ಮುಖ್ಯಮಂತ್ರಿ ಯಡಿಯೂರಪ್ಪ
ಮುಖ್ಯಮಂತ್ರಿ ಯಡಿಯೂರಪ್ಪ

ಇನ್ನೆರಡು ದಿನದಲ್ಲಿ ಹೋಟೆಲ್ ಪುನರಾರಂಭ ಕುರಿತು ನಿರ್ಧಾರ: ಮುಖ್ಯಮಂತ್ರಿ ಯಡಿಯೂರಪ್ಪ

ಹೋಟೆಲ್ ಉದ್ಯಮ ಪುನರಾರಂಭ ಸಂಬಂಧ ಇನ್ನೆರಡು ದಿನದಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರು: ಹೋಟೆಲ್ ಉದ್ಯಮ ಪುನರಾರಂಭ ಸಂಬಂಧ ಇನ್ನೆರಡು ದಿನದಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ನಿಯೋಗ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಸಂಘದ ಅಧ್ಯಕ್ಷರು ಮತ್ತು ಪದಾಧಿ ಕಾರಿಗಳನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿ ಅವರ ಜೊತೆ ಚರ್ಚೆ ನಡೆಸಿತು.ಹೋಟೆಲ್ ಆರಂಭಕ್ಕೆ ಅವಕಾಶ ಕೊಡುವಂತೆ ಮುಖ್ಯಮಂತ್ರಿಗೆ  ಮನವಿ ಸಲ್ಲಿಸಿತು.

ಹೋಟೆಲ್ ಕಾರ್ಮಿಕರಿಗೂ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಿಸಬೇಕು, ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ ಹಾಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತಾ ಕ್ರಮಗಳೊಂದಿಗೆ ಹೋಟೆಲ್ ಆರಂಭಿಸುತ್ತೇವೆ ಇದಕ್ಕ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿ ತು.ಹೋಟೇಲ್  ಗಳಲ್ಲಿ ಕೆಲಸ ಮಾಡುತ್ತಿರುವ ಸಪ್ಲೈಯರ್ ಗಳು,ಅಡುಗೆ ಕೆಲಸಗಾರರು,ಕ್ಲೀನಿಂಗ್ ವಿಭಾಗದವರು,ಮೇಲ್ವಿಚಾರಣೆ,ರೂಂ ಬಾಯ್ ಗಳು,ಎಲೆಕ್ಟ್ರೀಷಿಯನ್ ಗಳು,ಗಾರ್ಡನ್ ಮೇಲ್ವಿಚಾರಣೆ,ಪಾರ್ಕಿಂಗ್ ಹಾಗೂ ಭದ್ರತಾ ಸಿಬ್ಬಂದಿಗಳು ಕೆಲಸವಿಲ್ಲದೆ ಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ 2 ತಿಂಗಳಿಂದ ಹೊಟೇಲುಗಳು ಸ್ಥಗಿತವಾಗಿರುವುದರಿಂದ ನಷ್ಟಕ್ಕೆ ಸಿಲುಕಿವೆ.ಟ್ಯಾಕ್ಸ್,ವಿದ್ಯುತ್ ಬಿಲ್,ಪ್ರವಾಸಿ ಶುಲ್ಕ,ಅಬಕಾರಿ ಶುಲ್ಕಗಳನ್ನು,ಜಿಎಸ್ಟಿ,ಸಿಎಸ್ ಟಿ ತೆರಿಗೆಗಳನ್ನು ಕಡಿತಗೊಳಿಸಿ ಎಂದು ಮನವಿ ಸಲ್ಲಿಸಿದ್ದಾರೆ.ಹೋಟೆಲ್ ಮಾಲೀಕರ ಸಂಘದ ಮನವಿ ಆಲಿಸಿದ  ಮುಖ್ಯಮಂತ್ರಿ ಇನ್ನೆರಡು ಕಾಯಿರಿ ನಂತರ ನಿರ್ಧಾರ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com