ಬೆಂಗಳೂರು: ಚಿನ್ನ ಶುದ್ಧತೆಯ ನಕಲಿ ಸೀಲ್ ಹಾಕಿ ಮಾರಾಟ, ನಾಲ್ವರ ಬಂಧನ

ಚಿನ್ನವನ್ನು ಕರಗಿಸಿ ಬಿಸ್ಕೆಟ್ ಗಳಾಗಿ ಪರಿವರ್ತಿಸಿ ನಂತರ ಚಿನ್ನ ಶುದ್ಧತೆಯ ಬಗ್ಗೆ ನಕಲಿ ಸೀಲ್ ಹಾಕಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚಿನ್ನ
ಚಿನ್ನ

ಬೆಂಗಳೂರು: ಚಿನ್ನವನ್ನು ಕರಗಿಸಿ ಬಿಸ್ಕೆಟ್ ಗಳಾಗಿ ಪರಿವರ್ತಿಸಿ ನಂತರ ಚಿನ್ನ ಶುದ್ಧತೆಯ ಬಗ್ಗೆ ನಕಲಿ ಸೀಲ್ ಹಾಕಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಿಖಿಲ್ (18), ಗೌರವ್ (19), ಗೌರವ್ (18) ಹಾಗೂ ಸುಮೀರ್ ಷೇಕ್ (18) ಬಂಧಿತ ಆರೋಪಿಗಳಾಗಿದ್ದು, ಇವರಿಂದ ನಕಲಿ ಸೀಲು ಹಾಕಲು ಬಳಸುತ್ತಿದ್ದ 1 ಕೆಜಿ 477 ಗ್ರಾಂ ಚಿನ್ನ ಮತ್ತಿತರ ಲೋಹಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಆರೋಪಿಗಳ ವಿರುದ್ಧ ಹಲಸೂರ್ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಡಿ.4ರಂದು ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಣ್ಣ ಲೇನ್ ಕಟ್ಟಡವೊಂದರಲ್ಲಿ ಪರವಾನಗಿ ಇಲ್ಲದೇ ಸರ್ಕಾರಕ್ಕೆ ಮೋಸ ಮಾಡಿ ಅಪಾರ ಪ್ರಮಾಣದ ಚಿನ್ನ ಕರಗಿಸಿ ಬಿಸ್ಕೆಟ್ ಗಳನ್ನಾಗಿ ಮಾಡಿ ಚಿನ್ನದ ಶುದ್ಧತೆಯ ನಕಲಿ ಸೀಲು ಹಾಕಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com