ಬೆಂಗಳೂರು: 6 ತಿಂಗಳ ಬಳಿಕ ಇಸ್ಕಾನ್ ದೇಗುಲ ಭಕ್ತರ ದರ್ಶನಕ್ಕೆ ಮುಕ್ತ!

ಕೊವಿಡ್-19 ಲಾಕ್ಡೌನ್ ಹಿನ್ನಲೆಯಲ್ಲಿ ಬಂದ್ ಆಗಿದ್ದ ಬೆಂಗಳೂರಿನ ಖ್ಯಾತ ಇಸ್ಕಾನ್ ದೇಗುಲ ಸತತ ಆರು ತಿಂಗಳ ಬಳಿಕ ಮೊದಲ ಬಾರಿಗೆ ಭಕ್ತರ ದರ್ಶನಕ್ಕೆ ದೇಗುಲ ತೆರೆದಿದೆ.
ಇಸ್ಕಾನ್ ದೇಗುಲ
ಇಸ್ಕಾನ್ ದೇಗುಲ
Updated on: 

ಬೆಂಗಳೂರು: ಕೊವಿಡ್-19 ಲಾಕ್ಡೌನ್ ಹಿನ್ನಲೆಯಲ್ಲಿ ಬಂದ್ ಆಗಿದ್ದ ಬೆಂಗಳೂರಿನ ಖ್ಯಾತ ಇಸ್ಕಾನ್ ದೇಗುಲ ಸತತ ಆರು ತಿಂಗಳ ಬಳಿಕ ಮೊದಲ ಬಾರಿಗೆ ಭಕ್ತರ ದರ್ಶನಕ್ಕೆ ದೇಗುಲ ತೆರೆದಿದೆ.

ಈ ಬಗ್ಗೆ ಸ್ವತಃ ಇಸ್ಕಾನ್ ದೇಗುಲ ಆಡಳಿತ ಮಂಡಳಿ ಸ್ಪಷ್ಟಪಡಿಸಿದ್ದು, ಅಕ್ಟೋಬರ್ 5 ಅಂದರೆ ನಾಳೆಯಿಂದಲೇ ದೇಗುಲವನ್ನು ಭಕ್ತರ ದರ್ಶನಕ್ಕೆ ತೆರೆಯಲಾಗುತ್ತಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ದೇವಸ್ಥಾನದ ಆಡಳಿತ ಮಂಡಳಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಆಧರಿಸಿ ದೇವಸ್ಥಾನವನ್ನು ಬೆಳಗ್ಗೆ 9.30 ರಿಂದ 12.30 ರವರೆಗೆ ಮತ್ತು ಸಂಜೆ 4 ರಿಂದ 8 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ತೆರೆಯಲಾಗುವುದು ಎಂದು ಹೇಳಿದೆ. ಇನ್ನೊಂದೆಡೆ  ವಾರಾಂತ್ಯಕ್ಕೆ ದೇವಸ್ಥಾನವನ್ನು ಬೆಳಗ್ಗೆ 9.30 ರಿಂದ ರಾತ್ರಿ 8 ಗಂಟೆಯವರೆಗೆ ತೆರೆಯಲಾಗುವುದು. ಈ ಅವಧಿಯಲ್ಲಿ ಧಾರ್ಮಿಕ ಮಂಡಳಿಗಳಿಗೆ ಅವಕಾಶ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. 

ದೇವಸ್ಥಾನದ ಪ್ರವೇಶದ ವೇಳೆ ಎಲ್ಲ ಪ್ರೋಟೋಕಾಲ್ ಗಳನ್ನು ಪಾಲಿಸುವುದು ಅನಿವಾರ್ಯಗೊಳಿಸಲಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲರಿಗೂ ಕೂಡ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ ಹಾಗೂ ಮುಂಜಾಗ್ರತಾ ಕ್ರಮವಾಗಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, 65 ವರ್ಷಕ್ಕಿಂತ ಹೆಚ್ಚಿನ  ವಯಸ್ಸಿನವರು ಹಾಗೂ ಗರ್ಭವತಿ ಮಹಿಳೆಯರಿಗೆ ಸುರಕ್ಷತೆಯ ದೃಷ್ಟಿಯಿಂದ ದೇವಸ್ಥಾನಕ್ಕೆ ತೆರಳದಂತೆ ಸಲಹೆ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com