ಬೆಂಗಳೂರಿನ 2 ಖಾಸಗಿ ಲ್ಯಾಬ್ ಗಳಲ್ಲಿ ರೋನಾ ಪರೀಕ್ಷೆ ಸೌಲಭ್ಯ: ಟೆಸ್ಟ್ ಗೆ ಹಣ ಎಷ್ಟು ಗೊತ್ತೆ?

ಬೆಂಗಳೂರಿನಲ್ಲಿ ಕೊರೋನಾ  ಪರೀಕ್ಷಾ ಸೌಕರ್ಯವನ್ನು ಒದಗಿಸಲಾಗಿದೆ. ನಗರದ ಎರಡು ಖಾಸಗಿ ಲ್ಯಾಬ್​ಗಳಲ್ಲಿ ಇನ್ನು ಮುಂದೆ ಕೊರೋನಾ ಪರೀಕ್ಷೆ ಮಾಡಲಾಗುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಕೊರೋನಾ  ಪರೀಕ್ಷಾ ಸೌಕರ್ಯವನ್ನು ಒದಗಿಸಲಾಗಿದೆ. ನಗರದ ಎರಡು ಖಾಸಗಿ ಲ್ಯಾಬ್​ಗಳಲ್ಲಿ ಇನ್ನು ಮುಂದೆ ಕೊರೋನಾ ಪರೀಕ್ಷೆ ಮಾಡಲಾಗುತ್ತದೆ.

ಶಿವಾಜಿನಗರದ ನ್ಯೂಬರ್ಗ್ ಆನಂದ್ ಲ್ಯಾಬ್ ಮತ್ತು ಬಸವನಗುಡಿಯ ಕ್ಯಾನ್ಸೈಟ್ ಟೆಕ್ನಾಲಜೀಸ್​ಗಳಲ್ಲಿ ಕೊರೋನಾ ಪರೀಕ್ಷೆ ಮಾಡಲಾಗುತ್ತದೆ. ಈ 2 ಲ್ಯಾಬ್​ಗಳಿಗೆ ಐಸಿಎಂಆರ್ ಪರವಾನಗಿ ನೀಡಿದೆ. ಈ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವವರು ಅದಕ್ಕೆ ಹಣ ತೆರಬೇಕಿದೆ.

ಮೊದಲ ಹಂತದ ಪರೀಕ್ಷೆ- 3000 ರೂ,  ಮರುದೃಢೀಕರಣ ಪರೀಕ್ಷೆ- 1500 ರೂ ನಿಗದಿ ಮಾಡಲಾಗಿದೆ. ಈ ದರವನ್ನು ಐಸಿಎಂಆರ್ ನಿಗದಿ ಮಾಡಿದ್ದು ಒಟ್ಟಾರೆ ಪರೀಕ್ಷಾ ವೆಚ್ಚ 4500 ಮೀರುವಂತಿಲ್ಲ.

ಇನ್ನು, ಸರ್ಕಾರಿ ಲ್ಯಾಬ್​​ಗಳು ಕೂಡಾ ಎಂದಿನಂತೆ ಪರೀಕ್ಷೆ ನಡೆಸುತ್ತವೆ. ಖಾಸಗಿ ಪ್ರಯೋಗಾಲಯಗಳಲ್ಲೂ ಜನ ತೆರಳಿದರೆ ಹೆಚ್ಚು ಜನರಿಗೆ ಪರೀಕ್ಷೆ ಮಾಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಐಸಿಎಂಆರ್ ಈ ಕ್ರಮ ಕೈಗೊಂಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com