ಆರ್.ಆರ್.ನಗರ ಉಪಚುನಾವಣೆ:  ಮತ ಚಲಾಯಿಸುವ ಕೋವಿಡ್ ಸೋಂಕಿತರಿಗೆ ಬಿಬಿಎಂಪಿಯಿಂದ ಪಿಪಿಇ ಕಿಟ್

ಉಪಚುನಾವಣೆ ಮತದಾನದ ವೇಳೆ ಕೋವಿಡ್  ಹರಡುವುದನ್ನು ತಪ್ಪಿಸುವ ಪ್ರಯತ್ನವಾಗಿ ರಾಜರಾಜೇಶ್ವರಿ ನಗರದಲ್ಲಿ (ಆರ್.ಆರ್.ನಗರ ) ಕೋವಿಡ್ ರೋಗಿಗಳಿಗೆ ಸಹ ಮತ ಚಲಾಯಿಸಲು ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು  ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಹೇಳಿದರು. 
ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್
ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್

ಬೆಂಗಳೂರು: ಉಪಚುನಾವಣೆ ಮತದಾನದ ವೇಳೆ ಕೋವಿಡ್  ಹರಡುವುದನ್ನು ತಪ್ಪಿಸುವ ಪ್ರಯತ್ನವಾಗಿ ರಾಜರಾಜೇಶ್ವರಿ ನಗರದಲ್ಲಿ (ಆರ್.ಆರ್.ನಗರ ) ಕೋವಿಡ್ ರೋಗಿಗಳಿಗೆ ಸಹ ಮತ ಚಲಾಯಿಸಲು ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು  ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಹೇಳಿದರು. 

"ಇದು ಜನರ ಮೂಲಭೂತ ಹಕ್ಕು. ನಾವು ಅವರನ್ನು ಕರೆಯುತ್ತೇವೆ ಮತ್ತು ಈ ರೋಗಿಗಳಲ್ಲಿ ಯಾರಾದರೂ ಮತ ಚಲಾಯಿಸುವ ಇಚ್ಚೆಯಿದ್ದಲ್ಲಿ , ನಾವು ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಯಾ ಮತಗಟ್ಟೆಗಳಿಗೆ ಕರೆದೊಯ್ಯುತ್ತೇವೆ ಮತ್ತು ಅವರ ಮತದಾನದ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡುತ್ತೇವೆ."

ಕ್ಷೇತ್ರದಲ್ಲಿ 1,177 ಕೋವಿಡ್ ರೋಗಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಆರ್.ಆರ್.ನಗರ ರಿಟರ್ನಿಂಗ್ ಆಫೀಸರ್ ಆಗಿರುವ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. "ಆರ್.ಆರ್.ನಗರ ಒಂಬತ್ತು ವಾರ್ಡ್‌ಗಳನ್ನು ಹೊಂದಿದ್ದು, ಈ ವಾರ್ಡ್‌ನಲ್ಲಿ ನಾವು 10 ಆಂಬುಲೆನ್ಸ್‌ಗಳನ್ನು ಇಡುತ್ತೇವೆ" ಎಂದು ಅವರು ಹೇಳಿದರು.

ಮತದಾನದ ವೇಳೆ ಬಿಬಿಎಂಪಿ ಇಡೀ ಬೂತ್‌ನ ಸ್ಯಾನಿಟೈಸೇಶನ್ ಮುಂತಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. "ನಾವು ಗುರುವಾರದಿಂದ ನವೆಂಬರ್ 2 ಸಂಜೆವರೆಗೆ ಪಾಸಿಟಿವ್ ವರದಿ ಬರುವ ಎಲ್ಲರನ್ನು ಕರೆಯಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ರೋಗಿಗಳು ನಿಯಂತ್ರಣ ಕೊಠಡಿಯಿಂದ ಕರೆಗಳನ್ನು ಸ್ವೀಕರಿಸುತ್ತಾರೆ ಮತ್ತು ಅವರು ಬಯಸಿದರೆ, ನಾವು ಅವರನ್ನು ಮತಗಟ್ಟೆಗೆ ಕರೆದೊಯ್ಯಲಿದ್ದೇವೆ. ”ಎಂದು ಅವರು ಹೇಳಿದರು.

ಮತ ಚಲಾಯಿಸಲು ಬರುವ ಎಲ್ಲಾ ಮತದಾರರಿಗೆ ಬಿಬಿಎಂಪಿ ಬಲಗೈ ಕೈಗವಸು ನೀಡುತ್ತದೆ ಮತ್ತು ಎಡಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಯಿ ಗುರುತು ಹಾಕಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಆರ್.ಆರ್.ನಗರವು 4.62 ಲಕ್ಷ ಮತದಾರರನ್ನು ಹೊಂದಿದೆ ಮತ್ತು ಈ ಸಮಯದಲ್ಲಿ ನಾವು ಪುರುಷರು, ಮಹಿಳೆಯರು ಮತ್ತು ದೈಹಿಕವಾಗಿ ವಿಶೇಷಚೇತನರಾದವರಿಗೆ  ಪ್ರತ್ಯೇಕವಾಗಿ ಮೀಸಲಾದ ಸಾಲುಗಳನ್ನು  ಮಾಡುತ್ತೇವೆ. . ಪ್ರತಿ ಬೂತ್‌ನಲ್ಲಿ ಕೋವಿಡ್ ಎಸ್‌ಒಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ,  ಎಂದು ಅವರು ವಿವರಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com