ಖಾಸಗಿ ಕಂಪನಿ ನೌಕರನಿಗೆ ಗನ್ ತೋರಿಸಿ ಹಣ ದರೋಡೆ: ಬೆಂಗಳೂರಿನಲ್ಲಿ ಇಬ್ಬರ ಬಂಧನ

ಕಂಪೆನಿಗೆ ಸೇರಿದ ಹಣ ಸಂಗ್ರಹಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಪಿಸ್ತೂಲು ಮಾದರಿಯ ಲೈಟರ್ ತೋರಿಸಿ ಬೆದರಿಸಿ 79 ಸಾವಿರ ಹಣ ದೋಚಿದ್ದ ಇಬ್ಬರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಂಪೆನಿಗೆ ಸೇರಿದ ಹಣ ಸಂಗ್ರಹಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಪಿಸ್ತೂಲು ಮಾದರಿಯ ಲೈಟರ್ ತೋರಿಸಿ ಬೆದರಿಸಿ 79 ಸಾವಿರ ಹಣ ದೋಚಿದ್ದ ಇಬ್ಬರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ರಾಮನಗರ ಮೂಲದ ರವಿ ಮತ್ತು ಆತನ ಸಂಬಂಧಿ ರಾಜು ಬಂಧಿತ ಆರೋಪಿಗಳು. ಇವರಿಂದ 60 ಸಾವಿರ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲು ಮಾದರಿಯ ಲೈಟರ್ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಡಿ.2 ರಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಕಂಪನಿಗೆ ಸೇರಿದ ಹಣವನ್ನು ರಾಹುಲ್ ವಸೂಲಿ ಮಾಡಿ ಸಂಗ್ರಹಿಸಿಕೊಂಡು ಕೆಂಗೇರಿ ಉಪನಗರದ ಮರಿಯಮ್ಮ ದೇವಾಲಯದ ಬಳಿ ಮತ್ತೊಬ್ಬರಿಂದ ಹಣ ಸಂಗ್ರಹಿಸಲು ಬರುತ್ತಿದ್ದರು. ಈ ವೇಳೆ  ಗನ್ ತೋರಿಸಿ ಬೆದರಿಸಿ ಅವರ ಬಳಿ ಇದ್ದ 79,920ರೂ.ಗಳನ್ನು ಕಸಿದುಕೊಂಡು ಪರಾರಿಯಾಗಿದ್ದನು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕೆಂಗೇರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com