ಕೊರೋನಾ ವೈರಸ್: ರಾಜ್ಯದಲ್ಲಿ ಮತ್ತೆ 54 ಹೊಸ ಪಾಸಿಟಿವ್ ಪ್ರಕರಣಗಳು ದಾಖಲು, ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆ

ಮಾರಕ ಕೊರೋನಾ ವೈರಸ್ ಹಾವಳಿ ಕರ್ನಾಟಕದಲ್ಲಿ ಮುಂದವರೆದಿದ್ದು, ನಿನ್ನೆ ಸಂಜೆಯಿಂದ ಇಲ್ಲಿಯವರೆಗೂ ಮತ್ತೆ 54 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾರಕ ಕೊರೋನಾ ವೈರಸ್ ಹಾವಳಿ ಕರ್ನಾಟಕದಲ್ಲಿ ಮುಂದವರೆದಿದ್ದು, ನಿನ್ನೆ ಸಂಜೆಯಿಂದ ಇಲ್ಲಿಯವರೆಗೂ ಮತ್ತೆ 54 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆಯಾಗಿದೆ, ಈ ಪೈಕಿ 497 ಮಂದಿ ಸೋಂಕಿತರು ಗುಣಮುಖರಾಗಿದ್ದು, 37 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಇಂದು ಮತ್ತೆ 54 ಮಂದಿಗೆ ಸೋಂಕು
ಇನ್ನು ನಿನ್ನೆ ಸಂಜೆಯಿಂದ ಇಲ್ಲಿಯವರೆಗೂ ರಾಜ್ಯದಲ್ಲಿ ಮತ್ತೆ 54 ಮಂದಿಗೆ ಸೋಂಕು ದೃಢವಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆಯಾಗಿದೆ. ಈ ಪೈಕಿ 36 ಪುರುಷರು, 18 ಮಹಿಳೆಯರಲ್ಲಿ ಕೊರೋನಾ ಸೋಂಕು ಕಂಡುಬಂದಿದ್ದು, 54 ಕೊರೋನಾ ಸೋಂಕಿತರ ಪೈಕಿ  10 ಮಕ್ಕಳಿಗೂ ವೈರಸ್​ ತಗುಲಿದೆ.

ಮಂಡ್ಯ ಜಿಲ್ಲೆಯೊಂದರಲ್ಲೇ 22 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕಲಬುರಗಿಯಲ್ಲಿ 10, ಹಾಸನ ಜಿಲ್ಲೆಯಲ್ಲಿ 6, ಧಾರವಾಡದಲ್ಲಿ 4, ಯಾದಗಿರಿಯಲ್ಲಿ 3, ಶಿವಮೊಗ್ಗದಲ್ಲಿ 2, ಕೋಲಾರದಲ್ಲಿ 3, ದಕ್ಷಿಣ ಕನ್ನಡದಲ್ಲಿ 2, ಉಡುಪಿಯಲ್ಲಿ 1, ವಿಜಯಪುರದಲ್ಲಿ 1 ಪ್ರಕರಣ ಪತ್ತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com