ರಾಜ್ಯದಲ್ಲಿ ಈಗ 26 ಪ್ರಯೋಗಾಲಯ: ಪ್ರತಿನಿತ್ಯ 5 ಸಾವಿರ ಮಂದಿಗೆ ಸೋಂಕು ಪರೀಕ್ಷೆ

ರಾಜ್ಯದಲ್ಲಿ 26 ಪ್ರಯೋಗಾಲಯಗಳ ಕಾರ್ಯ ಆರಂಭಗೊಂಡಿದ್ದು, ಈ ಪ್ರಯೋಗಾಲಯಗಳು ಪ್ರತೀನಿತ್ಯ 5 ಮಂದಿಯ ಸೋಂಕು ಪರೀಕ್ಷೆ ನಡೆಸುವ ಸಾಮರ್ಥ್ಯಗಳನ್ನು ಹೊಂದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ 26 ಪ್ರಯೋಗಾಲಯಗಳ ಕಾರ್ಯ ಆರಂಭಗೊಂಡಿದ್ದು, ಈ ಪ್ರಯೋಗಾಲಯಗಳು ಪ್ರತೀನಿತ್ಯ 5 ಮಂದಿಯ ಸೋಂಕು ಪರೀಕ್ಷೆ ನಡೆಸುವ ಸಾಮರ್ಥ್ಯಗಳನ್ನು ಹೊಂದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಹೇಳಿದ್ದಾರೆ. 

ರಾಜ್ಯದಲ್ಲಿ ಗದಗ, ತುಮಕೂರು ಹಾಗೂ ವಿಜಯಪುರದಲ್ಲಿ ಮೂರು ನೂತನ ಕೊರೋನಾ ಪರೀಕ್ಷೆ ಪ್ರಯೋಗಾಲಯಗಳ ಪ್ರಾರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ರಾಜ್ಯದಲ್ಲಿ ಒಟ್ಟು 26 ಪ್ರಯೋಗಾಲಯಗಳಿಂದ ನಿತ್ಯ 5 ಸಾವಿನ ಮಂದಿಗೆ ಸೋಂಕು ಪರೀಕ್ಷೆ ನಡೆಸಬಹುದು. ಇದರಿಂದ ತ್ವರಿತವಾಗಿ ಸೋಂಕು ಗುರ್ತಿಸಿ ಬೇರೆಯವರಿಗೆ ಹರಡದಂತೆ ತಡೆಯಲು ನೆರವಾಗುತ್ತದೆ ಎಂದು ಹೇಳಿದ್ದಾರೆ. 

ಏಪ್ರಿಲ್ ಅಂತ್ಯದ ಒಳಗಾಗಿ 27 ಪ್ರಯೋಗಾಲಯಗಳನ್ನು ಪ್ರಾರಂಭಿಸುವುದಾಗಿ ಹೇಳಿದ್ದೆವು. ಫೆಬ್ರವರಿಯಲ್ಲಿ ಕೇವಲ 2ರಷ್ಟಿದ್ದ ಪ್ರಯೋಗಾಲಯಗಳು ಇಂದು 26ಕ್ಕೆ ಏರಿಕೆಯಾಗಿದೆ. ಮೇ ಅಂತ್ಯದೊಳಗೆ ರಾಜ್ಯದಲ್ಲಿ 60 ಪ್ರಯೋಗಾಲಯ ಪ್ರಾರಂಭಿಸುವ ಗುರಿ ಹೊಂದಿದ್ದೇವೆಂದು ತಿಳಿಸಿದ್ದಾರೆ. 

ಪ್ರಸ್ತುತ ರಾಜ್ಯದಲ್ಲಿ ಆರ್'ಟಿಸಿಪಿಆರ್-15, ಸಿಬಿಎನ್ಎಎಟಿ-03 ಹಾಗೂ ಖಾಸಗಿಯ ಎಂಟು ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com