ಬೆಂಗಳೂರು ಗಲಭೆ: ಘಟನಾ ಸ್ಥಳಕ್ಕೆ ಬಿಜೆಪಿ ಸಮಿತಿ ಭೇಟಿ, ಪರಿಶೀಲನೆ

ನಗರದ ಕೆಜಿ ಹಳ್ಳಿ ಮತ್ತು ಡಿಜಿ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪರಿಶೀಲನಾ ಸಮಿತಿಯು ಭಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿತು. 

Published: 17th August 2020 12:33 PM  |   Last Updated: 17th August 2020 12:33 PM   |  A+A-


A team of BJP delegates visited the riot hit area of Dj Halli on Sunday to take stock of the ground situation in Bengaluru on Sunday.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಬಿಜೆಪಿ ಸಮಿತಿ ಸದಸ್ಯರು

Posted By : manjula
Source : The New Indian Express

ಬೆಂಗಳೂರು: ನಗರದ ಕೆಜಿ ಹಳ್ಳಿ ಮತ್ತು ಡಿಜಿ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪರಿಶೀಲನಾ ಸಮಿತಿಯು ಭಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿತು. 

ಗಲಭೆ ಪ್ರಕರಣ ಸಂಬಂಧ ಸತ್ಯಸತ್ಯತೆಗಳನ್ನು ಬಯಲಿಗೆಳೆಯರು ಬಿಜೆಪಿಯು 6 ಸದಸ್ಯರ ಸಮಿತಿಯೊಂದರನ್ನು ರಚನೆ ಮಾಡಿತ್ತು. ಸಮತಿಯಲ್ಲಿ ಚಲವಾದಿ ನಾರಾಯಣ ಸ್ವಾಮಿ, ಅರವಿಂದ ಲಿಂಬಾವಳಿ, ಎಂ.ಶಂಕರಪ್ಪ, ಮಲ್ಲಿಕಯ್ಯ ಗುತ್ತೇದಾರ್, ಪಿಸಿ ಮೋಹನ್ ಹಾಗೂ ನಾರಾಯಣ ಸ್ವಾಮಿ ಇದ್ದು, ನಿನ್ನೆಯಷ್ಟೇ ಈ ಸಮಿತಿಯ ಸದಸ್ಯರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಭೇಟಿ ವೇಳೆ ಗಲಭೆಯಲ್ಲಿ ನಲುಗಿ ಹೋಗಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಗೂ ಭೇಟಿ ಪರಿಶೀಲಿಸಿದರು. 

ಭೇಟಿ ಬಳಿಕ ಸಮಿತಿಯ ಸದಸ್ಯರು ವರದಿಯನ್ನು ಸಿದ್ಧಪಡಿಸಲಿದ್ದು, ಈ ವರದಿಯನ್ನು ಇನ್ನೊಂದು ವಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸಲ್ಲಿಸಲಿದ್ದಾರೆ. 

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಲಿಂಬಾವಳಿಯವರು, ನಾನು ಅನೇಕ ಬಾರಿ ಕಾಶ್ಮೀರಕ್ಕೆ ಹೋಗಿದ್ದೇನೆ. ಅಲ್ಲಿಯೂ ಇಂತ ಪರಿಸ್ಥಿತಿ ನೋಡಿರಲಿಲ್ಲ. ಹೀಗೇ ಬಿಟ್ಟರೆ ಕರ್ನಾಟಕ ರಾಜ್ಯವು ಇಂಥ ಚಟುವಟಿಕೆ ನಡೆಸುವವರ ತಾಣವಾಗಲಿದೆ. ಹಾಗಾಗಿ ಕೃತ್ಯಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು. 

ಇದು ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯವೋ, ಶಾಸಕ ಶ್ರೀನಿವಾರ ಮೂರ್ತಿಯವರ ರಾಜಕೀಯ ಬೆಳವಣಿಗೆ ಸಹಸಲಾರದೆ ನಡೆದ ಘಟನೆಯೋ, ದಲಿತ ಮೇಲೆ ನಡೆದ ದಾಳಿಯೋ ನನಗೆ ಗೊತ್ತಿಲ್ಲ. ಆದರೆ, ಇದೊಂದು ವ್ಯವಸ್ಥಿತ ಪಿತೂರಿಯಾಗಿದೆ ಎಂದು ಹೇಳಿದ್ದಾರೆ. 


Stay up to date on all the latest ರಾಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp