ದುಬೈನಿಂದ ಆಗಮಿಸಿ ಮೆಜೆಸ್ಟಿಕ್ ನಲ್ಲಿ ಸುತ್ತಾಟ; ಕೈಲಿದ್ದ ಸೀಲ್ ನೋಡಿ ಆಸ್ಪತ್ರೆಗೆ ಸೇರಿಸಿದ ಪೊಲೀಸರು

ದುಬೈನಿಂದ ಆಗಮಿಸಿದ್ದ ಕೊರೋನಾ ಸೋಂಕು ಶಂಕಿತ ವ್ಯಕ್ತಿಯೋರ್ವ ಬೆಂಗಳೂರಿನಲ್ಲಿ ರೂಂ ಸಿಗದೆ ದುಬೈನಿಂದ ಪರದಾಡಿ, ಮೆಜೆಸ್ಟಿಕ್ ಪ್ರದೇಶೇದಲ್ಲಿ ಓಡಾಡಿರುವ ಘಟನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದುಬೈನಿಂದ ಆಗಮಿಸಿದ್ದ ಕೊರೋನಾ ಸೋಂಕು ಶಂಕಿತ ವ್ಯಕ್ತಿಯೋರ್ವ ಬೆಂಗಳೂರಿನಲ್ಲಿ ರೂಂ ಸಿಗದೆ ದುಬೈನಿಂದ ಪರದಾಡಿ, ಮೆಜೆಸ್ಟಿಕ್ ಪ್ರದೇಶೇದಲ್ಲಿ ಓಡಾಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಏರ್​ಪೋರ್ಟ್​ ಸಿಬ್ಬಂದಿಯ ಬಳಿ ತಾನು ಚೆನ್ನೈನವನು, ದುಬೈನಿಂದ ಬೆಂಗಳೂರಿಗೆ ಬಂದಿದ್ದೇನೆ ಎಂದು ಹೇಳಿಕೊಂಡಿರುವ ವ್ಯಕ್ತಿಯೋರ್ವ ಕೈಗೆ ಸ್ಟಾಂಪ್ ಹಾಕಿದ್ದರೂ ನಗರದಾದ್ಯಂತ ಸುತ್ತಾಡುತ್ತಿದ್ದ ಘಟನೆ ವರದಿಯಾಗಿದೆ. ಮೂಲಗಳ ಪ್ರಕಾರ ಬೆಂಗಳೂರಿನ ಏರ್​ಪೋರ್ಟ್​ ಸಿಬ್ಬಂದಿಯ ಬಳಿ ತಾನು ಚೆನ್ನೈನವನು ಎಂದು ಹೇಳಿಕೊಂಡ ವ್ಯಕ್ತಿ, ದುಬೈನಿಂದ ಬೆಂಗಳೂರಿಗೆ ಬಂದಿದ್ದೇನೆ ಎಂದು ಹೇಳಿದ್ದಾನೆ. ಈ ವೇಳೆ ಆತನ ಕೈಗೆ ಸ್ಟಾಂಪ್ ಹಾಕಿದ್ದರೂ ಮನೆಗೆ ತೆರಳದೇ ಮೆಜೆಸ್ಟಿಕ್ ಪ್ರದೇಶದಲ್ಲಿ ಲಾಡ್ಜ್ ನಲ್ಲಿ ರೂಂ ಮಾಡಿ ಹೊರಗೆ ಒಡಾಡುತ್ತಿದ್ದರು. 

ವ್ಯಕ್ತಿಯ ಕೈಗೆ ಹಾಕಲಾಗಿದ್ದ ಸ್ಟಾಂಪ್ ಅನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದು, ಈ ವೇಳೆ ಸ್ಥಳಕ್ಕಾಗಿಮಿಸಿದ ಉಪ್ಪಾರಪೇಟೆ ಪೊಲೀಸರು ಕೈಗೆ ಸೀಲ್ ಹಾಕಿದ್ದರೂ ಹೊರಗೆ ಓಡಾಡುತ್ತಿರುವುದನ್ನು ಕಂಡು ವಿಚಾರಿಸಿದ್ದಾರೆ. ಈ ವೇಳೆ 'ಕೊರೋನಾ ಸೋಂಕು ತಗುಲಿದೆ ಎಂಬ ಕಾರಣಕ್ಕೆ ಲಾಡ್ಜ್​ನಲ್ಲಿ ರೂಂ ಸಿಗಲಿಲ್ಲ, ಅದಕ್ಕಾಗಿ ಓಡಾಡುತ್ತಿದ್ದೇನೆ ಎಂದು ಹೇಳಿರುವ ಆ ವ್ಯಕ್ತಿಯನ್ನು ಆ್ಯಂಬುಲೆನ್ಸ್​ನಲ್ಲಿ ರಾಜೀವ್ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

ಈಗಾಗಲೇ ಬೇರೆ ದೇಶಗಳಿಂದ ಏರ್​ಪೋರ್ಟ್​ಗೆ ಬರುವ ಪ್ರಯಾಣಿಕರಿಗೆ 14 ದಿನಗಳ ಕಾಲ ಮನೆಯಿಂದ ಆಚೆ ಬಾರದಿರಲು ಸೂಚಿಸಲಾಗಿದೆ. ಒಂದುವೇಳೆ ಅವರು ಮನೆಯಿಂದ ಆಚೆ ಬಂದರೆ ಸಾರ್ವಜನಿಕರಿಗೆ ತಿಳಿಯಲಿ ಎಂದು ಅವರ ಕೈ ಮೇಲೆ ಸ್ಟಾಂಪಿಂಗ್ ಹಾಕಲಾಗುತ್ತಿದೆ. ಆ ಸೀಲ್ ಇರುವುದರಿಂದ ಅವರ ಐಸೋಲೇಷನ್ ಅವಧಿ ಯಾವಾಗ ಮುಗಿಯುತ್ತದೆ ಎಂಬುದು ಸುಲಭವಾಗಿ ತಿಳಿಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com