ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಾಮರಾಜನಗರ: ಪ್ರಿಯಕರನ ಜೊತೆ ಸೇರಿ‌ ಪತಿ ಕೊಲೆ, ನಾಪತ್ತೆ ನಾಟಕವಾಡಿ ಸಿಕ್ಕಿಬಿದ್ದ ಪತ್ನಿ!

ಪ್ರಿಯಕರನ ಜೊತೆಗೂಡಿ ಪತ್ನಿಯೊಬ್ಬಳು ತನ್ನ ಪತಿಯನ್ನೇ ಕೊಲೆ ಮಾಡಿ ಬಳಿಕ ನಾಪತ್ತೆ ನಾಟಕ ಆಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ತೊಂಡವಾಡಿಯಲ್ಲಿ ನಡೆದಿದೆ.
Published on

ಚಾಮರಾಜನಗರ: ಪ್ರಿಯಕರನ ಜೊತೆಗೂಡಿ ಪತ್ನಿಯೊಬ್ಬಳು ತನ್ನ ಪತಿಯನ್ನೇ ಕೊಲೆ ಮಾಡಿ ಬಳಿಕ ನಾಪತ್ತೆ ನಾಟಕ ಆಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ತೊಂಡವಾಡಿಯಲ್ಲಿ ನಡೆದಿದೆ.

ರಾಘವಪುರ ಗ್ರಾಮದ ನಾಗರಾಜನಾಯ್ಕ(40) ಮೃತ ವ್ಯಕ್ತಿ. ಹೆಂಡತಿ ಪದ್ಮಾ(26) ಹಾಗೂ ಈಕೆಯ ಪ್ರಿಯಕರ ಮಣಿಕಂಠ (26)ನನ್ನು ಪ್ರಕರಣ ಸಂಬಂಧ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಕಳೆದ ಸೆಪ್ಟೆಂಬರ್ 11ರ ಮಧ್ಯರಾತ್ರಿ ತೊಂಡವಾಡಿ ಜಮೀನೊಂದರಲ್ಲಿ ರಾಸಲೀಲೆ ಆಡುತ್ತಿದ್ದ ವೇಳೆ ಗಂಡನ ಕೈಗೆ ಇವರಿಬ್ಬರೂ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಪ್ರಿಯಕರನ ಜೊತೆಗೂಡಿ ಹೊಡೆದು ಕೊಂದು ಕಳಲೆ ಕಾಲುವೆಗೆ ಬಿಸಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಮೈಸೂರಿಗೆ ತೆರಳುತ್ತೇನೆಂದು ಹೋದವರು ಇನ್ನೂ ಬಂದಿಲ್ಲ ಎಂದು ಆರೋಪಿಗಳಿಬ್ಬರು ಸೆ.16ರಂದು ಬೇಗೂರು ಠಾಣೆಗೆ ದೂರು ನೀಡಿದ್ದಾರೆ. ಪದ್ಮಾ ಮಾತಿನಲ್ಲಿ ಕಪಟ ಇರುವುದನ್ನು ಗುರುತಿಸಿದ ಪೊಲೀಸರು, ಹೆಚ್ಚಿನ ವಿಚಾರಣೆ ಕೈಗೊಂಡಾಗ ಅನೈತಿಕ‌ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳು ಶವವನ್ನು ಎಸೆದಿದ್ದೇವೆ ಎಂದು ಹೇಳಿರುವುದರಿಂದ ಪೊಲೀಸರು ಮೃತದೇಹ ಹುಡುಕುತ್ತಿದ್ದಾರೆ. 

ಬೇಗೂರು ಪೊಲೀಸ್ ಠಾಣೆಯಲ್ಲಿ ಈವರೆಗೂ ನಾಪತ್ತೆ ಪ್ರಕರಣವಷ್ಟೇ ದಾಖಲಾಗಿದೆ.

ವರದಿ: ಗುಳಿಪುರ ನಂದೀಶ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com