ಉದ್ಯೋಗ ಖಾತರಿ ಕೆಲಸವೇ ಆಧಾರ. ಏಳು ಪದವಿ ಪಡೆದ ಪ್ರತಿಭಾವಂತ ಇದೀಗ ಉದ್ಯೋಗ ಖಾತರಿ ಕೆಲಸಕ್ಕೆ ಹೋಗಿ ದುಡಿದು ಜೀವನ ನಡೆಸಬೇಕಾದ ಅನಿವಾರ್ಯತೆ.
Published on

ಹೊಸಪೇಟೆ: ಖಾಸಗಿ ಶಾಲೆಯ ಸಂಸ್ಥಾಪಕನಿಗೆ ಇದೀಗ ಉದ್ಯೋಗ ಖಾತರಿ ಕೆಲಸವೇ ಆಧಾರ. ಏಳು ಪದವಿ ಪಡೆದ ಪ್ರತಿಭಾವಂತ ಇದೀಗ ಉದ್ಯೋಗ ಖಾತರಿ ಕೆಲಸಕ್ಕೆ ಹೋಗಿ ದುಡಿದು ಜೀವನ ನಡೆಸಬೇಕಾದ ಅನಿವಾರ್ಯತೆ.

ನಾಗರಾಜ್ ತಂಬ್ರಳ್ಳಿ ಏಳು ಪದವಿ ಪಡೆದು ಕಷ್ಟಪಡುತ್ತಿರುವ ವ್ಯಕ್ತಿಯಾಗಿದ್ದಾರೆ. ಬಿ.ಎಡ್. ಎಂ.ಎ.ಕನ್ನಡ. ಎಂ.ಎ.ಹಿಸ್ಟರಿ. ಎಂ.ಎ.ಸೋಶಿಯಾಲಜಿ. ಎಂ.ಎ.ಜರ್ನಲಿಸಂ. ಪಿ.ಹೆಚ್.ಡಿ. ಪದವಿ ಪಡೆದಿರುವ ನಾಗರಾಜ್ ತಂಭ್ರಳ್ಳಿಯವರು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಕಡಲೆಬಾಳು ಗ್ರಾಮದ ನಿವಾಸಿಯಾಗಿದ್ದಾರೆ. 

ತಮ್ಮಲ್ಲಿರುವ ಜ್ಞಾನ ಭಂಡಾರವನ್ನ ಇತರೆ ಮಕ್ಕಳಿಗೂ ಧಾರೆ ಎರೆಯಬೇಕು ಎಂದು ಸ್ವಂತ ಖಾಸಗಿ ಶಿಕ್ಷಣ ಸಂಸ್ಥೆಯನ್ನ ಪ್ರಾರಂಭಿಸಿದ್ದಾರೆ. ನಾಗರಾಜ್ ಅವರು, 1-5ನೇ ತರಗತಿವರೆಗೆ ಸುಜ್ಞಾನ ಇಂಗ್ಲೀಷ್ ಮಾಧ್ಯಮ ಶಾಲೆ ಪ್ರಾರಂಭಿಸಿದ್ದಾರೆ. 

ತಾವು ಆರಂಭಿಸಿರುವ ಶಾಲೆಯಲ್ಲಿ 74 ಮಂದಿ ವಿದ್ಯಾರ್ಥಿಗಳಿದ್ದು, ಶಾಲೆಯಲ್ಲಿ 5 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 

ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ಪರಿಸ್ಥಿತಿ ಎದುರಾಗಿರುವುದರಿಂದ ಮಕ್ಕಳ ಪೊಷಕರಿಂದ ಶುಲ್ಕ ಸಂಗ್ರಹಿಸಲಾಗುತ್ತಿಲ್ಲ. ಹೀಗಾಗಿ ಈಗಾಗಲೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ವೇತನ ಕೊಡಲಾಗದೆ ನಾಗರಾಜ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಶಿಕ್ಷಕರ ವೇತನದ ಜೊತೆಗೆ ಕುಟುಂಬ ನಿರ್ವಹಣೆ ಕೂಡ ನಾಗರಾಜ್ ಅವರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ನಾಗರಾಜ್ ಅವರ ಕುಟುಂಬದಲ್ಲಿ ಒಟ್ಟು 6 ಮಂದಿಯಿಂದ್ದು. ಕುಟುಂಬ ನಿರ್ವಹಣೆಗೆ ಮನೆಯಲ್ಲಿರುವ ಮೂರು ಜನ ಉದ್ಯೋಗ ಖಾತರಿ ಕೆಲಸ ಅವಲಂಬಿಸಿದ್ದಾರೆ.

ಸಂಕಷ್ಟದಲ್ಲಿರುವ ನಾಗರಾಜ್ ಅವರು, ಈಗಾಗಲೇ ಹಗರಿಬೊಮ್ಮನಹಳ್ಳಿ ತಹಸಿಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ್ದು, ಸಂಕಷ್ಟಕ್ಕೆ ನೆರವಾಗುವಂತೆ ಮನವಿ ಕೂಡ ಮಾಡಿಕೊಂಡಿದ್ದಾರೆ. 

ನಾನು ಈ ಹಿಂದೆ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಜೊತೆಗೆ ನಮ್ಮ ಊರಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಶಾಲೆಯನ್ನೂ ಪ್ರಾರಂಭಿಸಿದ್ದೇನೆ. ಆದರೆ, ಕೊರೋನಾ ಪರಿಣಾಮ ಖಾಸಗಿ ಕಾಲೇಜಿನವರು ನಮಗೆ ಯಾವುದೇ ರೀತಿಯ ವೇತನವನ್ನು ನೀಡುತ್ತಿದ್ದ. ಶಾಲೆಯನ್ನೂ ತೆರೆಯುವ ಪರಿಸ್ಥಿತಿಯಿಲ್ಲ. ಆದ್ದರಿಂದ ನಮ್ಮ ಜೀವನದ ನಿರ್ವಹಣೆ ಕಷ್ಟಕರವಾಗಿದ್ದು, ಕುಟುಂಬ ನಿರ್ವಹಣೆಗೆ ಕಡಲಬಾಳು ಗ್ರಾಮದ ನರೇಗಾ ಯೋಜನೆಯ ಉದ್ಯೋಗ ಖಾತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ದಯಮಾಡಿ ತಮ್ಮ ಕಚೇರಿಯಲ್ಲಿ ಅಥವಾ ಅರೆಕಾಲಿಕವಾಗಿ ಉದ್ಯೋಗವನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆಂದು ಪತ್ರದಲ್ಲಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com