ಎಲ್ಲಿ ಮಾಡಿಸ್ಕೊಂಡೆಯಮ್ಮಾ ಬಳೆಯನ್ನಾ? ಚಿನ್ನದ್ದಾ?... ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಹಾಸ್ಯ ಚಟಾಕಿ!

ಇಂತಹ ಸಮಾರಂಭಕ್ಕೆ ಆರ್ಟಿಫಿಷಿಯಲ್ ಬಳೆ ಹಾಕಿಕೊಂಡು ಬರಬಾರದಮ್ಮಾ, ಚಿನ್ನದ ಬಳೆ ಹಾಕಿಕೊಂಡು‌ ಬರಬೇಕು ಎಂದು ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹಾಸ್ಯ ಚಟಾಕಿ ಹಾರಿಸಿದ ಪ್ರಸಂಗ ನಡೆಯಿತು. 
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಇಂತಹ ಸಮಾರಂಭಕ್ಕೆ ಆರ್ಟಿಫಿಷಿಯಲ್ ಬಳೆ ಹಾಕಿಕೊಂಡು ಬರಬಾರದಮ್ಮಾ, ಚಿನ್ನದ ಬಳೆ ಹಾಕಿಕೊಂಡು‌ ಬರಬೇಕು ಎಂದು ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹಾಸ್ಯ ಚಟಾಕಿ ಹಾರಿಸಿದ ಪ್ರಸಂಗ ನಡೆಯಿತು. 

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು. 

ಈ ವೇಳೆ ವಿಜೇತೆ ಖುಷಿ ದಿನೇಶ್ ತಮ್ಮ ಪ್ರಶಸ್ತಿ ಪಡೆಯಲು ಬಂದಾಗ ಖುಷಿ ಅವರ ಬಳೆ ಸಿಎಂ ಗಮನ ಸೆಳೆದಿದೆ. ಸಮಾರಂಭದಲ್ಲಿ ಖುಷಿ ದಿನೇಶ್ ಕೈ ಹಿಡಿದು ಏನಮ್ಮಾ, ಎಲ್ಲಿ ಮಾಡಿಸಿಕೊಂಡೆ ಈ ಬಳೆಯನ್ನ? ಚಿನ್ನದ್ದಾ? ಎಷ್ಟು ಈ ಬಳೆಯ ಬೆಲೆ? ಎಂದು ವಿಚಾರಿಸಿದ್ದಾರೆ. ಇದಕ್ಕೆ ಉತ್ತರಿಸಿದ ಇಲ್ಲ ಸರ್, ಕೃತಕ ಬಳೆ ಎಂದು ಹೇಳಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು, ಚಿನ್ನದ್ದು ಮಾಡಿಸೋದಲ್ವಾ... ಇಂತಹ ಸಮಾರಂಭಗಳಿಗೆ ಆರ್ಟಿಫಿಯಲ್ ಬಳೆ ಹಾಕಬಾರದು. ಚಿನ್ನದ ಬಳೆ ಹಾಕಿಕೊಂಡು ಬರಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು ಎಂದು ಹೇಳಿ, ನಿಮ್ಮ ಹೆಸರೇನು? ಯಾವ ಕ್ರೀಡೆಗೆ ಪ್ರಶಸ್ತಿ ಲಭಿಸಿದೆ ಎಂದು ವಿಚಾರಿಸಿದರು. 

ಇದಕ್ಕೆ ಉತ್ತರಿಸಿದ ಖುಷಿ ದಿನೇಶ್ ಅವರು, ನನಗೆ ಈಜಿನಲ್ಲಿ ಪ್ರಶಸ್ತಿ ಬಂದಿದೆ ಎಂದು ಹೇಳಿದರು. ಸಿಎಂ ಜೊತೆಗಿನ ಈ ಸಂಭಾಷಣೆಯಿಂದ ಖುಷಿಯವರು ಪುಳಕಿತರಾಗಿದ್ದರು. 

ಬಳಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿದ ಬಳಿಕ ಮಾತನಾಡಿದ ಯಡಿಯೂರಪ್ಪ ಅವರು, ಕ್ರೀಡಾಪಟುಗಳು ತಮ್ಮ ಈವರೆಗಿನ ಸಾಧನೆಗಷ್ಟ ಸೀಮಿತರಾಗದೆ ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕೂಟಗಳಲ್ಲಿ ಇನ್ನಷ್ಟು ಪದಕ ಗೆಲ್ಲಬೇಕು. ಈ ಹಂತದಲ್ಲಿ ಹಿನ್ನಡೆಯಾಗದಂತೆ ಕಟ್ಟೆಚ್ಚರವಹಿಸಿ. ಸಾಧನೆಯ ಹಾದಿಯಲ್ಲಿ ಸತತ ಪರಿಶ್ರಮಕ್ಕೆ ಯಾವುದೇ ಪರ್ಯಾಯ ಮಾರ್ಗಗಳಿಲ್ಲ. ಮಾತೇ ಸಾಧನೆಯಾಗದೆ ಸಾಧನೆಯೇ ಮಾತನಾಡುವ ಹಾಗೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com