ತುಮಕೂರು: ಲಾಭಕ್ಕೆ ಲಾಕ್ ಡೌನ್ ಬಳಕೆ, ದುಬಾರಿ ಬೆಲೆಗೆ ಮಟನ್ ಮಾರುತ್ತಿದ್ದ ಅಂಗಡಿ ಸೀಜ್

ಲಾಕ್ ಡೌನ್ ಪರಿಸ್ಥಿತಿಯ ಲಾಭ ಪಡೆದು ದುಬಾರಿಬೆಲೆಗೆ ಮಟನ್ ಮಾರಾಟ ಮಾಡುತ್ತಿದ್ದ ಅಂಗಡಿಯನ್ನು ತುಮಕೂರು ಕಾರ್ಪೋರೇಷನ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಮಾಂಸದ ಅಂಗಡಿಗೆ ಬೀಗ ಹಾಕಿದ ಅಧಿಕಾರಿಗಳು
ಮಾಂಸದ ಅಂಗಡಿಗೆ ಬೀಗ ಹಾಕಿದ ಅಧಿಕಾರಿಗಳು

ತುಮಕೂರು: ಲಾಕ್ ಡೌನ್ ಪರಿಸ್ಥಿತಿಯ ಲಾಭ ಪಡೆದು ದುಬಾರಿಬೆಲೆಗೆ ಮಟನ್ ಮಾರಾಟ ಮಾಡುತ್ತಿದ್ದ ಅಂಗಡಿಯನ್ನು ತುಮಕೂರು ಕಾರ್ಪೋರೇಷನ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಕೊರೋನಾ ವೈರಸ್ ಸೋಂಕು ಹಿನ್ನಲೆಯಲ್ಲಿ ಇಡೀ ದೇಶವನ್ನು ಲಾಕ್ ಡೌನ್ ಮಾಡಲಾಗಿದ್ದು, ಅಗತ್ಯ ವಸ್ತುಗಳಿಗಾಗಿ ಜನ ಪರದಾಡುತ್ತಿದ್ದಾರೆ. ಇಂತಹ ಸಂದರ್ಭವನ್ನೇ ಕೆಲವರು ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ದುಬಾರಿ ಬೆಲೆಗೆ ಅಗತ್ಯವಸ್ತುಗಳನ್ನು ಮಾರಾಟ  ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ರಾಜ್ಯದಲ್ಲಿ ಕಾರ್ಯಾಚರಣೆ ಆರಂಭವಾಗಿದ್ದು, ತುಮಕೂರಿನಲ್ಲಿ ದುಬಾರಿ ಬೆಲೆಗೆ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಯನ್ನು ಟಿಸಿಸಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಮೂಲಗಳ ಪ್ರಕಾರ 500 ರೂ ಬೆಲೆ ಮಟನ್ ಅನ್ನು ಅಂಗಡಿ ಮಾಲೀಕರು 800ರೂಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಟಿಸಿಸಿ ಅಧಿಕಾರಿಗಳು ಗ್ರಾಹಕರ ಸೋಗಿನಲ್ಲಿ ಹೋಗಿ ಅಂಗಡಿ ಮಾಲೀಕನ ಬಣ್ಣ ಬಯಲು ಮಾಡಿದ್ದಾರೆ. ಅಲ್ಲದೆ ಅಂಗಡಿಯನ್ನು  ಮುಟ್ಟುಗೋಲು ಹಾಕಿಕೊಂಡು ಅಂಗಡಿ ಮಾಲೀಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com