ಬೆಂಗಳೂರಿನ ಮಲ್ಲೇಶ್ವರಂ ಕಂಟೈನ್ಮೆಂಟ್ ವಲಯ: ಮೂರು ವಲಯಗಳು ಪಟ್ಟಿಯಿಂದ ಹೊರಗೆ

ಬೆಂಗಳೂರು ನಗರದಲ್ಲಿ ಕಳೆದ 14 ದಿನಗಳಲ್ಲಿ ಮೂರು ವಾರ್ಡ್ ಗಳು ಕಂಟೈನ್ಮೆಂಟ್ ವಲಯದಿಂದ ಹೊರಬಂದಿವೆ. ಆದರೆ, ನಗರದ ಅತ್ಯಂತ ಹಳೆಯ ಹಾಗೂ ಜನನಿಬಿಢ ವಾರ್ಡ್ ಮಲ್ಲೇಶ್ವರಂ ಹೊಸದಾಗಿ ಕಂಟೈನ್ ಮೆಂಟ್ ವಲಯವಾಗಿ ಗುರುತಿಸಲ್ಪಟ್ಟಿದೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ನಗರದಲ್ಲಿ ಕಳೆದ 14 ದಿನಗಳಲ್ಲಿ ಮೂರು ವಾರ್ಡ್ ಗಳು ಕಂಟೈನ್ಮೆಂಟ್ ವಲಯದಿಂದ ಹೊರಬಂದಿವೆ. ಆದರೆ, ನಗರದ ಅತ್ಯಂತ ಹಳೆಯ ಹಾಗೂ ಜನನಿಬಿಢ ವಾರ್ಡ್ ಮಲ್ಲೇಶ್ವರಂ ಹೊಸದಾಗಿ ಕಂಟೈನ್ ಮೆಂಟ್ ವಲಯವಾಗಿ ಗುರುತಿಸಲ್ಪಟ್ಟಿದೆ

ಸದ್ಯ ನಗರದಲ್ಲಿ 21 ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಲಾಗಿದೆ. ದಕ್ಷಿಣ ಬೆಂಗಳೂರಿನ  ಹೊಸಹಳ್ಳಿ, ಕರೆಸಂದ್ರ, ಪೂರ್ವ ಬೆಂಗಳೂರಿನ ರಾಮಸ್ವಾಮಿ ಪಾಳ್ಯಗಳು ಕಂಟೈನ್ಮೆಂಟ್ ವಲಯಗಳ ಪಟ್ಟಿಯಿಂದ ಹೊರಬಂದಿವೆ. ಅದೇ ರೀತಿ ಬಾಪೂಜಿನಗರ ಕೂಡ ಪಟ್ಟಿಯಿಂದ ಹೊರಬಂದಿದೆ

ಈ ವಲಯಗಳಲ್ಲಿ ಕಳೆದ 14 ದಿನಗಳಲ್ಲಿ ಯಾವುದೇ ಹೊಸ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ. ಆದರೆ, ಮಲ್ಲೇಶ್ವರಂ ನಲ್ಲಿ 49 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಅದನ್ನು ಕಂಟೈನ್ಮೆಂಟ್ ವಲಯವನ್ನಾಗಿ ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com