

ಬೆಂಗಳೂರು: ಕೋವಿಡ್-19 ಮಹಾಮಾರಿಯ ಕಾರಣ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ಈ ಕೆಳಗಿನ ರೈಲು ಸಂಚಾರವನ್ನು ರದ್ದುಮಾಡಿದೆ.
ಯಶವಂತಪುರ-ವಾಸ್ಕೋ ಡಾ ಗಾಮಾ-ಯಶವಂತಪುರ ಎಕ್ಸ್‌ಪ್ರೆಸ್ (ರೈಲು 07309/07310) ವಿಜಯಪುರ-ಮಂಗಳೂರು ಜಂಕ್ಷನ್-ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ಸ್ಪೆಷಲ್ (ರೈಲು ಸಂಖ್ಯೆ 07327/07328) ಗುರೆವಾರದಿಂದ ಏಪ್ರಿಲ್ 1 ರವರೆಗೆ ರದ್ದಾಗಲಿದೆ.
ಚೆನ್ನೈ-ಶಿವಮೊಗ್ಗ-ಚೆನ್ನೈ ಬೈವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ06221/06222) ಮತ್ತು ಯಶವಂತಪುರ-ಬಿಜಾಪುರ-ಯಶವಂತಪುರದೈನಂದಿನ ಎಕ್ಸ್‌ಪ್ರೆಸ್ ಮಾರ್ಚ್ 31 ರವರೆಗೆ ರದ್ದುಗೊಂಡಿದೆ
ಹಬೀಬ್‌ಗಂಜ್-ಧಾರವಾಡ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 01664) ಮಾರ್ಚ್ 27ರಂದು ಸಂಚರಿಸುವುದಿಲ್ಲ. ಅಲ್ಲದೆ ಧಾರವಾಡ -ಹಬೀಬ್‌ಗಂಜ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 01663) ಮಾರ್ಚ್ 28 ರಂದು ಸಂಚಾರ ನಡೆಸುವುದಿಲ್ಲ.
ಶಿವಮೊಗ್ಗ-ರೇಣಿಗುಂಟ -ಶಿವಮೊಗ್ಗ ದ್ವಿ ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06223/06224) ಮಾರ್ಚ್ 26ರಂದು ಸಂಚರಿಸುವುದಿಲ್ಲ.
ಮಂಗಳವಾರ ಸಂಜೆ ಉನ್ನತ ರೈಲ್ವೆ ಮಂಡಳಿಯ ಅಧಿಕಾರಿಗಳು ಎಲ್ಲಾ ವಲಯಗಳು ಮತ್ತು ವಿಭಾಗಗಳ ಸಾಮಾನ್ಯ ವ್ಯವಸ್ಥಾಪಕರು ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೋಡ್ ಮೂಲಕ ಸಭೆ ನಡೆಸಿದ್ದು ಕಡಿಮೆ ಪ್ರಯಾಣಿಕರು ಅಥವಾ ಪ್ರಯಾಣಿಕರ ಕೊರತೆ ಎದುರಿಸುತ್ತಿರುವ ಎಲ್ಲಾ ರೈಲುಗಳನ್ನು ರದ್ದುಗೊಳಿಸುವಂತೆ ನಿರ್ದೇಶಿಸಿದರು.
Advertisement