ಮಂಗಳೂರು: ಲಾಕ್‌ಡೌನ್ ಟೀಕಿಸಿ ಸಂದೇಶ-ಓರ್ವನ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೋನವೈರಸ್ ಸೋಂಕು ತಡೆಗಟ್ಟುವಲ್ಲಿ ತೊಡಗಿರುವ ರಾಜ್ಯ ಸರ್ಕಾರಿ ಸಿಬ್ಬಂದಿ ವಿರುದ್ಧ ದುರುದ್ದೇಶಪೂರಿತ ಆರೋಪಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೋನವೈರಸ್ ಸೋಂಕು ತಡೆಗಟ್ಟುವಲ್ಲಿ ತೊಡಗಿರುವ ರಾಜ್ಯ ಸರ್ಕಾರಿ ಸಿಬ್ಬಂದಿ ವಿರುದ್ಧ ದುರುದ್ದೇಶಪೂರಿತ ಆರೋಪಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

'ಇದು ನಮ್ಮ ಧ್ವನಿ’ ಎಂಬ ವೇದಿಕೆ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ದುರುದ್ದೇಶಪೂರಿತ ವಿಷಯವನ್ನು ಹರಡಿದ ಆರೋಪದ ಮೇಲೆ ನಿಜಾಮ್‍ ಎಂಬುವವನ್ನು ಬಂಧಿಸಲಾಗಿದ್ದು, ಈತನನ್ನು ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ನಗರ ಪೊಲೀಸ್‍ ಆಯುಕ್ತ ಡಾ.ಹರ್ಷ ತಿಳಿಸಿದ್ದಾರೆ.

ಆರೋಪಿ ಕೊವಿದ್ -19 ಸೋಂಕು ಹರಡುವಿಕೆ ತಡೆಯುವಿಕೆ ಕೆಲಸದಲ್ಲಿ ತೊಡಗಿರುವ ವಿವಿಧ ಸರ್ಕಾರಿ ಕಾರ್ಯಕರ್ತರ ಕಾರ್ಯದ ಬಗ್ಗೆ ಟೀಕಿಸಿ, ವದಂತಿಗಳನ್ನು ಹರಡಿದ್ದಾನೆ ಎಂದು ಅವರು ಮಂಗಳವಾರ ಟ್ವೀಟ್ ಮಾಡಿದ್ದಾರೆ.

.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com