ಎಚ್.ಡಿ. ಕೋಟೆ: ಕಾಡಾನೆ ದಾಳಿಗೆ ವೃದ್ಧ ಸಾವು, ಎರಡು ಮನೆ ಜಖಂ

 ಬೆಳ್ಳಂಬೆಳಗ್ಗೆ ಮನೆಯೊಂದರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ವೃದ್ಧನೋರ್ವ ಮೃತಪಟ್ಟಿರುವ ಘಟನೆ  ಜಿಲ್ಲೆಯ ಎಚ್.ಡಿ.ಜೋಟೆ ತಾಲೂಕಿನ ನೆಟ್ಟಕಲ್ಲಹುಂಡಿ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಬೆಳ್ಳಂಬೆಳಗ್ಗೆ ಮನೆಯೊಂದರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ವೃದ್ಧನೋರ್ವ ಮೃತಪಟ್ಟಿರುವ ಘಟನೆ  ಜಿಲ್ಲೆಯ ಎಚ್.ಡಿ.ಜೋಟೆ ತಾಲೂಕಿನ ನೆಟ್ಟಕಲ್ಲಹುಂಡಿ ಗ್ರಾಮದಲ್ಲಿ ನಡೆದಿದೆ.

ಚಿನ್ನಪ್ಪ (58) ಮೃತ ವೃದ್ಧ. ಚಿನ್ನಪ್ಪ, ಕೊಟ್ಟೂರಮ್ಮ ನೆಲೆಸಿದ್ದ ಮನೆ ಮೇಲೆ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ಮಾಡಿದೆ. ಪರಿಣಾಮ ಕಾಡಾನೆ ದಾಳಿಗೆ ಚಿನ್ನಪ್ಪ ಮೃತಪಟ್ಟಿದ್ದು, ಅವರ  ಪತ್ನಿ ಕೊಟ್ಟೂರಮ್ಮ ಅವರಿಗೆ ಗಂಭೀರ ಗಾಯಗಳಾಗಿವೆ.

ಸದ್ಯ ಗಾಯಾಳು ಕೊಟ್ಟೂರಮ್ಮ ಅವರನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. 

ಕಾಡಾನೆ ದಾಳಿಯಿಂದ ಎರಡು ಮನೆಗಳು ಸಂಪೂರ್ಣ ಹಾನಿಯಾಗಿದೆ‌. ಘಟನೆಗೆ ಸಂಬಂಧಿಸಿದಂತೆ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com