ಲಾಕ್ ಡೌನ್ ನಡುವೆಯೂ ರೌಡಿಗಳ ಬೀದಿ ಕಾಳಗ: ಬೆಂಗಳೂರಿನಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ

ಲಾಕ್​ಡೌನ್​ ನಡುವೆಯೂ ಬೆಂಗಳೂರಲ್ಲಿ ರಕ್ತ ಹರಿದಿದೆ. ರೌಡಿ ಶೀಟರ್​ ಒಬ್ಬನ ಬರ್ಬರ ಹತ್ಯೆ ನಡೆದಿದೆ. ಬುಜ್ಜು ಅಲಿಯಾಸ್ ಬುಜ್ಜಿ ಹತ್ಯೆಯಾದ ರೌಡಿ ಶೀಟರ್. ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಲಾಕ್​ಡೌನ್​ ನಡುವೆಯೂ ಬೆಂಗಳೂರಲ್ಲಿ ರಕ್ತ ಹರಿದಿದೆ. ರೌಡಿ ಶೀಟರ್​ ಒಬ್ಬನ ಬರ್ಬರ ಹತ್ಯೆ ನಡೆದಿದೆ. ಬುಜ್ಜು ಅಲಿಯಾಸ್ ಬುಜ್ಜಿ ಹತ್ಯೆಯಾದ ರೌಡಿ ಶೀಟರ್. ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

ಈ ಹಿಂದೆ ರೌಡಿ ಡ್ಯಾನಿಯಲ್ ಸಂಬಂಧಿ ಸ್ಟಾಲಿನ್ ಹತ್ಯೆಯಲ್ಲಿ ಬುಜ್ಜು ಭಾಗಿಯಾಗಿದ್ದ ಎನ್ನಲಾಗಿದೆ. ಸ್ಟಾಲಿನ್ ಹತ್ಯೆ ಬಳಿಕ ಆತನ ಸಹಚರರು ಬುಜ್ಜು ಸಹೋದರ ವಿನೋದ್​​ನನ್ನು ಹತ್ಯೆಗೈದಿದ್ದರು. ಬಳಿಕ ಎರಡು ಕಡೆ ಒಂದೊಂದು ಹತ್ಯೆಯಾಗಿದೆ. ಹೀಗಾಗಿ ಇಬ್ಬರೂ ಸೈಲೆಂಟ್​ ಆಗಿರೋಣ ಎಂದು ಸಂಧಾನ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ರೌಡಿ ಶೀಟರ್ ಬುಜ್ಜು ಹತ್ಯೆಯಾಗಿದೆ. ಹಳೆಯ ದ್ವೇಷ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಈ ಅಂಶಗಳನ್ನು ಗಮನಿಸಿದರೆ ರೌಡಿ ಡ್ಯಾನಿಯಲ್ ಸಹಚರರಿಂದಲೇ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಈ ಬಗ್ಗೆ ತನಿಖೆಯ ನಂತರವಷ್ಟೇ ಮಾಹಿತಿ ತಿಳಿದುಬರಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com