ಹೈಟೆಕ್ ಆದ ಬೆಂಗಳೂರು ಅಂಚೆ ಇಲಾಖೆ: ಇದೇ ಮೊದಲ ಬಾರಿಗೆ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಅಳವಡಿಕೆ!

ಕೊರೋನಾ ಸಂದರ್ಭದಲ್ಲಿ ಗ್ರಾಹಕರ ಸಮಯ ಉಳಿತಾಯದ ಜೊತೆಗೆ ತ್ವರಿತ ಅಂಚೆ ವಿಲೇವಾರಿಗೆ ಅನುಕೂಲವಾಗುವಂತೆ ಕರ್ನಾಟಕ ವಲಯ ಅಂಚೆ ಇಲಾಖೆಯು ದೇಶದಲ್ಲೇ ಮೊದಲ ಬಾರಿಗೆ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಯಂತ್ರವನ್ನು ಪರಿಚಯಿಸಿದೆ. 
ಸ್ಮಾರ್ಟ್ ಪೋರ್ಸ್ಟ್ ಕಿಯೋಸ್ಕ್
ಸ್ಮಾರ್ಟ್ ಪೋರ್ಸ್ಟ್ ಕಿಯೋಸ್ಕ್
Updated on

ಬೆಂಗಳೂರು: ಕೊರೋನಾ ಸಂದರ್ಭದಲ್ಲಿ ಗ್ರಾಹಕರ ಸಮಯ ಉಳಿತಾಯದ ಜೊತೆಗೆ ತ್ವರಿತ ಅಂಚೆ ವಿಲೇವಾರಿಗೆ ಅನುಕೂಲವಾಗುವಂತೆ ಕರ್ನಾಟಕ ವಲಯ ಅಂಚೆ ಇಲಾಖೆಯು ದೇಶದಲ್ಲೇ ಮೊದಲ ಬಾರಿಗೆ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಯಂತ್ರವನ್ನು ಪರಿಚಯಿಸಿದೆ. 

ಎಟಿಎಂ ಮಾದರಿಯಲ್ಲಿರುವ ಈ ಯಂತ್ರವನ್ನು ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಪೂರ್ವ ವಲಯದ ಅಂಚೆ ಕಚೇರಿಯಲ್ಲಿ ಅಳವಡಿಸಲಾಗಿದೆ. ಜೊತೆಗೆ ಅಂಚೆ ಇಲಾಖೆಯು ಸ್ಮಾರ್ಟ್ ಪೋರ್ಸ್ಟ್ ಕಿಯೋಸ್ಕ್ ಆ್ಯಪ್ ಸಹ ಅಭಿವೃದ್ಧಿಪಡಿಸಿದ್ದು, ಬುಧವಾರ ಗ್ರಾಹಕರ ಸೇವೆಗೆ ಲಭ್ಯವಾಗಿಸಿದೆ. 

ಈ ಆ್ಯಪ್ ಮೂಲಕ ಗ್ರಾಹಕರು ಇಂಚೆ ಇಲಾಖೆಗೆ ತೆರಳಿ ಗಂಟೆಗಟ್ಟಲೆ ಕಾಯುವ ಬದಲು ತಾವು ಇದ್ದಲಿಂದಲೇ ಸುಗಮವಾಗಿ ಅಂಚೆ ವ್ಯವಹಾರ ಮಾಡಬಹುದು. ಡಿಜಿಟಲ್ ಇಂಡಿಯಾ ಯೋಜನೆಯಡಿ ಸಿ-ಡಾಕ್ ಬೆಂಗಳೂರು ಮತ್ತು ಕರ್ನಾಟಕ ವೃತ್ತ ಅಂಚೆ ಇಲಾಖೆ ಸಹಯೋಗದಲ್ಲಿ ಸಾರ್ಟ್ ಪೋಸ್ಟ್ ಕಿಯೋಸ್ಕ್ ರೂಪಿಸಲಾಗಿದೆ. 

ಕರ್ನಾಟಕ ಅಂಚೆ ಇಲಾಖೆಯ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ಮೂಲಮಾದರಿಯಾಗಿ ಅಳವಡಿಸಲಾಗಿದೆ. ಇದರಿಂದ ಮಾನವ ಸಂಪರ್ಕಗಳು ಸಂಪೂರ್ಣವಾಗಿ ಇರುವುದಿಲ್ಲ. ಎಲ್ಲರನ್ನೂ ಸೋಂಕಿನಿಂದ ಸುರಕ್ಷಿತವಾಗಿರುವಂತೆ ಮಾಡಲಿದೆ ಎಂದು ಹೇಳಿದ್ದಾರೆ. 

ಶೀಘ್ರದಲ್ಲೇ ಇಂತಹ ಕಿಯೋಸ್ಕ್ ಗಳನ್ನು ಹೈಕೋರ್ಟ್ ಆವರಣ ಹಾಗೂ ಸಾರ್ವಜನಿಕರ ಪ್ರತಿಕ್ರಿಯೆಗಳ ಅನುಗುಣವಾಗಿ ಇತರೆ ಪ್ರದೇಶಗಳಲ್ಲಿ ಅಳವಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಸಿ-ಡಿಎಸಿ) ಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್ ಡಿ ಸುದರ್ಶನ್ ಅವರು ಮಾತನಾಡಿ, ಇದು ಡಿಜಿಟಲ್ ಇಂಡಿಯಾದ ಮತ್ತೊಂದು ಹೆಜ್ಜೆ. ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಅಪ್ಲಿಕೇಶನ್ ಬಳಸಿ ನೋಂದಾಯಿತ ಮತ್ತು ಸ್ಪೀಡ್ ಪೋಸ್ಟ್ ಅನ್ನು ಕಾಯ್ದಿರಿಸಬಹುದು ಮತ್ತು ಪಾವತಿ ಡಿಜಿಟಲ್ ಆಗಿದೆ. ಈ ಕಿಯೋಸ್ಕ್ ಪ್ರಸ್ತುತ ಮೂರು ಭಾಷೆಗಳಿಗೆ ಪ್ರತಿಕ್ರಿಯೆ ನೀಡುತ್ತದೆ. ಇಂಗ್ಲಿಷ್, ಹಿಂದಿ ಮತ್ತು ಕನ್ನಡದಲ್ಲಿ ಪ್ರತಿಕ್ರಿಯೆ ನೀಡಲಿದೆ. ದೇಶಾದ ವಿವಿಧ ಅಂಚೆ ವಿಭಾಗಗಳಲ್ಲಿ ಅಳವಡಿಸಿದ ಕೂಡಲೇ ಹೆಚ್ಚಿನ ಭಾಷೆಗಳನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com