ಮಂಡ್ಯಗೆ ಕುತ್ತು ತಂದ ವಲಸೆ ಕಾರ್ಮಿಕರು; ಒಂದೇ ದಿನ 22 ಮಂದಿಗೆ ಸೋಂಕು

ಮಂಡ್ಯಗೆ ಕುತ್ತು ತಂದ ವಲಸೆ ಕಾರ್ಮಿಕರು; ಒಂದೇ ದಿನ 22 ಮಂದಿಗೆ ಸೋಂಕು

ಸಕ್ಕರೆ ನಾಡು ಮಂಡ್ಯದಲ್ಲಿ ಒಂದೇ ದಿನ 22 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 22 ಮಂದಿಯ ಪೈಕಿ 19 ಮಂದಿ ವಲಸೆ ಕಾರ್ಮಿಕರಾಗಿದ್ದು, ಅಂತರ್ ರಾಜ್ಯ ಪ್ರಯಾಣದ ಹಿನ್ನಲೆ ಹೊಂದಿದ್ದಾರೆ.

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಒಂದೇ ದಿನ 22 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 22 ಮಂದಿಯ ಪೈಕಿ 19 ಮಂದಿ ವಲಸೆ ಕಾರ್ಮಿಕರಾಗಿದ್ದು, ಅಂತರ್ ರಾಜ್ಯ ಪ್ರಯಾಣದ ಹಿನ್ನಲೆ ಹೊಂದಿದ್ದಾರೆ.

ಹೌದು.. ಇಂದು ರಾಜ್ಯದಲ್ಲಿ ಹೊಸದಾಗಿ 54 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆಯಾಗಿದೆ. 36 ಪುರುಷರು, 18 ಮಹಿಳೆಯರಲ್ಲಿ ಕೊರೊನಾ ಅಟ್ಯಾಕ್ ಆಗಿದ್ದು, 54 ಕೊರೊನಾ ಸೋಂಕಿತರ ಪೈಕಿ 10  ಮಕ್ಕಳಿಗೂ ವೈರಸ್​ ತಗುಲಿದೆ. ಇಂದು ಪತ್ತೆಯಾದ 54 ಪ್ರಕರಣಗಳ ಪೈಕಿ ಬರೊಬ್ಬರಿ 22 ಪ್ರಕರಣಗಳು ಮಂಡ್ಯ ಜಿಲ್ಲೆಯೊಂದರಿಂದಲೇ ವರದಿಯಾಗಿದೆ. ಈ 22 ಪ್ರಕರಣಗಳ ಪೈಕಿ 19 ಪ್ರಕರಣಗಳು ವಲಸೆ ಕಾರ್ಮಿಕರದ್ದಾಗಿದ್ದು, ಎಲ್ಲರೂ ಅಂತರ್ ರಾಜ್ಯ ಪ್ರಯಾಣದ ಹಿನ್ನಲೆಯನ್ನು  ಹೊಂದಿದ್ದಾರೆ. 

P-1097, P-1098, P-1099, P-1100, P-1101, P-1102, P-1103, P-1104, P-1105, P-1106, P-1107, P-1108, P-1109, P-1110, P-1111, P-1115, P-1116, P-1117 ಈ ಸೋಂಕಿತರು ಮಹಾರಾಷ್ಟ್ರದ ಮುಂಬೈನಿಂದ  ಬಂದವರಾಗಿದ್ದಾರೆ.

ಉಳಿದಂತೆ P-1112, P-1113, P-1114,P-1125 ಸೋಂಕಿತರು P-869ರ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ,  ಇಂದಿನ 22 ಪ್ರಕರಣಗಳೊಂದಿಗೆ ಮಂಡ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com