ಕೋವಿಡ್-19: ಪೌರ ಕಾರ್ಮಿಕರಿಗೆ ಅರಿವು ಎಷ್ಟಿದೆ? ದೊಡ್ಡ ಪ್ರಶ್ನೆಯಾಗಿದೆ!

ರಾಜ್ಯದಲ್ಲಿರುವ ಪೌರ ಕಾರ್ಮಿಕರಿಗೆ ಕೋವಿಡ್-19 ಸೋಂಕಿನ ಬಗ್ಗೆ ಎಷ್ಟು ಅರಿವಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.ರಾಜ್ಯದಲ್ಲಿ ಸುಮಾರು 98000 ಪೌರ ಕಾರ್ಮಿಕರಿದ್ದು, ಪ್ರತಿಯೊಬ್ಬರೂ ಘನತ್ಯಾಜ್ಯ ಸಂಗ್ರಹಿಸುತ್ತಾ ಹತ್ತಾರು ಕುಟುಂಬಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.  ಇಂತಹವರಿಗೆ ವೈರಸ್ ಹೇಗೆ ಹರಡುತ್ತದೆ ಎಂಬ ಜ್ಞಾನವಿಲ್ಲ.
ಪೌರ ಕಾರ್ಮಿಕರು
ಪೌರ ಕಾರ್ಮಿಕರು

ಬೆಂಗಳೂರು: ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮನೆಯಲ್ಲಿಯೇ ಇರುವಂತೆ ಸರ್ಕಾರ ಹೇಳುತ್ತಿದೆ. ಆದರೆ, ಪೌರ ಕಾರ್ಮಿಕರು ಮನೆಯಲ್ಲಿರಲು ಸಾಧ್ಯವಿಲ್ಲ, ಅವರು ಹೊರಗೆ ಬಾರದೆ ಇದ್ದರೆ ಇಡೀ ಪ್ರದೇಶ ಗಬ್ಬೆದ್ದು ನಾರಿ ಮತ್ತಷ್ಟು ಅನೈರ್ಮಲ್ಯ ಸಮಸ್ಯೆ ಬಿಗಡಾಯಿಸುತ್ತದೆ.

ರಾಜ್ಯಾದ್ಯಂತ ನೂರಾರು ಜನರು ಕ್ವಾರಂಟೈನ್ ನಲ್ಲಿದ್ದು, ಅವರ ಮನೆಯಿಂದಲೂ ತ್ಯಾಜ್ಯ ವಸ್ತುಗಳನ್ನು ಪೌರ ಕಾರ್ಮಿಕರು ಸಂಗ್ರಹಿಸುತ್ತಾರೆ. ರಾಜ್ಯದಲ್ಲಿ ಸುಮಾರು 98000 ಪೌರ ಕಾರ್ಮಿಕರಿದ್ದು, ಪ್ರತಿಯೊಬ್ಬರೂ ಘನತ್ಯಾಜ್ಯ ಸಂಗ್ರಹಿಸುತ್ತಾ ಹತ್ತಾರು ಕುಟುಂಬಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.  ಇಂತಹವರಿಗೆ ವೈರಸ್ ಹೇಗೆ ಹರಡುತ್ತದೆ ಎಂಬ ಜ್ಞಾನವಿಲ್ಲ.

ಕೊರೋನಾ ವೈರಸ್ ಪ್ಲಾಸ್ಟಿಕ್‌ನಂತಹ ಕೆಲ ವಸ್ತುಗಳ ಮೇಲೆ  72 ಗಂಟೆ ಅಥವಾ ಮೂರು ದಿನಗಳವರೆಗೆ ಇರುತ್ತದೆ ಎಂದು ವೈರಾಲಜಿಸ್ಟ್‌ಗಳು ಹೇಳುತ್ತಾರೆ. ಕ್ವಾರಂಟೈನ್ ಲ್ಲಿರುವ ಕುಟುಂಬಗಳು ಬಳಸಿರುವ ಗ್ಲೌಸ್ ಗಳು, ಮಾಸ್ಕ್ ಗಳು ಮತ್ತಿತರ  ವಸ್ತುಗಳನ್ನು ಪೌರ ಕಾರ್ಮಿಕರು ವಿಲೇವಾರಿ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಕೊರೋನಾ ವೈರಸ್ ಬಗ್ಗೆ ಎಷ್ಟು ಪೌರ ಕಾರ್ಮಿಕರಿಗೆ ತಿಳುವಳಿಕೆ ಇದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. 

ಕ್ವಾರಂಟೈನ್ ನಲ್ಲಿರುವವರ ಮನೆಗಳಿಂದ ಸೋಂಕಿತ ಘನತ್ಯಾಜ್ಯ'ವನ್ನು ವಿಲೇವಾರಿ ಮಾಡುವ ಪೌರ ಕಾರ್ಮಿಕರು ಕೂಡಾ ಸೋಂಕಿಗೆ ತುತ್ತಾಗುವುದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ. ಮನೆಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಮರುಬಳಕೆ ಮಾಡಿದರೆ ಅದು ಮತ್ತಷ್ಟು ಅಪಾಯಕಾರಿಯಾಗಿದೆ. ರಾಜ್ಯದೆಲ್ಲೆಡೆ ಲಕ್ಷಾಂತರ ಟನ್ ಘನ ತ್ಯಾಜ್ಯವನ್ನು ಪೌರ ಕಾರ್ಮಿಕರು ವಿಲೇವಾರಿ ಮಾಡುತ್ತಾರೆ. 

ಕ್ವಾರಂಟೈನ್  ಮನೆಗಳಿಂದ ಬರುವ ತ್ಯಾಜ್ಯವನ್ನು ಜೈವಿಕ ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಬೇಕು ಮತ್ತು ಅದನ್ನು ಪ್ರತ್ಯೇಕವಾಗಿ ಗುರುತಿಸಿ ಹಸ್ತಾಂತರಿಸಬೇಕು ಎಂದು ಸರ್ಕಾರದ ಅಧಿಕೃತ ಸುತ್ತೋಲೆಯಲ್ಲಿ ಹೇಳಲಾಗಿದೆ. ಮುಂದುವರೆದು, ಅಂತಹ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸಾಗಿಸಬೇಕು ಮತ್ತು ಅಂತಹ ತ್ಯಾಜ್ಯವನ್ನು ಸಂಗ್ರಹಿಸುವ ವಾಹನಗಳನ್ನು ಪ್ರತಿದಿನ ಸೋಂಕುರಹಿತ ಔಷಧಿಗಳಿಂದ ಸ್ವಚ್ಛಗೊಳಿಸಬೇಕು ಎಂದು ತಿಳಿಸಲಾಗಿದೆ. 

ಪೌರ ಕಾರ್ಮಿಕರಿಗೆ ಗ್ಲೌಸ್, ಮಾಸ್ಕ್ ನೀಡುವ ಸಂಬಂಧ ಅನೇಕ ಸಭೆ ನಡೆಯುತ್ತಿವೆ ನಿಜ. ಆದರೆ, ಕೋವಿಡ್ ಸೋಂಕಿನ ಬಗೆ ಪೌರಕಾರ್ಮಿಕರಿಗೆ ಇರಿವು ಅರಿವಿನ ಸಮಸ್ಯೆಯಿದೆ. ಅದನ್ನು ಕೂಡಲೇ ಮೂಡಿಸುವ ಅಗತ್ಯವಿದೆ ಎಂದು ವೈದ್ಯರು ಮತ್ತು ಪರಿಸರ ತಜ್ಞರು ಸಲಹೆ ನೀಡಿದ್ದಾರೆ. 

ಬಹುತೇಕ ಕಾರ್ಮಿಕರಿಗೆ ಸೋಂಕು ಹೇಗೆ ಹರಡುತ್ತದೆ ಎಂಬ ಅರಿವಿಲ್ಲ, ಮನೆಯಿಂದ ಮನೆಗೆ ಎಂಬಂತೆ ಪ್ರತಿದಿನ 50 ಮನೆಗಳಿಗೆ ಹೋಗಿ ತ್ಯಾಜ್ಯ ಸಂಗ್ರಹಿಸುತ್ತಾರೆ. ಇದು ಒಬ್ಬ ಪೌರ ಕಾರ್ಮಿಕ ಮನೆಯನ್ನು ಹೇಗೆ ಕಲುಷಿತಮಾಡಬಹುದು ಎಂಬುದರ ಅನುಪಾತವಾಗಿದೆ.  ಮುಂಬೈಯಲ್ಲಿ ಪೌರ ಕಾರ್ಮಿಕನೊಬ್ಬ ಕೊರೋನಾ ಸೋಂಕಿಗೆ ತುತ್ತಾಗಿರುವುದು ಗಂಭೀರ ಸಮಸ್ಯೆಯಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಪೌರ ಕಾರ್ಮಿಕರಿಗೆ ಕೊರೋನಾ ಸೋಂಕಿನ ಬಗ್ಗೆ ತಿಳುವಳಿಕೆ ಮೂಡಿಸಬೇಕಾಗಿದೆ. ತ್ಯಾಜ್ಯ ಸಂಗ್ರಹಿಸುವಾಗ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಸುದರ್ಶನ್ ಬಲ್ಲಾಳ್ ಹೇಳುತ್ತಾರೆ. 

ನಿಯಮಗಳ ಪ್ರಕಾರ, ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸುತ್ತೇವೆ. ಕ್ವಾರಂಟೈನ್ ನಲ್ಲಿರುವವರನ್ನು ಪಾಸಿಟಿವ್ ಎಂದು ಪರಿಗಣಿಸುವುದಿಲ್ಲ, ಆದರೆ, ಐಸೋಲೇಷನ್ ವಾರ್ಡ್ ನಲ್ಲಿರುವ ಸೋಂಕಿತರಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮಾರ್ಗಸೂಚಿಯಂತೆ ವಿಲೇವಾರಿ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com