ಭಾರತದ ವಿರುದ್ಧ ಘೋಷಣೆ ಕೂಗುವವರ ವಿರುದ್ಧ ಗುಂಡಿಡಲು ಕಾನೂನು ಜಾರಿಗೆ ತನ್ನಿ: ಕೇಂದ್ರಕ್ಕೆ ಬಿಸಿ ಪಾಟೀಲ್

ದೇಶದ ವಿರುದ್ಧ ಘೋಷಣೆ ಕೂಗುವವರ ಮೇಲೆ ಗುಂಡಿಟ್ಟು ಹತ್ಯೆ ಮಾಡಲು ಕಾನೂನು ಜಾರಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ಸಚಿವ ಬಿ.ಸಿ ಪಾಟೀಲ್ ಅವರು ಹೇಳಿದ್ದಾರೆ. 
ಬಿಸಿ ಪಾಟೀಲ್
ಬಿಸಿ ಪಾಟೀಲ್

ಬೆಂಗಳೂರು: ದೇಶದ ವಿರುದ್ಧ ಘೋಷಣೆ ಕೂಗುವವರ ಮೇಲೆ ಗುಂಡಿಟ್ಟು ಹತ್ಯೆ ಮಾಡಲು ಕಾನೂನು ಜಾರಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ಸಚಿವ ಬಿ.ಸಿ ಪಾಟೀಲ್ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತದ ವಿರುದ್ಧ ಘೋಷಣೆ ಕೂಗುವವರ ಮೇಲೆ ಗುಂಡು ಹಾರಿಸಲು ಕಾನೂನು ಜಾರಿಗೆ ತರುವಂತೆ ಕೇಂದ್ರದ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲ ಯುವಕರು ಈ ರೀತಿ ಜನಪ್ರಿಯತೆಯನ್ನು ಪಡೆಯುವುದು ಒಂದು ಫ್ಯಾಷನ್ ಆಗಿ ಮಾರ್ಪಟ್ಟಿದೆ. ಈ ರೀತಿಯ ಬೆಳವಣಿಗೆ ದೇಶ ಹಾಗೂ ದೇಶಭಕ್ತಿಯನ್ನು ಹಾಳು ಮಾಡುತ್ತದೆ ಎಂದು ಹೇಳಿದ್ದಾರೆ. 

ಬಿಸಿ ಪಾಟೀಲ್ ಅವರು ಈ ಹಿಂದೆ ಕೂಡ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ತಿನ್ನುವುದು ಭಾರತದ ಅನ್ನ, ಕುಡಿಯುವುದು ಭಾರತದ ನೀರು, ಗಾಳಿ. ಆದರೆ, ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಹೇಳಿದರೆ, ಅವರ್ಯಾಕೆ ಇಲ್ಲಿರಬೇಕು? ಇಂತಹವರನ್ನು ಬಗ್ಗು ಬಡಿಯಲು ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ತರಲು ಪ್ರಧಾನಿ ಮೋದಿಗೆ ಒತ್ತಾಯಿಸುತ್ತೇನೆಂದು. ಅಂತಹ ಕಾನೂನು ಅತ್ಯಂತ ಅವಶ್ಯಕವಿದೆ ಎಂದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com