ವಲಸಿಗ ಕಾರ್ಮಿಕರಿಗೆ ನೆರವು ನೀಡುವ ಡಿಐಪಿಆರ್ ಸ್ವಯಂ ಸೇವಕ ಯೋಧರು! 

ಕೊರೋನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ  ವದಂತಿಗಳು ಹಾಗೂ ಅಪಚಾರಗಳನ್ನು ತಡೆಗಟ್ಟುವುದು ಸೇರಿದಂತೆ ಕೋವಿಡ್ -19 ಬಗ್ಗೆ ಅರಿವು ಮೂಡಿಸುವ ಪೊಲೀಸರಿಗೆ ಸಾಥ್ ನೀಡುವುದು ಮತ್ತು ವಲಸೆ ಕಾರ್ಮಿಕರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸ್ವಯಂ ಸೇವಕರನ್ನು ನಿಯೋಜಿಸಿದೆ. 
ವಲಸಿಗ ಕಾರ್ಮಿಕರಿಗೆ ಆಹಾರ ವಿತರಿಸುತ್ತಿರುವ ಸ್ವಯಂ ಸೇವಕರು
ವಲಸಿಗ ಕಾರ್ಮಿಕರಿಗೆ ಆಹಾರ ವಿತರಿಸುತ್ತಿರುವ ಸ್ವಯಂ ಸೇವಕರು

ಬೆಂಗಳೂರು: ಕೊರೋನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ  ವದಂತಿಗಳು ಹಾಗೂ ಅಪಚಾರಗಳನ್ನು ತಡೆಗಟ್ಟುವುದು ಸೇರಿದಂತೆ ಕೋವಿಡ್ -19 ಬಗ್ಗೆ ಅರಿವು ಮೂಡಿಸುವ ಪೊಲೀಸರಿಗೆ ಸಾಥ್ ನೀಡುವುದು ಮತ್ತು ವಲಸೆ ಕಾರ್ಮಿಕರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸ್ವಯಂ ಸೇವಕರನ್ನು ನಿಯೋಜಿಸಿದೆ. 

ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ  ರಾಜ್ಯದ ಅನೇಕ ವಲಸೆ ಕಾರ್ಮಿಕರಿಗೆ ಆಹಾರ, ವಸತಿ ನೀಡುವ ಕಾರ್ಯದಲ್ಲಿಯೂ ಈ ಸ್ವಯಂ ಸೇವಕರು ತೊಡಗಿಸಿಕೊಂಡಿದ್ದಾರೆ.

ತಾತ್ಕಾಲಿಕ ಶಿಬಿರಗಳಲ್ಲಿ ಆರೋಗ್ಯ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಹ ಇವರು ನೀಡುತ್ತಾರೆ. ಪ್ರತಿಯೊಂದು ವಲಸಿಗ ಕಾರ್ಮಿಕರ ಕಾಲೋನಿಯಲ್ಲಿ ಒಬ್ಬೊಬ್ಬ ಪ್ರತಿನಿಧಿ ಇರುತ್ತಾರೆ. ಇವರು ಹಸಿವು ಆರೋಗ್ಯ ಸಹಾಯವಾಣಿ 152214ಗೆ ಆಹಾರದ ಪಾಕೆಟ್ ಗಾಗಿ ಬೇಡಿಕೆ ಕೂಡಲೇ ತಕ್ಷಣ ಸ್ಪಂದಿಸುತ್ತಾರೆ.

ಅನೇಕ ವಲಸಿಗ ಕಾರ್ಮಿಕರು ಮನೆಗೆ ಇಂತಹವರನ್ನು ಕರೆಸಿಕೊಂಡು ಕುಟುಂಬ ಸದಸ್ಯರೊಂದಿಗೆ ಅವರ ಅಗತ್ಯತೆಗಳ ಬಗ್ಗೆ ತಿಳಿಸುತ್ತಾರೆ. ನಂತರ ಅವರು ಸ್ಥಳೀಯ ಶಾಸಕರು ಮತ್ತಿತರ ರಾಜಕಾರಣಿಗಳ ಮನವೊಲಿಸಿ ವಲಸಿಗ ಕಾರ್ಮಿಕರಿಗೆ ಬೇಕಾದ ಅಗತ್ಯತೆಗಳನ್ನು ಪೂರೈಸುತ್ತಾರೆ

ಆಹಾರ ಮತ್ತಿತರ ವಸ್ತುಗಳಿಗೆ ಕರೆ ಮಾಡಿದವರನ್ನು ಗುರುತಿಸಿದ ನಂತರ ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು 
ಎಂದು ಸ್ವಯಂ ಸೇವಕ ಡಾ. ಭಾಸ್ಕರ್ ರಾಜ್ ಕುಮಾರ್ ಹೇಳುತ್ತಾರೆ. 

ಈ ಮಧ್ಯೆ ವಲಸಿಗ ಕಾರ್ಮಿಕರಿಗಾಗಿ ಬೆಂಗಳೂರಿನಲ್ಲಿ 200 ಕಲ್ಯಾಣ ಮಂಟಪಗಳನ್ನು ಸರ್ಕಾರ ಗುರುತಿಸಿದೆ. ಇದರಲ್ಲಿ ವಲಸಿಗ ಕಾರ್ಮಿಕರಿಗೆ ಊಟ, ವಸತಿಯನ್ನು ನೀಡಲಾಗುತ್ತಿದೆ. ಡಿಐಪಿಆರ್ ಸ್ವಯಂ ಸೇವಕಿಗೆ ಪಾಸ್ ಗಳ ಜೊತೆಗೆ ಮಾಸ್ಕ್, ಸ್ಯಾನಿಟೈಸರ್ಸ್ ಮತ್ತು ಗ್ಲೌಸ್ ಗಳನ್ನೊಳಗೊಂಡ ಆರೋಗ್ಯ ಸುರಕ್ಷತಾ ಕಿಟ್ ಗಳನ್ನು ಒದಗಿಸಲಾಗಿದೆ. ಬಾಲ ಕಾರ್ಮಿಕರಿಗೆ ಸಂಬಂಧಿಸಿದ ಘಟಕ ವಲಸಿಗ ಕಾರ್ಮಿಕರ ಮಕ್ಕಳಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ನಿವಾರಿಸುವ ಕೆಲಸದಲ್ಲಿ ನಿರತವಾಗಿದೆ. 

ಮಣಿಪಾಲ್ ಆಸ್ಪತ್ರೆಯ ಪ್ರಸಿದ್ಧ ಬೆನ್ನುಮೂಳೆಯ ಶಸ್ತ್ರಚಿಕಿತ್ಸಕ ಡಾ. ಥಾಮಸ್ ಕಿಶನ್ ಏಪ್ರಿಲ್ 1ರಿಂದಲೂ ಉಚಿತವಾಗಿ ಆಹಾರ ವಿತರಿಸುತ್ತಿದ್ದಾರೆ. ಹೆಣ್ಣೂರು  ರಸ್ತೆಯ ಸರ್ಕಾರಿ ಶಾಲೆಯಲ್ಲಿರುವ ವಲಸಿಗ ಕಾರ್ಮಿಕರು ಅವರ ಮಕ್ಕಳಿಗಾಗಿ ಡಾ. ಕಿಶನ್ ಅವರ ಕಾರಿನ ಮೂಲಕವೇ 400 ಆಹಾರದ ಪಾಕೆಟ್ ಗಳನ್ನು ಪೂರೈಸಲಾಗುತ್ತದೆ. ಲಾಕ್ ಡೌನ್ ಮುಗಿಯುವವರೆಗೂ ಆಹಾರ ವಿತರಿಸುವುದಾಗಿ ಡಾ. ಕಿಶನ್ ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com