ಅಪಹರಣಕ್ಕೊಳಗಾಗಿದ್ದ ಕಾರ್ಪೋರೇಟರ್ ರಕ್ಷಣೆ: ನಾಲ್ವರು ಆರೋಪಿಗಳ ಬಂಧನ

ಕೊಪ್ಪಳ ಜಿಲ್ಲೆ ಗಂಗಾವತಿಯ ಕಾರ್ಪೊರೇಟರ್ ಮನೋಹರಸ್ವಾಮಿ ಅವರನ್ನು ಅಪಹರಿಸಿದ ನಾಲ್ವರು ಆರೋಪಿಗಳನ್ನು ಹಳಿಯಾಳದಲ್ಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾರವಾರ: ಕೊಪ್ಪಳ ಜಿಲ್ಲೆ ಗಂಗಾವತಿಯ ಕಾರ್ಪೊರೇಟರ್ ಮನೋಹರಸ್ವಾಮಿ ಅವರನ್ನು ಅಪಹರಿಸಿದ ನಾಲ್ವರು ಆರೋಪಿಗಳನ್ನು ಹಳಿಯಾಳದಲ್ಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

ಬಂಧಿತರನ್ನು ರಾಕೇಶ್ (24), ಬಸವರಾಜ್ (22), ಶರಣಬಸು (24) ಮತ್ತು ರವಿ ಕುರುಬಾರ್ ಎಂದು ಗುರ್ತಿಸಲಾಗಿದೆ. 

ಶುಕ್ರವಾರ ನಸುಕಿನ 4.30ರ ವೇಳೆಗೆ ಹಳಿಯಾಣ ಪೊಲೀಸ್ ಠಾಣೆ ಎದುರಿನ ಶಿವಾಜಿ ವೃತ್ತದಲ್ಲಿ ಗಂಗಾವತಿ ಕಾರ್ಪೊರೇಟರ್ ಮನೋಹರ ಸ್ವಾಮಿ ಹೆಲ್ಪ್ ಹೆಲ್ಪ್ ಪೊಲೀಸ್ ಹೆಲ್ಪ್ ಎಂದು ಕೂಗುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಹೋಗಿ ವಿಚಾರಿಸಿದಾಗ ಅಪಹರಣದ ಪ್ರಕರಣ ಬೆಳಕಿಗೆ ಬಂದಿದೆ. 

ಮನೋಹರ ಸ್ವಾಮಿ ಅವರಿಗೆ ಮುಖಕ್ಕೆ ಮತ್ತು ಬರುವಂತರ ಔಷಧಿಯನ್ನು ಆರೋಪಿಗಳು ಸಿಂಪಡಿಸಿದ್ದಾರೆ. ಈ ವೇಳೆ ಮನೋಹರ ಸ್ವಾಮಿಯವರ ಜ್ಞಾನ ತಪ್ಪಿದೆ. ಇದರಿಂದ ಗಾಬರಿಗೊಂಡ ಆರೋಪಿಗಳು, ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. 

ಚಿಕಿತ್ಸೆ ಕೊಡಿಸಲು ಆರೋಪಿಗಳು ಮನೋಹರ ಸ್ವಾಮಿಯವರನ್ನು ಇನ್ನೋವಾ ಕಾರಿನಲ್ಲಿ ಹಳಿಯಾಳಕ್ಕೆ ಕರೆತಂದು ಸರ್ಕಾರಿ ಆಸ್ಪತ್ರೆಯ ಎದುರು ವಾಹನ ನಿಲ್ಲಿಸಿದ್ದಾರೆ. ಸಂದರ್ಭದಲ್ಲಿ ಅವರಿಂದ ತಪ್ಪಿಸಿಕೊಂಡು ಬಂದ ಮನೋಹರ ಸ್ವಾಮಿಯವರು, ಶಿವಾಜಿ ವೃತ್ತದಲ್ಲಿ ಪೊಲೀಸರ ಸಹಾಯಕ್ಕಾಗಿ ಮೊರೆ ಇಡುತ್ತಿದ್ದರು. 

ಈ ವೇಳೆ ಹಳಿಯಾ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಅಪಹರಣಕ್ಕೆ ಬಳಸಲಾಗಿದ್ದ ಕಾರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. 

ನವೆಂಬರ್ 2ರಂದು ಗಂಗಾವತಿ ನಗರಸಭೆ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದು ಜಿದ್ದಾಜಿದ್ದಿನ ಕಣವಾಗಿದ್ದು, ಅಧ್ಯಕ್ಷ ಗಾದಿಗೇರಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರಯತ್ನಿಸುತ್ತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸದಸ್ಯನನ್ನು ಅಪಹರಣ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. 

ಈ ಹಿಂದೆ ಕೂಡ ಪಾಲಿಕೆ ಸದಸ್ಯೆಯಾಗಿದ್ದ ಸುಧಾ ಸೋಮನಾಥ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅಪಹರಿಸಿದ್ದರು. ಇದಕ್ಕೆ ತಿರುಗೇಟು ನೀಡುವಂತೆ ಇದೀಗ ಮನೋಹರ ಸ್ವಾಮಿಯವರನ್ನು ಅಪಹರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com