ಶೀಘ್ರದಲ್ಲೇ ಪಾದಚಾರಿ ಸ್ನೇಹಿ ಆಗಲಿದೆ ಬೆಂಗಳೂರಿನ ಗಾಂಧಿ ಬಜಾರ್ ರಸ್ತೆ!

ರಾಜ್ಯ ರಾಜಧಾನಿಯ ಹಳೆಯ ಪ್ರದೇಶಗಳಲ್ಲಿ ಒಂದಾಗಿರುವ ಗಾಂಧಿ ಬಜಾರ್ ರಸ್ತೆಗೆ ಹೊಸ ರೂಪವನ್ನು ಕೊಟ್ಟು ಪಾದಚಾರಿ ಸ್ನೇಹಿ ತಾಣವನ್ನಾಗಿ ಮಾಡಲು ರೂಪುರೇಷೆಗಳು ಸಿದ್ಧಗೊಂಡಿವೆ. 
ಗಾಂಧಿ ಬಜಾರ್
ಗಾಂಧಿ ಬಜಾರ್
Updated on

ಬೆಂಗಳೂರು: ರಾಜ್ಯ ರಾಜಧಾನಿಯ ಹಳೆಯ ಪ್ರದೇಶಗಳಲ್ಲಿ ಒಂದಾಗಿರುವ ಗಾಂಧಿ ಬಜಾರ್ ರಸ್ತೆಗೆ ಹೊಸ ರೂಪವನ್ನು ಕೊಟ್ಟು ಪಾದಚಾರಿ ಸ್ನೇಹಿ ತಾಣವನ್ನಾಗಿ ಮಾಡಲು ರೂಪುರೇಷೆಗಳು ಸಿದ್ಧಗೊಂಡಿವೆ. 

ಗಾಂಧಿ ಬಜಾರ್'ನ್ನು ಪಾದಚಾರಿ ಸ್ನೇಹಿ ತಾಣವನ್ನಾಗಿ ಮಾಡಲು ಸ್ಥಳೀಯ ಸಮುದಾಯಗಳು, ಸರ್ಕಾರ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಬ್ಲ್ಯೂಪ್ರಿಂಟ್ ಸಿದ್ಧಗೊಂಡಿದೆ ಎಂದು ತಿಳಿದುಬಂದಿದೆ. 

ಈ ಕುರಿತು ಮಾಹಿತಿ ನೀಡಿರುವ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತೆ ವಿ. ಮಂಜುಳಾ ಅವರು, ಸ್ಥಳೀಯರು, ಸ್ಥಲೀಯ ನಿವಾಸಿಗಳು, ವಾಣಿಜ್ಯ ಕಟ್ಟಡಗಳು, ಜನಪ್ರತಿನಿಧಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ ಎಂದು ಹೇಳಿದ್ದಾರೆ. 

ಗಿಝ್ ಎಂಬ ಜರ್ಮನಿ ಮೂಲಕ ಕಂಪನಿಯು ಯೋಜನೆ ವಿನ್ಯಾಸಗೊಳಿಸಿದ್ದು, ಯಾವೆಲ್ಲಾ ರಸ್ತೆಗಳನ್ನು ಪಾದಚಾರಿ ಮಾರ್ಗಗಳನ್ನಾಗಿ ಮಾಡಬಹುದು ಎಂಬುದರ ಕುರಿತು ಸ್ಥಳೀಯರು ಮಾಹಿತಿ, ಸಲಹೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಸಮಗ್ರ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಪ್ರೊ.ಆಶಿಶ್ ವರ್ಮಾ ಅವರು ಮಾತನಾಡಿ,  ಚರ್ಚ್ ಸ್ಟ್ರೀಟ್‌ನ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಪ್ರಭಾವದ ಮೌಲ್ಯಮಾಪನ ಅಧ್ಯಯನವನ್ನು ನಡೆಸಲಾಗುತ್ತಿದೆ. ಶೇ.75ರಷ್ಟು ವಾಣಿಜ್ಯ ಮಳಿಗೆಗಳ ಮಾಲೀಕರು ಧನಾತ್ಮಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಸಾಕಷ್ಟು ರಸ್ತೆಗಳಲ್ಲಿ ಪಾರ್ಕಿಂಗ್ ಸಮಸ್ಯೆಗಳೇ ತಲೆದೋರಿದೆ. ಶೇ.46ರಷ್ಟು ಜನರು ಸಾರಿಗೆ ವ್ಯವಸ್ಥೆಯನ್ನು ಬಳಕೆ ಮಾಡುತ್ತಿದ್ದಾರೆ. ಗಾಂಧಿ ಬಜಾರ್ ನಲ್ಲಿ ಸಾರಿಗೆ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದಿದ್ದಾರೆ. 

ಚರ್ಚ್ ಸ್ಟ್ರೀಟ್ ಪ್ರಮುಖವಾಗಿದ್ದು, ಅಧಿಕಾರಿಗಳು ಸಂಚಾರ ಮತ್ತು ಇತರ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸುತ್ತಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com