ಕೋವಿಡ್-19: ರಾಜ್ಯದಲ್ಲಿ ಚೇತರಿಕೆ ಪ್ರಮಾಣದಲ್ಲಿ ವೃದ್ಧಿ, ಸಕ್ರಿಯ ಪ್ರಕರಣಗಳ ಬಗ್ಗೆ ಆತಂಕ

ರಾಜ್ಯದಲ್ಲಿ ಕೋವಿಡ್-19 ನಿಂದ  ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾತ್ರೋರಾತ್ರಿ ಚೇತರಿಕೆ ಪ್ರಮಾಣ ಶೇ. 41. 49ರಿಂದ 42. 81ಕ್ಕೆ ಪ್ರಗತಿಯಾಗಿದೆ. 
ಆರೋಗ್ಯ ಕಾರ್ಯಕರ್ತರು
ಆರೋಗ್ಯ ಕಾರ್ಯಕರ್ತರು

ಬೆಂಗಳೂರು:  ರಾಜ್ಯದಲ್ಲಿ ಕೋವಿಡ್-19 ನಿಂದ  ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾತ್ರೋರಾತ್ರಿ ಚೇತರಿಕೆ ಪ್ರಮಾಣ ಶೇ. 41. 49ರಿಂದ 42. 81ಕ್ಕೆ ಪ್ರಗತಿಯಾಗಿದೆ. 

ಭಾನುವಾರ ಒಂದೇ ದಿನ ದಾಖಲೆ ಪ್ರಮಾಣದ 4,077 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಾದ್ಯಂತ ಈವರೆಗೂ ಒಟ್ಟಾರೆ, 57, 725 ರೋಗಿಗಳು ಬಿಡುಗಡೆಯಾಗಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಮರಣ ಪ್ರಮಾಣವೂ ಸತತವಾಗಿ ಕುಂಠಿತಗೊಳ್ಳುತ್ತಿದೆ. ರಾಜ್ಯದಲ್ಲಿನ ಮರಣ ಪ್ರಮಾಣ
ಶೇ. 1.85 ರಷ್ಟಿದ್ದು, ರಾಷ್ಟ್ರೀಯ ಮರಣ ಪ್ರಮಾಣ ಶೇ.2.11ಕ್ಕಿಂತಲೂ ಕಡಿಮೆಯಿದೆ.

ಆದಾಗ್ಯೂ, ಸಕ್ರಿಯ ಪ್ರಕರಣಗಳು ಆತಂಕಕ್ಕೆ ಕಾರಣವಾಗಿವೆ. ಶನಿವಾರ 73,219ರಿಂದ 74,950ಕ್ಕೆ ಏರಿಕೆಯಾಗಿದ್ದು, ಭಾನುವಾರ 1,371 ಪ್ರಕರಣಗಳು ಹೆಚ್ಚುವರಿಯಾಗಿ ಸೇರಿಕೊಂಡಿವೆ. ಜುಲೈ 30 ಮತ್ತು ಆಗಸ್ಟ್ 1ರ ನಡುವೆ ಮೂರು ದಿನಗಳಲ್ಲಿ 3 ಸಾವಿರ ಮಂದಿ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಸುಧಾರಿಸಿದೆ. ಭಾನುವಾರದ ನಂತರ ಸತತವಾಗಿ ಪ್ರಗತಿಯಾಗುತ್ತಲೇ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com