ಸಕ್ಕರೆ ಕಾರ್ಖಾನೆಯಿಂದ ನಷ್ಟಕ್ಕೊಳಗಾದ ರೈತರಿಗೆ 80.54 ಲಕ್ಷ ರೂ. ಪರಿಹಾರ-ಆನಂದ್ ಸಿಂಗ್ 

ರಾಜ್ಯದ 12 ಸಕ್ಕರೆ ಕಾರ್ಖಾನೆಗಳಿಂದ ಸುತ್ತಲಿನ ಪ್ರದೇಶಗಳ ಪರಿಸರ ಹಾನಿಗೆ  ಕಾರಣವಾಗಿವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಬಂದಿದೆ ಎಂದು ಅರಣ್ಯ ಸಚಿವ  ಆನಂದ್ ಸಿಂಗ್ ತಿಳಿಸಿದ್ದಾರೆ
ಸಚಿವ ಆನಂದ್ ಸಿಂಗ್
ಸಚಿವ ಆನಂದ್ ಸಿಂಗ್

ಬೆಂಗಳೂರು: ರಾಜ್ಯದ 12 ಸಕ್ಕರೆ ಕಾರ್ಖಾನೆಗಳಿಂದ ಸುತ್ತಲಿನ ಪ್ರದೇಶಗಳ ಪರಿಸರ ಹಾನಿಗೆ  ಕಾರಣವಾಗಿವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಬಂದಿದೆ ಎಂದು ಅರಣ್ಯ ಸಚಿವ  ಆನಂದ್ ಸಿಂಗ್ ತಿಳಿಸಿದ್ದಾರೆ

ವಿಧಾನ ಪರಿಷತ್ ನಲ್ಲಿ  ಕಾಂಗ್ರೆಸ್ ಸದಸ್ಯ ಆರ್.ಬಿ. ತಿಮ್ಮಾಪೂರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ  ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಸೂಕ್ತ ಪ್ರಕರಣ ದಾಖಲಿಸಿ 80.54 ಲಕ್ಷ  ರೂ. ದಂಡ ವಸೂಲಿ ಮಾಡಿ ನಷ್ಟಕ್ಕೆ‌ ಒಳಗಾದ ರೈತರಿಗೆ ನೀಡಿದ್ದೇವೆ ಎಂದರು.

ಈ  ಪ್ರಶ್ನೆಗೆ ಈ ಭಾಗದ ಶಾಸಕರು, ಪ್ರತಿಪಕ್ಷದ ವಿವಿಧ ಸದಸ್ಯರು ಬೆಂಬಲ ನೀಡಿದರು. ಸದಸ್ಯ  ಆರ್.ಬಿ. ತಿಮ್ಮಾಪೂರ್ ವಿವರಣೆ ಕೇಳಿದಾಗ ಸರ್ಕಾರ ನೇರವಾಗಿ ಜಿಲ್ಲಾಧಿಕಾರಿ‌ ಮೂಲಕ  ರೈತರಿಗೆ ಪರಿಹಾರ ವಿತರಿಸಿದ್ದೇವೆ. ಇದಾದ ಬಳಿಕವೂ ಸ್ಥಳೀಯ ರೈತರನ್ನು ಕರೆಸಿ ಸಭೆ  ನಡೆಸಿ ಪರಿಹಾರ ಸೂಚಿಸುತ್ತೇವೆ ಎಂದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com