ಎರಡು ವರ್ಷ, ಎರಡು ಪ್ರವಾಹ, ಕರ್ನಾಟಕದ ಎರಡು ಸರ್ಕಾರಗಳಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ!

ಬುಧವಾರ ತಲಕಾವೇರಿಯಲ್ಲಿ ಸಂಭವಿಸಿದ ಬೃಹತ್ ಭೂ ಕುಸಿತದಿಂದಾಗಿ ಕಲಕಾವೇರಿ ದೇವಾಲಯದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಐವರು ಪ್ರಾಣ ಕಳೆದುಕೊಂಡಿದ್ದಾರೆ, ಸೂಕ್ಷ್ಮ ಪರಿಸರ ವಲಯದಲ್ಲಿ ಮಾನವ ಹಸ್ತಕ್ಷೇಪ ಹೆಚ್ಚಿದ್ದು ಇದಕ್ಕೆ ಕಾರಣ ಎಂದು ಪರಿಸರವಾದಿಗಳು ಅಭಿಪ್ರಾಯ ಪಟ್ಟಿದ್ದಾರೆ.

Published: 10th August 2020 10:42 AM  |   Last Updated: 10th August 2020 10:42 AM   |  A+A-


File image

ಸಂಗ್ರಹ ಚಿತ್ರ

Posted By : Shilpa D
Source : The New Indian Express

ಮಡಿಕೇರಿ: ಬುಧವಾರ ತಲಕಾವೇರಿಯಲ್ಲಿ ಸಂಭವಿಸಿದ ಬೃಹತ್ ಭೂ ಕುಸಿತದಿಂದಾಗಿ ಕಲಕಾವೇರಿ ದೇವಾಲಯದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಐವರು ಪ್ರಾಣ ಕಳೆದುಕೊಂಡಿದ್ದಾರೆ, ಸೂಕ್ಷ್ಮ ಪರಿಸರ ವಲಯದಲ್ಲಿ ಮಾನವ ಹಸ್ತಕ್ಷೇಪ ಹೆಚ್ಚಿದ್ದು ಇದಕ್ಕೆ ಕಾರಣ ಎಂದು ಪರಿಸರವಾದಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಆಗಸ್ಟ್ 2019 ರಲ್ಲಿ, ತಲಕಾವೇರಿಯಲ್ಲಿರುವ ಬ್ರಹ್ಮಗಿರಿ ಬೆಟ್ಟದ ಭೂಮಿಯಲ್ಲಿ ಮೊದಲು ದೊಡ್ಡ ಬಿರುಕು ಕಾಣಿಸಿಕೊಂಡಿತ್ತು. ಅದು ಪವಿತ್ರ ಕಾವೇರಿ ನದಿಯ ಉಗಮ ಸ್ಥಾನವಾದ ‘ಕುಂಡಿಕೆ’ ಗೂ ವಿಸ್ತರಿಸಿತು.

ಈ ವೇಳೆ ಜಿಲ್ಲಾಡಳಿತವು ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಯಿಂದ ವರದಿ ಕೋರಿತು, ತಲಕಾವೇರಿ ದೇವಾಲದ ಬ್ರಹ್ಮ ಗಿರಿ ಬೆಟ್ಟದ ಇಳಿಜಾರಿನ ಮೇಲ್ಮೇಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದ್ದು, ಅಲ್ಲಿ ಸಣ್ಣ ಭೂಕುಸಿತ ಸಕ್ರಿಯವಾಗಿದ್ದು, ಅದರಿಂದ ಬೆಟ್ಟದಲ್ಲಿ ಭೂಕುಸಿತ ಉಂಟಾಗುತ್ತಿದೆ ಎಂದು ಹೇಳಲಾಗಿತ್ತು.ನೀರಿನ ಸಂರಕ್ಷಣೆಗಾಗಿ ಮಧ್ಯದ ಇಳಿಜಾರಿನಲ್ಲಿ ಅರಣ್ಯ ಇಲಾಖೆಯಿಂದ ಅನೇಕ ಕಂದಕಗಳನ್ನು ತಯಾರಿಸಲಾಗುತ್ತದೆ.

ಈ ಕಂದಕಗಳನ್ನು ಬಿರುಕಿಗೆ ಸಮಾನಾಂತರವಾಗಿ ಜೋಡಿಸಲಾಗಿದೆ, ಇದು ಅತಿಯಾದ ಹೊರೆಯ ವಸ್ತುಗಳಿಗೆ ಒಳನುಸುಳುವಿಕೆಗೆ ಕಾರಣವಾಗುತ್ತದೆ. ರಸ್ತೆ ವಿಸ್ತರಣೆಗಾಗಿ ಇಳಿಜಾರು ಪ್ರದೇಶವನ್ನು ಕತ್ತರಿಸಲು ಇದು ಬೆಂಬಲಿಸುವುದಿಲ್ಲ. ನೀರಿನ ಒಳನುಸುಳುವಿಕೆಯ ಸಾಧ್ಯತೆಯನ್ನು ಕಡಿಮೆ ಮಾಡಲು ವಸ್ತುಗಳಿಂದ ಬಿರುಕು ತುಂಬಲು ಅದು
ಸೂಚಿಸಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. 2019ರ ಸೆಪ್ಟಂಬರ್ ನಲ್ಲಿ ಬಿರುಕು ಬಿಟ್ಟ ಪ್ರದೇಶ ಮರಳಿನಿಂದ ತುಂಬಿತು.

204-15 ರಲ್ಲಿ ಕಾವೇರಿ ಕುಂಡಿಕೆಯಲ್ಲಿ ನೀರು ಖಾಲಿಯಾಗಿದ್ದಾಗ, ಹೊರಹರಿವು ಹೆಚ್ಚಿಸಲು ಬ್ರಹ್ಮಗಿರಿ ಬೆಟ್ಟದಲ್ಲಿ ಮಳೆ ನೀರು ಕೊಯ್ಲು ಘಟಕ ಸ್ಥಾಪಿಸುವಂತೆ ಕೆಲ ಸಾಮಾಜಿಕ ಕಾರ್ಯಕರ್ತರು ಸಲಹೆ ನೀಡಿದ್ದರು. ಅದಾದ ನಂತರ ಸಿಎಂ ಯಡಿಯೂರಪ್ಪ ಮತ್ತು ಕೇಂದ್ರ ಸರ್ಕಾರ ಮಳೆ ನೀರು ಕೊಯ್ಲು ಘಟಕ ಸ್ಥಾಪನೆಗಾಗಿ ಅನುದಾನ ಬಿಡುಗಡೆ ಮಾಡಿದರು.  ಅಲ್ಲಿಗೆ ಅರ್ಥ್ ಮೂವರ್ಸ್ ನಿಯೋಜಿಸಿದ ಅರಣ್ಯ ಇಲಾಖೆ 2016 ರಲ್ಲಿ ಯೋಜನೆ ಪೂರ್ಣಗೊಳಿಸಿತು. ಇದರಿಂದಾಗಿ ಬೇಸಿಗೆಯಲ್ಲೂ ಕೂಡ ಕುಂಡಿಕೆಯಲ್ಲಿ ನೀರಿನ ಪ್ರಮಾಣ ಹೆಚ್ಚಿತ್ತು. ಹೀಗಾಗಿ ಅರ್ಚಕ ನಾರಾಯಣ ಆಚಾರ್ ಸಂತಸಗೊಂಡಿದ್ದರು ಎಂದು ಕೂರ್ಗ್ ದೇವಾಲಯದ ಅನುದಾನ ಸಮತಿಯ ನಿವೃತ್ತ ಕಾರ್ಯಕಾರಿ ಅಧಿಕಾರಿ ಸಂಪತ್ ಕುಮಾರ್ ತಿಳಿಸಿದ್ದಾರೆ.

ತಲಕಾವೇರಿಯ  ವ್ಯೂ ಪಾಯಿಂಟ್ ನಲ್ಲಿರುವ ರೆಸಾರ್ಟ್ ಗೆ ತೆರಳಲು ರಸ್ತೆ ನಿರ್ಮಾಣ ಸಂದರ್ಭದಲ್ಲಿ ಅನೇಕ ಮರಗಳನ್ನು  ಕತ್ತರಿಸಲಾಯಿತು. ಅಂದಿನಿಂದ ಸಣ್ಣ ಪ್ರಮಾಣದ ಭೂಕುಸಿತ ಆರಂಭವಾಗಿತ್ತು ಎಂದು ಸಂಪತ್ ಕುಮಾರ್ ತಿಳಿಸಿದ್ದಾರೆ.

ಆದಾದ ನಂತರ ಅವೈಜ್ಞಾನಿಕವಾದ ರಸ್ತೆ ನಿರ್ಮಾಣ ಮತ್ತು ಕೇಬಲ್ ವರ್ಕ್ ಕೆಲಸಗಳು ನಡಂದವು ಎಂದು ಕೊಡಗು ಏಕೀಕರಣ ಸಮಿತಿ ತಮ್ಮು ಪೂವಯ್ಯ ತಿಳಿಸಿದ್ದಾರೆ. ಖಾಸಗಿ ಮೊಬೈಲಿ ನೆಟ್ ವರ್ಕ್ ಸಂಸ್ಥೆ ಅವೈಜ್ಞಾನಿಕ ರೀತಿಯಲ್ಲಿ ಕೇಬಲ್  ವೈರ್ ಗಳನ್ನು ಹೂತಿರುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು.

ಸರ್ಕಾರಿ ಅಧಿಕಾರಿಗಳು ಭಾರೀ ತೂಕದ ಅರ್ಥ್ ಮೂವರ್ಸ್ ನಿಯೋಜಿಸುವುದರ ಜೊತೆಗೆ ಅವೈಜ್ಞಾನಿಕ ರೀತಿ ಕೆಲಸಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.  ಜೊತೆಗೆ ಹೊಸ ಯೋಜನೆಗಳಿಗಾಗಿ ಅನುದಾನ ಬಿಡುಗಡೆ ಮಾಡಿದ್ದಾರೆ, ಹೀಗಾಗಿ ಪ್ರಕೃತಿ ವಿಕೋಪದ ಆರೋಪವನ್ನು ಯಾರೋಬ್ಬರು ಸ್ವೀಕರಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಹಲವು ಸೂಕ್ಷ್ಮ ಪರಿಸರ ವಲಯಗಳಿವೆ ಎಂದು ಕಸ್ತೂರಿ ರಂಗನ್ ವರದಿ ತಿಳಿಸಿದೆ, ಈ ಸ್ಥಳಗಳು ನೈಸರ್ಗಿಕ ವಿಕೋಪಕ್ಕೆ ಕಾರಣವಾಗಲಿವೆ ಎಂದು ಸಹ ಹೇಳಲಾಗಿತ್ತೆಂದು ಪರಿಸರವಾದಿಗಳು ಅಭಿಪ್ರಾಯ ಪಟ್ಟಿದ್ದಾರೆ.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp