ವಂದೇ ಭಾರತ್ ಮಿಷನ್: ಅಮೆರಿಕದಿಂದ ಬೆಂಗಳೂರಿಗೆ ಬಂದಿಳಿದ ಮೊದಲ ವಿಮಾನ, ಕೊವಿಡ್ ಲಕ್ಷಣವಿದ್ದ ಪ್ರಯಾಣಿಕ ಆಸ್ಪತ್ರೆಗೆ ದಾಖಲು

ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ವಂದೇ ಭಾರತ್ ಮಿಷನ್ ಏರ್ ಲಿಫ್ಟ್ ಕಾರ್ಯಾಚರಣೆ ಮುಂದವರೆದಿದ್ದು, ಅಮೆರಿಕದಲ್ಲಿದ್ದ ಭಾರತೀಯರನ್ನು ಹೊತ್ತ ವಿಮಾನ ಬೆಂಗಳೂರಿಗೆ ಬಂದಿಳಿದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ವಂದೇ ಭಾರತ್ ಮಿಷನ್ ಏರ್ ಲಿಫ್ಟ್ ಕಾರ್ಯಾಚರಣೆ ಮುಂದವರೆದಿದ್ದು, ಅಮೆರಿಕದಲ್ಲಿದ್ದ ಭಾರತೀಯರನ್ನು ಹೊತ್ತ ವಿಮಾನ ಬೆಂಗಳೂರಿಗೆ ಬಂದಿಳಿದಿದೆ.

ಮೂವರು ಮಕ್ಕಳು ಸೇರಿದಂತೆ ಒಟ್ಟು 109 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಿಂದ ಇಂದು ಬೆಳಗ್ಗೆ 9.22ಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ವಿಮಾನ ಇಳಿಯುತ್ತಿದ್ದಂತೆಯೇ ನಿಲ್ದಾಣದಲ್ಲಿ ಕೊಂಚ  ಗಂಭೀರ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರಣ ವಿಮಾನದಲ್ಲಿದ್ದ ಓರ್ವ ಪ್ರಯಾಣಿಕರ ಆರೋಗ್ಯ ಹದಗೆಟ್ಟಿತ್ತು. ಕೋವಿಡ್-19 ಲಕ್ಷಣಗಳಿಂದ ಬಳುತ್ತಿದ್ದ ಅವರನ್ನು ಕೂಡಲೇ ಆ್ಯಂಬುಲೆನ್ಸ್ ಮೂಲಕ ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಬಳಿಕ ಎಲ್ಲ ಪ್ರಯಾಣಿಕರನ್ನೂ  ಸುರಕ್ಷಿತವಾಗಿ ಇಳಿಸಲಾಯಿತು.

ವಿಮಾನ ನಿಲ್ದಾಣದಲ್ಲಿಯೇ ಎಲ್ಲ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಏತನ್ಮಧ್ಯೆ ಇಬ್ಬರು ಪ್ರಯಾಣಿಕರ ಬ್ಯಾಗ್ ಗಳು ನಾಪತ್ತೆಯಾಗಿ ಪ್ರಯಾಣಿಕರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ಕೂಡ ನಡೆಯಿತು. ಮತ್ತೆ ಕೆಲ ಪ್ರಯಾಣಿಕರು ಪ್ರಯಾಣಿದಿಂದ  ಆಯಾಸಗೊಂಡಿದ್ದರಾದರೂ, ಭಾರತಕ್ಕೆ ಸುರಕ್ಷಿತವಾಗಿ ಹಿಂದುರುಗಿದ ಸಮಾಧಾನದಲ್ಲಿದ್ದರು. 

ಇನ್ನು ಈ ಬಗ್ಗೆ ಮಾತನಾಡಿರುವ ಅಮೆರಿಕದಿಂದ ಬಂದ ಎಸ್ ಅರ್ಚನಾ ಎಂಬುವವರು, ನಾನು ಬೆಥೆಲ್ ಸ್ಕೂಲ್ ಆಫ್ ಸೂಪರ್ ನ್ಯಾಚುರಲ್ ಮಿನಿಸ್ಟ್ರಿಯ 2ನೇ ವರ್ಷದ ಥಿಯಾಲಜಿ ವಿದ್ಯಾರ್ಥಿನಿ. ಕಳೆದ ಮಾರ್ಚ್ ನಿಂದಲೂ ನಾನು ಭಾರತಕ್ಕೆ ಬರಲು ಪ್ರಯತ್ನಿಸುತ್ತಿದ್ದೆ,. ಆದರೆ ನನ್ನ ಬಳಿ  ಕೆಲಸವೂ ಇರಲಿಲ್ಲ. ಕೈಯಲ್ಲಿದ್ದ ಹಣ ಕೂಡ ಖಾಲಿಯಾಗಿತ್ತು. ಆದರೆ ಭಾರತ ಸರ್ಕಾರದ ನೆರವಿನಿಂದ ತನ್ನ ಮಾತೃ ದೇಶಕ್ಕೆ ವಾಪಸ್ ಆಗಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಇಂದು ಬೆಂಗಳೂರಿಗೆ ಬಂದ ಎಲ್ಲ ಪ್ರಯಾಣಿಕರನ್ನೂ 8 ಬಿಎಂಟಿಸ್ ಬಸ್ ಗಳಲ್ಲಿ ಎಂಜಿ ರಸ್ತೆ ಮತ್ತು ಹೊಸೂರು ರಸ್ತೆಯಲ್ಲಿರುವ ಖಾಸಗಿ ಹೊಟೆಲ್ ಗೆ ರವಾನಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ವಂದೇ ಭಾರತ್ ಮಿಷನ್ ನ  ಮೊದಲ ಹಂತದಲ್ಲಿ ಬೆಂಗಳೂರಿಗೆ ಒಟ್ಟು 7 ವಿಮಾನಗಳು ಬರಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com