ಲಾಕ್ಡೌನ್ ಬಳಿಕ ಸೃಷ್ಟಿಯಾದ ಪ್ರಾದೇಶಿಕ ಮಾರುಕಟ್ಟೆಗಳ ಸ್ಪರ್ಧೆ: ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯದತ್ತ ಹೆಜ್ಜೆ ಹಾಕದ ಗ್ರಾಹಕರು, ವ್ಯಾಪಾರಸ್ಥರು ಕಂಗಾಲು

ಕಳೆದ ಐದಾರು ತಿಂಗಳುಗಳಿಂದ ಬಂದ್ ಆಗಿದ್ದ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ ಮಂಗಳವಾರದಿಂದ ಮತ್ತೆ ತನ್ನ ವಹಿವಾಟುಗಳನ್ನು ಆರಂಭಿಸಿದ್ದು, ಮೊದಲ ದಿನವೇ ವರ್ತಕರು, ಗ್ರಾಹಕರಿಂದ ನೀರಸ ಪ್ರತಿಕ್ರಿಯೆ ಕಂಡು ಬಂದಿತ್ತು. 
ಕೆ.ಆರ್.ಮಾರುಕಟ್ಟೆ
ಕೆ.ಆರ್.ಮಾರುಕಟ್ಟೆ

ಬೆಂಗಳೂರು: ಕಳೆದ ಐದಾರು ತಿಂಗಳುಗಳಿಂದ ಬಂದ್ ಆಗಿದ್ದ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ ಮಂಗಳವಾರದಿಂದ ಮತ್ತೆ ತನ್ನ ವಹಿವಾಟುಗಳನ್ನು ಆರಂಭಿಸಿದ್ದು, ಮೊದಲ ದಿನವೇ ವರ್ತಕರು, ಗ್ರಾಹಕರಿಂದ ನೀರಸ ಪ್ರತಿಕ್ರಿಯೆ ಕಂಡು ಬಂದಿತ್ತು. 

ಕೊರೋನಾ ಲಾಕ್ಡೌನ್ ಬಳಿಕ ಪ್ರಾದೇಶಿಕ ಮಾರುಕಟ್ಟೆಗಳ ಸ್ಪರ್ಧೆ ಹೆಚ್ಚಾಗಿದ್ದು, ಲಾಕ್ಡೌನ್ ಸಂದರ್ಭದಲ್ಲಿ ಮಾರುಕಟ್ಟೆಗಳು ಬಂದ್ ಆಗಿದ್ದ ಕಾರಣ ಗ್ರಾಹಕರು ಪರ್ಯಾಯ ಮಾರ್ಗಗಳನ್ನು ಕಂಡು ಕೊಂಡಿದ್ದು, ಇದರ ಪರಿಣಾಮ ಮಾರುಕಟ್ಟೆಗೆ ತೆರಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. 

ನಗರದ ಸುತ್ತಮುತ್ತಲ ಭಾಗಗಳಿಂದ ರೈತರು ಬೆಳೆಗಳನ್ನು ಹೊತ್ತು ಮಾರುಕಟ್ಟೆಗೆ ಆಗಮಿಸುತ್ತಿದ್ದರು. ಆದರೆ, ಕೊರೋನಾ ಭೀತಿ ಹಾಗೂ ಮಂಗಳವಾರ ಎಂಬ ಕಾರಣಕ್ಕೆ ವರ್ತಕರು ಮಳಿಗೆ ತೆರೆದಿರಲಿಲ್ಲ. ಜೊತೆಗೆ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸದ ಕಾರಣ ಮಾರುಕಟ್ಟೆ ಕಳೆಗುಂದಿತ್ತು. ಕೆಲವರು ಸಣ್ಣಪುಟ್ಟ ವ್ಯಾಪಾರಿಗಳು ಗ್ರಾಹಕರ ನಿರೀಕ್ಷೆಯಲ್ಲಿ ಮಾರುಕಟ್ಟೆಯ ಹೊರಾಂಗಣದಲ್ಲಿಯೇ ಕುಳಿತಿದ್ದರು. 

ತಿಂಗಳ ಬಳಿಕ ಮತ್ತೆ ವ್ಯಾಪಾರ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಕೆಲ ಸಣ್ಣ ಪುಟ್ಟ ವ್ಯಾಪಾರಿಗಳು ತಮ್ಮ ನಂಬಿಕೆಯತ್ತ ಮಾರುಕಟ್ಟೆ ದ್ವಾರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೋಳಿ ಬಲಿ ಕೊಟ್ಟರು. 

ಸಾಮಾನ್ಯವಾದಿ ಪ್ರತೀನಿತ್ಯ 200 ಟ್ರಕ್ ಗಳು ಮಾರುಕಟ್ಟೆಗೆ ಬರುತ್ತಿದ್ದವು. ಆದರೆ, ಮಂಗಳವಾರ ಕೇವಲ 50 ಟ್ರಕ್ ಗಳಷ್ಟೇ ಆಗಮಿಸಿದ್ದವು. ಮಂಗಳೂರು ಹಾಗೂ ತಮಿಳುನಾಡಿನಿಂದ ಪ್ರತೀನಿತ್ಯ ಗ್ರಾಹಕರು ಬರುತ್ತಿದ್ದರು. ಆದರೆ, ಈ ಬಾರಿ ಅವರಾರೂ ಬಂದಿಲ್ಲ. ಯಾವುದೇ ಆರ್ಡರ್ ಗಳೂ ಬಂದಿಲ್ಲ. ಮೊದಲ ದಿನವೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೋಟೆಲ್, ರೆಸ್ಟೋರೆಂಟ್ ಗಳು ವೀಕ್ಲಿ ಬಜಾರ್ ಗಳತ್ತ ಮುಖ ಮಾಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ನಮ್ಮ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತರಕಾರಿ ಹಾಗೂ ಹಣ್ಣುಗಳ ಮಾರಾಟಗಾರರ ಸಂಘಟನೆಯ ಅಧ್ಯಕ್ಷ ಆರ್.ವಿ.ಗೋಪಿಯವರು ಹೇಳಿದ್ದಾರೆ. 

ಹಬ್ಬಗಳೆಲ್ಲಾ ಪೂರ್ಣಗೊಂಡ ಬಳಿಕ ಮಾರುಕಟ್ಟೆ ತೆರೆಯಲು ಅವಕಾಶ ನೀಡಲಾಗಿದೆ. ಇದರಿಂದ ಯಾವುದೇ ಪ್ರಯೋಜನಗಳಾಗಿಲ್ಲ. ದಸರಾ ಬಳಿಕವಷ್ಟೇ ಹಬ್ಬಗಳು ಆರಂಭವಾಗುತ್ತದೆ. ಕೆಲ ವ್ಯಾಪಾರಿಗಳು ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಮನೆಗಳ ಬಳಿಯೇ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡಲು ಆರಂಭಿಸಿದ್ದಾರೆ. 148 ದಿನಗಳ ಮಾರುಕಟ್ಟೆ ಬಂದ್ ನಿಂದಾಗಿ ಗ್ರಾಹಕರನ್ನು ಕಳೆದುಕೊಂಡಿದ್ದೇವೆ ಎಂದು ಹೂವು ವ್ಯಾಪಾರಿಗಳ ಸಂಘಟನೆಯ ಅಧ್ಯಕ್ಷ ಜಿ.ಎಂ.ದಿವಾಕರ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com