ಗನ್ ಗೆ ಕೆಲಸ ಕೊಡ್ಬೇಡಿ: ರೌಡಿಗಳಿಗೆ ಚೆನ್ನಣ್ಣನವರ್ ಖಡಕ್ ಎಚ್ಚರಿಕೆ

 ರೌಡಿಗಳು ಮಾರಕಾಸ್ತ್ರಗಳನ್ನು ಹಿಡಿದು ಜನರಲ್ಲಿ ಭೀತಿ ಹುಟ್ಟಿಸಿದರೆ  ಗನ್ ಗೆ ಕೆಲಸ ಕೊಡಬೇಕಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ರವಿ ಚೆನ್ನಣ್ಣನವರ್1
ರವಿ ಚೆನ್ನಣ್ಣನವರ್1

ಬೆಂಗಳೂರು: ರೌಡಿಗಳು ಮಾರಕಾಸ್ತ್ರಗಳನ್ನು ಹಿಡಿದು ಜನರಲ್ಲಿ ಭೀತಿ ಹುಟ್ಟಿಸಿದರೆ  ಗನ್ ಗೆ ಕೆಲಸ ಕೊಡಬೇಕಾಗುತ್ತದೆ ಎಂದು
ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಆನೇಕಲ್ ನಲ್ಲಿ ರೌಡಿ ಪರೇಡ್ ನಡೆಸಿದ ಅವರು,‌ ಜನರಲ್ಲಿ ಭಯಭೀತಿ ಸೃಷ್ಟಿಸಿ ಅಕ್ರಮ ಚಟುವಟಿಕೆ ನಡೆಸಿದರೆ  ಗನ್ ಅಸ್ತ್ರ 
ಪ್ರಯೋಗಿಸಬೇಕಾಗುತ್ತದೆ. ನಾವು ಯಾರಿಗೆ ಬೆದರಿಕೆ ಹಾಕಿದರೂ ಪೊಲೀಸರು ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತಾರೆ.ಪ್ರಭಾವಿಗಳು, 
ರಾಜಕಾರಣಿಗಳು ನಮ್ಮ ಕೈಯಲ್ಲಿದ್ದಾರೆ ಎಂದುಕೊಂಡಿದ್ದರೇ ಅಂತಹವರಿಗೆ ಕೆಲವೇ ದಿನಗಳಲ್ಲಿ ತಕ್ಕ ಪಾಠ ಕಲಿಸೇ ತೀರುತ್ತೇವೆ ಎಂದು ಖಡಕ್ ಸೂಚನೆ ನೀಡಿದ್ದಾರೆ.

ಗ್ರಾಮಾಂತರ ಪ್ರದೇಶವು ಶಾಂತಿಯುತವಾಗಿದೆ. ಆದರೆ, ಇತ್ತೀಚಿಗೆ ಕೆಲವರಿಂದ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಇದಕ್ಕೆಲ್ಲ
 ತಾವು ಕಡಿವಾಣ ಹಾಕಿಯೇ  ತೀರುವುದಾಗಿ ಹೇಳಿದ ಎಸ್ಪಿ, ಗ್ರಾಮಾಂತರ ಪ್ರದೇಶವು ಶಾಂತಿಯುತವಾಗಿದೆ. ಆದರೆ, ಇತ್ತೀಚಿಗೆ ಕೆಲವರಿಂದ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಇದಕ್ಕೆಲ್ಲ ತಾವು ಕಡಿವಾಣ ಹಾಕಿಯೇ ತೀರುವುದಾಗಿ ತಿಳಿಸಿದರು.

ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಮುಂದೆ ಬರಲಿರುವ ಗ್ರಾಮ ಪಂಚಾಯಿತಿ ಚುನಾವಣೆ ಹಾಗೂ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಗುಂಪುಗಾರಿಕೆ, ಬೆದರಿಕೆ ಹಾಕಿದರೆ ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ವಿರುದ್ಧ 
ಗೂಂಡಾ ಕಾಯ್ದೆ ಜಾರಿ ಜತೆಗೆ ಗಡಿಪಾರು ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com