ರಿಲಯನ್ಸ್ ಜಿಯೋದಿಂದ ಕೊರೋನಾ ವಾರಿಯರ್ಸ್ ಬೆಂಗಳೂರು ಸಂಚಾರ ಪೊಲೀಸ್ ಗೆ 50,000 ಮಾಸ್ಕ್, ಸ್ಯಾನಿಟೈಸರ್ ದೇಣಿಗೆ

ರಿಲಯನ್ಸ್ ಫೌಂಡೇಷನ್ ಹಾಗೂ ರಿಲಯನ್ಸ್ ಇನ್ಫೋಕಾಮ್ ನಿಂದ ಬೆಂಗಳೂರು ಸಂಚಾರ ಪೊಲೀಸರನ್ನು ಗೌರವಿಸಲಾಯಿತು.

Published: 27th August 2020 08:46 PM  |   Last Updated: 27th August 2020 08:46 PM   |  A+A-


For representation purpose only

ಸಂಗ್ರಹ ಚಿತ್ರ

Posted By : Vishwanath S
Source : UNI

ಬೆಂಗಳೂರು: ರಿಲಯನ್ಸ್ ಫೌಂಡೇಷನ್ ಹಾಗೂ ರಿಲಯನ್ಸ್ ಇನ್ಫೋಕಾಮ್ ನಿಂದ ಬೆಂಗಳೂರು ಸಂಚಾರ ಪೊಲೀಸರನ್ನು ಗೌರವಿಸಲಾಯಿತು.

ಬೆಂಗಳೂರು ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ರಿಲಯನ್ಸ್ ಗ್ರೂಪ್ ನಿಂದ 50,000 ಎನ್‌95 ಮಾಸ್ಕ್ ಹಾಗೂ ಅಷ್ಟೇ ಸಂಖ್ಯೆಯ ಸ್ಯಾನಿಟೈಸರ್ ದೇಣಿಗೆ ನೀಡಲಾಯಿತು.

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದಣಿವರಿಯದೆ ಕೆಲಸ ಮಾಡುತ್ತಿರುವ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ಶ್ಲಾಘಿಸಲಾಯಿತು. 

ಈ ಸಂದರ್ಭದಲ್ಲಿ ಬೆಂಗಳೂರು ನಗರ ಕಮಿಷನರ್ ಕಮಲ್ ಪಂತ್ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಕಮಿಷನರ್ ರವಿಕಾಂತೇಗೌಡ,  ರಿಲಯನ್ಸ್ ಸಮೂಹದ ಪ್ರತಿನಿಧಿ ರಿಲಯನ್ಸ್ ಜಿಯೋ ಕರ್ನಾಟಕದ ಸಿಇಒ ಅಮಿತಾಬ್ ಭಾಟಿಯಾ, ರಿಲಯನ್ಸ್ ಇಂಡಸ್ಟ್ರೀಸ್ ಉಪಾಧ್ಯಕ್ಷರಾದ ಜಿಮ್ಮಿ ಅಮ್ರೋಲಿಯಾ ಉಪಸ್ಥಿತರಿದ್ದರು.

Stay up to date on all the latest ರಾಜ್ಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp