ಬೆಂಗಳೂರು: ಕಂಟೈನ್ ಮೆಂಟ್ ವಲಯಗಳಲ್ಲಿ ಸ್ವಾಬ್ ಸಂಗ್ರಹ ಆರಂಭ

ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರಿಂದ ಸ್ವಾಬ್ ಸಂಗ್ರಹ ಪಾದರಾನಪುರದ ಮೂಲಕ ಗುರುವಾರ ಆರಂಭವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರಿಂದ ಸ್ವಾಬ್ ಸಂಗ್ರಹ ಪಾದರಾನಪುರದ ಮೂಲಕ ಗುರುವಾರ ಆರಂಭವಾಗಿದೆ.

ಮೊದಲ ದಿನ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು 11 ಸ್ವಾಬ್ ಮಾದರಿಗಳನ್ನು  ಸಂಗ್ರಹಿಸಿದರು. ಗೋರಿಪಾಳ್ಯ ರೆಫೆರಲ್ ಆಸ್ಪತ್ರೆ ಮತ್ತು ಜಗಜೀವನರಾಂ ಪೊಲೀಸ್ ಠಾಣೆ ಬಳಿಕ ಸಂಚಾರಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. 

ಅಲ್ಫಾತ್ ನಗರದ ಜನರಿಂದಲೂ ಮಾದರಿ ಸಂಗ್ರಹಿಸಲಾಗುತ್ತಿದೆ.ಮಾದರಿ ಸಂಗ್ರಹಕ್ಕಾಗಿ ಶುಕ್ರವಾರ ಎರಡು ಬಸ್ ಗಳ ಮೂಲಕ ಜನರನ್ನು ಕರೆತರಲಾಗುವುದು, 60 ವರ್ಷಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು ಮತ್ತು ಮಕ್ಕಳ ಹೆಚ್ಚಿನ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಬಿಬಿಎಪಿ ಆಯುಕ್ತ ಬಿಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ. 

ಹೊಗಸಂದ್ರದಲ್ಲಿನ 130 ಬಿಹಾರಿ ವಲಸಿಗರ ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com