ಕೋವಿಡ್ -19: ಆರೋಗ್ಯ ಕಾರ್ಯಕರ್ತರಿಗೆ ತರಬೇತಿಗಾಗಿ ಯೂಟ್ಯೂಬ್ ಚಾನಲ್ ಆರಂಭಿಸಿದ ಸರ್ಕಾರ

ಕೋವಿಡ್-19 ಚಿಕಿತ್ಸೆಗಾಗಿ ಸ್ಥಳೀಯ ಮಟ್ಟದ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ಜಾಗೃತಿ ಕರ್ನಾಟಕ ಎಂಬ ಯು ಟ್ಯೂಬ್ ಚಾನಲ್ ವೊಂದನ್ನು ಕರ್ನಾಟಕ ಸರ್ಕಾರ  ಆರಂಭಿಸಿರುವುದಾಗಿ ಉನ್ನತ ಮಟ್ಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ಕೋವಿಡ್-19 ಚಿಕಿತ್ಸೆಗಾಗಿ ಸ್ಥಳೀಯ ಮಟ್ಟದ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ಜಾಗೃತಿ ಕರ್ನಾಟಕ ಎಂಬ ಯು ಟ್ಯೂಬ್ ಚಾನಲ್ ವೊಂದನ್ನು ಕರ್ನಾಟಕ ಸರ್ಕಾರ  ಆರಂಭಿಸಿರುವುದಾಗಿ ಉನ್ನತ ಮಟ್ಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಎರಡು ಹಾಗೂ ಮೂರನೇ ಹಂತದ ನಗರಗಳಿಗೆ ವೈದ್ಯರ ತಂಡವನ್ನು ಕಳುಹಿಸುವುದು ಕಷ್ಟಸಾಧ್ಯ. ಯು ಟ್ಯೂಬ್ ಚಾನೆಲ್ ಮೂಲಕ ಕೋವಿಡ್ ಅನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಆರೋಗ್ಯ ಸೇವೆ ಒದಗಿಸುವವರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ವಿವರಿಸಿದ್ದಾರೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಈ ಚಾನೆಲ್ ಆರಂಭಿಸಿದೆ ಎಂದು ಪಾಂಡೆ ತಿಳಿಸಿದ್ದಾರೆ. 

ಕೋವಿಡ್ -19 ತಡೆಗಟ್ಟುವುದು, ಆರೈಕೆ ಹಾಗೂ ಅದರ ಬಗೆಗಿನ ಜಾಗೃತಿಯ ಮಾಹಿತಿಯನ್ನೊಳಗೊಂಡ ವಿಡಿಯೋಗಳು ಈ ಚಾನೆಲ್ ನಲ್ಲಿ ಇದೆ. ಪ್ರಸ್ತುತ ಇಂಗ್ಲೀಷ್ ಮತ್ತು ಕನ್ನಡದಲ್ಲಿ 10 ವಿಡಿಯೋಗಳಿವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿಡಿಯೋಗಳನ್ನು ಅಪ್ ಲೋಡ್ ಮಾಡಲಾಗುವುದು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಡಾಕ್ಟರ್, ನರ್ಸ್ ಗಳು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತಿತರು ಸೇರಿದಂತೆ ಈಗಾಗಲೇ 1. 5 ಲಕ್ಷ ಫಾಲೋವರ್ಸ್ ಗಳನ್ನು ಜಾಗೃತಿ ಕರ್ನಾಟಕ ಯುಟ್ಯೂಬ್ ಚಾನೆಲ್ ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com