ಹರಿಯಾಣದಿಂದ ಕೋಲಾರಕ್ಕೆ ರೈಲಿನಲ್ಲಿ ಬಂದಿಳಿದ ಅಸಾಮಾನ್ಯ ಪ್ರಯಾಣಿಕರು!

ಗುರುವಾರ ಮುಂಜಾನೆ 2.10ಕ್ಕೆ ಹರಿಯಾಣದ ಸೋನೆಪತ್‌ನಿಂದ ಕೆಲವು ಅಸಾಮಾನ್ಯ ಪ್ರಯಾಣಿಕರು ಕೋಲಾರದ ಬಂಗರ್‌ಪೇಟೆ ರೈಲ್ವೆ ನಿಲ್ದಾಣಕ್ಕೆ ಸರಕು ರೈಲು ಮೂಲಕ ಬಂದಿವೆ.
ಗೋವುಗಳು
ಗೋವುಗಳು

ಬೆಂಗಳೂರು: ಗುರುವಾರ ಮುಂಜಾನೆ 2.10ಕ್ಕೆ ಹರಿಯಾಣದ ಸೋನೆಪತ್‌ನಿಂದ ಕೆಲವು ಅಸಾಮಾನ್ಯ ಪ್ರಯಾಣಿಕರು ಕೋಲಾರದ ಬಂಗರ್‌ಪೇಟೆ ರೈಲ್ವೆ ನಿಲ್ದಾಣಕ್ಕೆ ಸರಕು ರೈಲು ಮೂಲಕ ಬಂದಿವೆ.

81 ಹಸುಗಳು ಮತ್ತು 45 ಕರುಗಳ ಹಿಂಡು ಮೂರು ದಿನಗಳ ಕಾಲ ಪ್ರಯಾಣಿಸಿ ರಾಜ್ಯಕ್ಕೆ ಬಂದಿಳಿದಿವೆ. ಇವು ಸಾಮಾನ್ಯ ಹಸುಗಳಲ್ಲ, ಉತ್ತಮ ಗುಣಮಟ್ಟದ ಎಚ್‌ಎಫ್ ಹಸುಗಳನ್ನು ಕೋಲಾರ್ ಮೂಲದ ಡೈರಿ ಫಾರ್ಮ್, ಸೆಕೆಲ್ ಡೈರಿ ಖರೀದಿಸಿತ್ತು.

ದೆಹಲಿ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, “ಇದು ಖಂಡಿತವಾಗಿಯೂ ನಾವು ಬೆಂಗಳೂರಿಗೆ ರವಾನಿಸಿದ ಅಸಾಮಾನ್ಯ ರವಾನೆಯಾಗಿದೆ. ನನಗೆ ನೆನಪಿರುವಂತೆ, ನಾವು ರೈಲು ಮೂಲಕ ಅಷ್ಟು ಪ್ರಾಣಿಗಳನ್ನು ಸಾಗಿಸಿಲ್ಲ. ಜಾನುವಾರುಗಳನ್ನು ಸಾಮಾನ್ಯವಾಗಿ ರಸ್ತೆಯ ಮೂಲಕ ಸಾಗಿಸಲಾಗುತ್ತದೆ. ಆದರೆ ರೈಲು ಮೂಲಕ ಸಾಗಿಸಲು ನಾವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಲಿಖಿತ ಅನುಮತಿ ಪಡೆಯಬೇಕಾಗಿತ್ತು.

ಮಾರಾಟಗಾರ ಮತ್ತು ಖರೀದಿದಾರರು ಸಹ ಇದಕ್ಕಾಗಿ ದಾಖಲೆಗಳನ್ನು ನೀಡಬೇಕಿತ್ತು. ಅದನ್ನು ನಾವು ಪರಿಶೀಲನೆ ನಡೆಸಿ ಸಾಗಾಣೆಗೆ ಅನುಮತಿ ಪಡೆದಿದ್ದೇವು. ಈ ಉತ್ತಮ ಗುಣಮಟ್ಟದ ಹಸುಗಳಿಗೆ ತಲಾ 1.5 ಲಕ್ಷ ರೂ. ಮತ್ತು ದಿನಕ್ಕೆ 40 ರಿಂದ 50 ಲೀಟರ್ ಹಾಲು ನೀಡಬಹುದು ಎಂದು ಮೂಲವೊಂದು ತಿಳಿಸಿದೆ. ಸದ್ಯ ಹಸುಗಳನ್ನು ಟ್ರಕ್‌ಗಳ ಮೂಲಕ ಜಮೀನಿಗೆ ಕಳುಹಿಸಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com