ಕೊರೋನಾ ಸಂಕಷ್ಟದ ಸಂದರ್ಭದಲ್ಲಿ 59 ಅಭ್ಯರ್ಥಿಗಳಿಗೆ ಕೆಲಸ ಕೊಟ್ಟ 13 ಕಂಪನಿಗಳು!

ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬಹುತೇಕ ಸಂಸ್ಥೆಗಳನ್ನು ಕೆಲಸಗಾರರನ್ನು ತೆಗೆಯುತ್ತಿದ್ದರೆ , 13 ಕಂಪನಿಗಳು ಹೊಸ ಉದ್ಯೋಗಿಗಳನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿವೆ.
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು

ಬೆಂಗಳೂರು: ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬಹುತೇಕ ಸಂಸ್ಥೆಗಳನ್ನು ಕೆಲಸಗಾರರನ್ನು ತೆಗೆಯುತ್ತಿದ್ದರೆ , 13 ಕಂಪನಿಗಳು ಹೊಸ ಉದ್ಯೋಗಿಗಳನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿವೆ.ಕಳೆದ ತಿಂಗಳು ಚಾಲನೆಗೊಂಡ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಜಾಬ್ ಪೋರ್ಟಲ್  (https://skillconnect.kaushalkar.com)ನೆರವಿಂದ ಕಳೆದ ಕೆಲವು ವಾರದಿಂದೀಚಿಗೆ ವಿದೇಶದಿಂದ ರಾಜ್ಯಕ್ಕೆ ಮರಳಿದವರು ಸೇರಿದಂತೆ 59 ಅಭ್ಯರ್ಥಿಗಳು ಕೆಲಸ ಪಡೆದುಕೊಂಡಿದ್ದಾರೆ. ಈ ರಾಜ್ಯಸರ್ಕಾರದ ಇಂತಹ ಕಾರ್ಯಕ್ರಮ ದೇಶದಲ್ಲಿಯೇ ಮೊದಲನೇಯದಾಗಿದೆ.

ಜುಲೈ ಎರಡನೇ ವಾರದಲ್ಲಿ ಆಯೋಜಿಸಲಾಗಿದ್ದ  ಉದ್ಯೋಗ ಮೇಳದಲ್ಲಿ ನೋಂದಣಿಯಾಗಿದ್ದ 53 ಕಂಪನಿಗಳ ಪೈಕಿ ಹೋಟೆಲ್, ಹೇಲ್ತ್ ಕೇರ್ ನಂತಹ 13 ಕಂಪನಿಗಳು ಪಾಲ್ಗೊಂಡು, 59 ಅಭ್ಯರ್ಥಿಗಳನ್ನು ಕೆಲಸಕ್ಕೆ ನೇಮಿಸಿಕೊಂಡಿವೆ. ಸುಮಾರು 938 ಅಭ್ಯರ್ಥಿಗಳು ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂಪನಿಗಳ ಅವಶ್ಯಕತೆ ಆಧಾರದ ಮೇಲೆ ಅಭ್ಯರ್ಥಿಗಳ ಕಿರುಪಟ್ಟಿಯನ್ನು ತಯಾರಿಸಲಾಗಿತ್ತು. ಉದ್ಯೋಗಿಗಳು ಈಗಾಗಲೇ ನೇಮಕಾತಿ ಪತ್ರ ಪಡೆದಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.  ವಿವಿಧ ಹಂತಗಳಲ್ಲಿ 863 ಜನರ ನೇಮಕ ಕೂಡಾ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೌಕರಿ ಡಾಟ್ ಕಾಮ್ ರೀತಿಯಲ್ಲಿ ಪೋರ್ಟಲ್ ನ್ನು ಮೇಲ್ದರ್ಜೇಗೇರಿಸಲು ಸರ್ಕಾರ ಇದೀಗ ಯೋಜಿಸಿದೆ. ಕಂಪನಿಗಳು ಅಗತ್ಯವಿರುವ ಖಾಲಿ ಹುದ್ದೆಗಳ ಬಗ್ಗೆ ತಿಳಿಸಲು ಈ ಆನ್ ಲೈನ್ ನಿಂದ ಸುಲಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com