ಕಿದ್ವಾಯಿ ಆಸ್ಪತ್ರೆಯಲ್ಲಿ ಒಂದೇ ದಿನ 46 ಹೊಸ ರೋಗಿಗಳಿಗೆ ಕೊರೋನಾ ಪರೀಕ್ಷೆ

ಕಿದ್ವಾಯಿ ಆಸ್ಪತ್ರೆ
ಕಿದ್ವಾಯಿ ಆಸ್ಪತ್ರೆ

ಬೆಂಗಳೂರು: ಕಿದ್ವಾಯಿ ಸ್ಮಾರಕ ಆಸ್ಪತ್ರೆಯಲ್ಲಿ  ಕೋವಿಡ್ -19 ಪರೀಕ್ಷಾ ಸೌಲಭ್ಯ ಆರಂಭಿಸಲಾಗಿದ್ದು ಮಂಳವಾರ 19 ಹಳೇಯ ಮತ್ತು 46 ಹೊಸ ರೋಗಿಗಳಿಗೆ ಪರೀಕ್ಷಾ ನಡೆಸಿದೆ.ಇದನ್ನು ಸಂಸ್ಥೆಯ ಹೊರಗುತ್ತಿಗೆ ಸುಧಾರಿತ  ಜೀವಶಾಸ್ತ್ರ ಪ್ರಯೋಗಾಲಯದಲ್ಲಿ ಮಾಡಲಾಯಿತು.

ಆಸ್ಪತ್ರೆಯಲ್ಲಿರುವ 160 ರೋಗಿಗಳಿಗೆ ಕೊರೋನಾ ಪರೀಕ್ಷೆ ನಡೆಸಲು ಅನುಮತಿ ನೀಡುವಂತೆ ಆಸ್ಪತ್ರೆ ನಿರ್ದೇಶಕ ಡಾ. ರಾಮಚಂದ್ರ ಆರೋಗ್ಯ ಇಲಾಖೆಗೆ ಪತ್ರ ಬರೆದಿತ್ತು, ಅನುಮತಿ ಪಡೆದ ಬಳಿಕ ಆಸ್ಪತ್ರೆಯ ಎಲ್ಲಾ ರೋಗಿಗಳಿಗೂ ಕೊರೋನಾ ಟೆಸ್ಟ್ ನಡೆಸಲಾಗುವುದು, ಜೊತೆಗೆ ರೋಗಿಗಳನ್ನು ನೋಡಿಕೊಂಡಿರುವ ರೋಗಿಗಳ ಸಂಬಂಧಿಕರಿಗೂ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಇನ್ನೂ ದಾಖಲಾಗಿರುವ ಹೊಸ ರೋಗಿಗಳಿಗೂಒ ಪರೀಕ್ಷೆ ನಡೆಸಿದ್ದು ಅವರ ವರದಿ ನೆಗೆಟಿವ್ ಬಂದರೆ ಅಂತವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದ್ದಾರೆ. ಒಂದು ಗಂಟೆಯಲ್ಲಿ ಈ ಪರೀಕ್ಷಾ ಕಾರ್ಯ ಮುಗಿದಿದ್ದು ಅದರ ವರದಿಯನ್ನು ಕರ್ನಾಟಕ ಟಾಸ್ಕ್ ಪೋರ್ಸ್ ಗೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com