ವಲಯವಾರು ಅಂಕಿಅಂಶಗಳು
ವಲಯವಾರು ಅಂಕಿಅಂಶಗಳು

ಕೋವಿಡ್-19: ಸಂಪರ್ಕಿತರ ಪತ್ತೆಯಲ್ಲಿ ದಾಸರಹಳ್ಳಿ ಉತ್ತಮ, ಆರ್ ಆರ್ ನಗರ ಕಳಪೆ!

ಬಿಬಿಎಂಪಿ ವ್ಯಾಪ್ತಿಯಲ್ಲಿ  ಕಳೆದ ಒಂದು ತಿಂಗಳ ಸಂಪರ್ಕ ಪತ್ತೆ ಮಾಹಿತಿಯನ್ನು  ರಾಜ್ಯ ವಾರ ರೂಮ್ ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ  ಸರಾಸರಿ 6.29 ರಂತೆ ಕೋವಿಡ್-19 ರೋಗಿಗಳೊಂದಿಗಿನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ.

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ  ಕಳೆದ ಒಂದು ತಿಂಗಳ ಸಂಪರ್ಕ ಪತ್ತೆ ಮಾಹಿತಿಯನ್ನು  ರಾಜ್ಯ ವಾರ ರೂಮ್ ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ  ಸರಾಸರಿ 6.29 ರಂತೆ ಕೋವಿಡ್-19 ರೋಗಿಗಳೊಂದಿಗಿನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ.

ಜುಲೈ 11ರಿಂದ ಆಗಸ್ಟ್ 12ರ ನಡುವಣದ ಮಾಹಿತಿ ಪ್ರಕಾರ ಒಟ್ಟಾರೇ, 54,984 ರೋಗಿಗಳಿದ್ದು, 3,45, 633 ಪ್ರಾಥಮಿಕ ಮತ್ತು
ದ್ವಿತೀಯ ಸಂಪರ್ಕಿತರಿದ್ದಾರೆ.

ಪ್ರತಿ ರೋಗಿಗೆ 15. 10 ರಂತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವುದರೊಂದಿಗೆ ದಾಸರಹಳ್ಳಿ ವಲಯ 
ಉತ್ತಮವಾಗಿದ್ದರೆ, ದಕ್ಷಿಣ ವಲಯದಲ್ಲಿ ಪ್ರತಿ ರೋಗಿಗೆ 10.16 ಸಂಪರ್ಕಿತರೊಂದಿಗೆ ಎರಡನೇ ಸ್ಥಾನ ಹೊಂದಿದೆ. ಆದಾಗ್ಯೂ, 
ಕೆಲ ವಲಯಗಳು ಸಂಪರ್ಕಿತರ ಪತ್ತೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ.

ರಾಜರಾಜೇಶ್ವರ ನಗರದಲ್ಲಿ  ಪ್ರತಿ ರೋಗಿಗೆ 2.16 ಪ್ರಾಥಮಿಕ ಸಂಪರ್ಕಿತರಿದ್ದರೆ 1.44 ದ್ವಿತೀಯ ಸಂಪರ್ಕಿತರು ಕಂಡುಬರುವ ಮೂಲಕ ಎಲ್ಲಾ ವಲಯಗಳಿಂತ ಕಡಿಮೆಯಾಗಿದೆ. ಬೊಮ್ಮನಹಳ್ಳಿ 4.15 ರೊಂದಿಗೆ ಕಡಿಮೆ ಸಂಪರ್ಕಿತರು ಪತ್ತೆಯಾಗಿರುವ ಎರಡನೇ ವಲಯವಾಗಿದೆ. ದಕ್ಷಿಣ ವಲಯದಲ್ಲಿ  ಸಂಪರ್ಕಿತರನ್ನು ಕಂಡುಹಿಡಿಯುವುದರಲ್ಲಿ ಪ್ರಗತಿಯಾಗಿದೆ ಎಂದು
 ರಾಜ್ಯ ವಾರ್ ರೂಮ್ ಉಸ್ತುವಾರಿ ಮುನೀಸ್ ಮೌದ್ಗಿಲ್ ತಿಳಿಸಿದ್ದಾರೆ.

ಆರ್ ಆರ್ ನಗರದಲ್ಲಿನ ಕಳಪೆ ಸಾಧನೆಗೆ ಪ್ರತಿಕ್ರಿಯಿಸಿರುವ ಈ ವಲಯದ ವಿಶೇಷ ಉಸ್ತುವಾರಿ ಅಧಿಕಾರಿ ಡಾ.ಆರ್. ವಿಶಾಲ್,
ದ್ವಿತೀಯ ಸಂಪರ್ಕಿತರಿಗಿಂತಲೂ ಪ್ರಾಥಮಿಕ ಸಂಪರ್ಕಿತರ ಕಡೆಗೆ ಹೆಚ್ಚಿನ ಗಮನ ಹರಿಸಲಾಗಿದ್ದು, ಮಾನವ ಸಂಪನ್ಮೂಲದ
ಕೊರತೆಯೂ ಕಾಡಿತ್ತು,ಇದೀಗ ಪ್ರಾಥಮಿಕ ಸಂಪರ್ಕಿತರನ್ನು ದಕ್ಷತೆಯಿಂದ ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದರು.

Related Stories

No stories found.

Advertisement

X

Advertisement

X
Kannada Prabha
www.kannadaprabha.com