ಸಿಲಿಕಾನ್ ಸಿಟಿ ನಿರಾಳ! ನಗರದಲ್ಲಿ ದಾಖಲಾಗಿದ್ದ ಐವರಿಗೆ ಕೊರೋನಾ ಬಾಧೆ ಇಲ್ಲ

ಕೊರೋನಾವೈರಸ್ ಶಂಕಿತ ಲಕ್ಷಣಗಳಿಂದ ಬಳಲುತ್ತಿದ್ದು ನಗರದ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್(ಆರ್ಜಿಐಸಿಡಿ) ಗೆ ದಾಖಲಾಗಿದ್ದ ಐವರಿಗೆ ಕೊರೋನಾ ಖಾಯಿಲೆ ಇಲ್ಲವೆಂದು ವರದಿ ಬಂದಿದೆ. ಈ ಮೂಲಕ ರೋಗಭೀತಿಯಿಂದ ಪರದಾಡುತ್ತಿದ್ದ ಸಿಲಿಕಾನ್ ಸಿಟಿ ಜನರು ತುಸು ನಿರಾಳವಾಗಿ ಉಸಿರಾಡುವಂತಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾವೈರಸ್ ಶಂಕಿತ ಲಕ್ಷಣಗಳಿಂದ ಬಳಲುತ್ತಿದ್ದು ನಗರದ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್(ಆರ್ಜಿಐಸಿಡಿ) ಗೆ ದಾಖಲಾಗಿದ್ದ ಐವರಿಗೆ ಕೊರೋನಾ ಖಾಯಿಲೆ ಇಲ್ಲವೆಂದು ವರದಿ ಬಂದಿದೆ. ಈ ಮೂಲಕ ರೋಗಭೀತಿಯಿಂದ ಪರದಾಡುತ್ತಿದ್ದ ಸಿಲಿಕಾನ್ ಸಿಟಿ ಜನರು ತುಸು ನಿರಾಳವಾಗಿ ಉಸಿರಾಡುವಂತಾಗಿದೆ. 

ಓರ್ವ ಇರಾನಿ ಪ್ರಜೆ ಇನ್ನೊಬ್ಬ ತೆಲಂಗಾಣ ಟೆಕ್ಕಿಯ ಸಹೋದ್ಯೋಗಿ ಮೂರನೆ ವ್ಯಕ್ತಿ ಆತನ ರೂಮ್ ಮೇಟ್ ಆಗಿದ್ದರೆ ನಾಲ್ಕು ಹಾಗೂ ಐದನೆಯವರು ಭಾರತೀಯ ನಾಗರಿಕರಿಗೆ ಮಾರಕ ಕೊರೋನಾ ಸೋಂಕಿಲ್ಲ ಎಂದು ಸಾಬೀತಾಗಿದೆ.

ಏತನ್ಮಧ್ಯೆ ಸ್ಟಾರ್ಟ್ ಅಪ್ ಸಂಸ್ಥೆಯೊಂದು ತನ್ನ ಉದ್ಯೋಗಿಗಳು ಮುಂದಿನ 14 ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡಲೆಂದು ಆದೇಶಿಸಿದೆ. ನಾವು ನಮ್ಮ ಎಲ್ಲ ಉದ್ಯೋಗಿಗಳನ್ನು ಮನೆಯಲ್ಲೇ ಇರಲು ಹೇಳಿದ್ದೇವೆ.  ಅವರ ಕುಟುಂಬ ಸಹ ಹಾಗೆಯೇ ಇರಲು ಕೋರಿದ್ದೇವೆ. ಇದು ಮಾರಕ ರೋಗ ಹರಡದಂತೆ ನಾವು ಮುಂಜಾಗ್ರತೆಯಾಗಿ ತೆಗೆದುಕೊಳ್ಳುತ್ತಿರುವ ಕ್ರಮ.  ”ಎಂದು ನಗರ ಮೂಲದ ಕ್ಲಿನಿಕಲ್ ಇನ್ಫಾರ್ಮ್ಯಾಟಿಕ್ಸ್ ಸ್ಟಾರ್ಟ್ಅಪ್ ಸಂಸ್ಥಾಪಕ ಗೀತಿಕಾ ಶ್ರೀವಾಸ್ತವ ಹೇಳಿದ್ದಾರೆ.

ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡಿ, “ಬೆಂಗಳೂರಿನಿಂದ ಎರಡು ಹೊಸ ಶಂಕಿತ ಪ್ರಕರಣಗಳು ಮತ್ತು ಉಡುಪಿ ಮತ್ತು ಬೀದರ್ ನಿಂದ ತಲಾ ಒಂದು ಪ್ರಕರಣಗಳನ್ನು ಗುರುತಿಸಲಾಗಿದೆ,ಈ ರೋಗಿಗಳ ಪರೀಕ್ಷೆ ನಡೆದಿದ್ದು ವರದಿಗಾಗಿ ಕಾಯಲಾಗುತ್ತಿದೆ. ಸಧ್ಯ ಶಂಕಿತ ರೋಗಿಗಳನ್ನು ಪ್ರತ್ಯೇಕ ನಿಗಾದಲ್ಲಿರಿಸಿದೆ" ಎಂದಿದ್ದಾರೆ.. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com