ಇಂಟರ್ ಸಿಟಿ ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ಕೋರಿ ಭಾರತೀಯ ರೈಲ್ವೆಗೆ ರಾಜ್ಯ ಸರ್ಕಾರ ಮನವಿ

ರಾಜ್ಯದೊಳಗೆ ಪ್ರಮುಖ ನಗರಗಳ ನಡುವೆ ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಭಾರತೀಯ ರೈಲ್ವೆಗೆ ಮನವಿ ಮಾಡಿಕೊಂಡಿದೆ. ಕೆಲ ದಿನಗಳಲ್ಲಿ ತೀರ್ಮಾನವೊಂದನ್ನು ಕೈಗೊಳ್ಳವುದಾಗಿ ರೈಲ್ವೆ ಮಂಡಳಿ ತಿಳಿಸಿದೆ. 
ದಿನ ಗೂಲಿ ಕಾರ್ಮಿಕರಿಗೆ ಆಹಾರ ಕಿಟ್ ನೀಡುತ್ತಿರುವ ಭಾರತೀಯ ರೈಲ್ವೆ ಅಧಿಕಾರಿಗಳು
ದಿನ ಗೂಲಿ ಕಾರ್ಮಿಕರಿಗೆ ಆಹಾರ ಕಿಟ್ ನೀಡುತ್ತಿರುವ ಭಾರತೀಯ ರೈಲ್ವೆ ಅಧಿಕಾರಿಗಳು

ಬೆಂಗಳೂರು: ರಾಜ್ಯದೊಳಗೆ ಪ್ರಮುಖ ನಗರಗಳ ನಡುವೆ ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡುವಂತೆ ರಾಜ್ಯಸರ್ಕಾರ ಭಾರತೀಯ ರೈಲ್ವೆಗೆ ಮನವಿ ಮಾಡಿಕೊಂಡಿದೆ. ಕೆಲ ದಿನಗಳಲ್ಲಿ ತೀರ್ಮಾನವೊಂದನ್ನು ಕೈಗೊಳ್ಳುವುದಾಗಿ ರೈಲ್ವೆ ಮಂಡಳಿ ತಿಳಿಸಿದೆ. 

ಮೈಸೂರು, ಬೆಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಂತಹ ನಗರಗಳ ನಡುವೆ ಪ್ರತಿದಿನ ಎಂಟು ರೈಲುಗಳನ್ನು ಓಡಿಸಲು ಸರ್ಕಾರ ಉದ್ದೇಶಿಸಿದೆ ಎಂಬುದು ಸರ್ಕಾರದ ಉನ್ನತ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ. ವಿವರಗಳನ್ನು ರಾಜ್ಯವು ಇನ್ನೂ ಅಂತಿಮಗೊಳಿಸುತ್ತಿದೆ.

ಸರ್ಕಾರದಿಂದ ಮನವಿ ಬಂದಿದೆ. ಮಂಡಳಿಯಿಂದ ಒಂದೆರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪ್ರಸ್ತಾವನೆ ಪ್ರಕಾರ, ನವದೆಹಲಿ ಮತ್ತು ಬೆಂಗಳೂರು ನಡುವಿನ ಮಾರ್ಗದಂತೆ ಎರಡು ನಗರಗಳ ನಡುವೆ ಸಂಚರಿಸುವ ರೈಲುಗಳು ಬೇರೆ ಎಲ್ಲಿಯೂ ನಿಲುಗಡೆಯಾಗಲ್ಲ, ಎಸಿ ಮತ್ತು ಎಸಿಯೇತರ ಬೋಗಿಗಳು ದೊರೆಯಲಿವೆ. ಕಾಯ್ದಿರಿಸಿದ ಪ್ರಯಾಣಿಕರು ಮಾತ್ರ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಮಾರ್ಚ್ 22ರಿಂದಲೂ ಇಂಟರ್ ಸಿಟಿ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಗೃಹ ಸಚಿವಾಲಯ, ಬೆಂಗಳೂರು ರೈಲ್ವೆ ವಿಭಾಗದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ರೈಲ್ವೆ ಮಂಡಳಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com