ಏಪ್ರಿಲ್ ನಿಂದ ಐದು ಕೆಜಿ ಅಕ್ಕಿ, ಎರಡು ಕೆಜಿ ಗೋಧಿ ಕೊಡಲು ನಿರ್ಧಾರ: ಸಚಿವ ಗೋಪಾಲಯ್ಯ

ಏಪ್ರಿಲ್ ನಿಂದ ಐದು ಕೆಜಿ ಅಕ್ಕಿ ಮತ್ತು ಎರಡು ಕೆಜಿ ಗೋಧಿ ಕೊಡಲು ಸರ್ಕಾರ ನಿರ್ಧರಿಸಿದೆ ಎಂದು ಆಹಾರ ಸಚಿವ ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಬಸನಗೌಡ ಯತ್ನಾಳ್ ಪ್ರಶ್ನೆಗೆ ಉತ್ತರಿಸುವ ವೇಳೆ ಅಕ್ಕಿ ಕಡಿಗೊಳಿಸುವು ದನ್ನು ಖಚಿತ ಪಡಿಸಿದ್ದಾರೆ. 
ಸಚಿವ ಗೋಪಾಲಯ್ಯ
ಸಚಿವ ಗೋಪಾಲಯ್ಯ

ಬೆಂಗಳೂರು:  ಏಪ್ರಿಲ್ ನಿಂದ ಐದು ಕೆಜಿ ಅಕ್ಕಿ ಮತ್ತು ಎರಡು ಕೆಜಿ ಗೋಧಿ ಕೊಡಲು ಸರ್ಕಾರ ನಿರ್ಧರಿಸಿದೆ ಎಂದು ಆಹಾರ ಸಚಿವ ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಬಸನಗೌಡ ಯತ್ನಾಳ್ ಪ್ರಶ್ನೆಗೆ ಉತ್ತರಿಸುವ ವೇಳೆ ಅಕ್ಕಿ ಕಡಿಗೊಳಿಸುವು ದನ್ನು ಖಚಿತ ಪಡಿಸಿದ್ದಾರೆ. 

ಏಳು ಕೆಜಿ ಅಕ್ಕಿಯನ್ನು ಐದು ಕೆಜಿಗೆ‌ ಕಡಿತಗೊಳಿಸಿ, ಎರಡು ಕೆಜಿ ಗೋಧಿ, ರಾಗಿ ಅಥವಾ ತೊಗರಿ ಬೇಳೆ ನೀಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಆ ಮೂಲಕ ಅನ್ನಭಾಗ್ಯ ದಡಿ ಅಕ್ಕಿ ಕಡಿತಗೊಳಿಸಲಿದ್ದಾರೆ ಎಂಬ ಗೊಂದಲಕ್ಕೆ ಬಹುತೇಕ ತೆರೆ ಎಳೆದಿದ್ದಾರೆ.

ಕಳೆದ ಮೂರು ವರ್ಷದಿಂದ ಅಕ್ಕಿ, ರಾಗಿ, ಜೋಳ, ತೊಗರಿ ಧಾನ್ಯಗಳ ಶೇಖರಣೆ ಕೆಲಸ ಮಾಡ್ತಿದ್ದೇವೆ.ಪ್ರದೇಶಕ್ಕ ನುಗುಣವಾಗಿ ರಾಗಿ, ಅಕ್ಕಿ,ಗೋಧಿ ವಿತರಣೆಗೆ ಕ್ರಮ ತಗೋತೇವೆ. ಸಿಎಂ ಜತೆ ಚರ್ಚಿಸಿ ಬೇಳೆ ವಿತರಣೆ ಸಂಬಂಧ ವೂ ತೀರ್ಮಾನಿಸುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com